Get Updates
Get notified of breaking news, exclusive insights, and must-see stories!

ಈ ಸಂಖ್ಯೆಗೆ ಕರೆ ಮಾಡಿ 20 ಸಾವಿರ ಲೀಟರ್ ಉಚಿತ ಕುಡಿಯುವ ನೀರು ಗಳಿಸಿ

ಹೈದರಾಬಾದ್, ಜನವರಿ 12: ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆ ಸಂಭ್ರಮ ಮುಗಿದು ಹೊಸ ಆಡಳಿತ ಆರಂಭವಾಗಿದೆ. ಈ ನಡುವೆ ಹೈದರಾಬಾದಿನ ಬಹುದೊಡ್ಡ ಸಮಸ್ಯೆಗೆ ಕೆ ಚಂದ್ರಶೇಖರ್ ರಾವ್ ಅವರ ಸರ್ಕಾರ ಪರಿಹಾರ ಕಂಡುಕೊಂಡಿದೆ. ಕೆಸಿಆರ್ ಪುತ್ರ ನಗರಾಭಿವೃದ್ಧಿ ಖಾತೆ ಸಚಿವ ಕೆ.ಟಿ ರಾಮರಾವ್ ಅವರು ಉಚಿತ ಕುಡಿಯುವ ನೀರು ಯೋಜನೆಗೆ ಮಂಗಳವಾರ ಚಾಲನೆ ನೀಡಿದ್ದಾರೆ.

ಹೈದರಾಬಾದಿಗಳ ಪಾಲಿಗೆ ವರವಾಗಿ ಈ ಯೋಜನೆ ಪರಿಣಮಿಸಲಿದೆ ಎಂದು ಕೆಟಿ ರಾಮರಾವ್ ಹೇಳಿದ್ದಾರೆ. ಹೈದರಾಬಾದ್ ನಿವಾಸಿಗಳು ಇನ್ಮುಂದೆ 20,000 ಲೀಟರ್ ತನಕದ ಕುಡಿಯುವ ನೀರಿಗೆ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ ಉಚಿತವಾಗಿ 20 ಸಾವಿರ ಲೀಟರ್ ಶುದ್ಧ ಕುಡಿಯುವ ನೀರು ಪಡೆದುಕೊಳ್ಳಬಹುದು.

ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಶ್ವಾಸನೆಯಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಉಚಿತವಾಗಿ ಕುಡಿಯುವ ನೀರನ್ನು ಪಡೆಯಲು ಇಷ್ಟಪಡುವ ನಿವಾಸಿಗಳು 155 313 ಸಂಖ್ಯೆಗೆ ಕರೆ ಮಾಡಬಹುದು ಅಥವಾ http://hyderabadwater.gov.in ವೆಬ್ ತಾಣದಲ್ಲಿ ಮನವಿ ಸಲ್ಲಿಸಬಹುದು ಎಂದು ಹೇಳಿದರು.

Hyderabad residents to get Free Drinking Water Upto 20000 Litres

ಹೈದ್ರಾಬಾದ್ ಜಲ ಮಂಡಳಿ ಈಗಾಗಲೇ ಈ ಕುರಿತಂತೆ ಟ್ವೀಟ್ ಮಾಡಿದೆ. ವಾಟರ್ ಮೀಟರ್ ಪಡೆದುಕೊಳ್ಳಲು ನಿವಾಸಿಗಳು ಈ ಸಂಖ್ಯೆಗೆ ಕರೆ ಮಾಡಬಹುದು (ಬಸ್ತಿ ನಿವಾಸಿಗಳನ್ನು ಹೊರತುಪಡಿಸಿ) ಎಂದು ಹೇಳಲಾಗಿದೆ.

Hyderabad residents to get Free Drinking Water Upto 20000 Litres

ದೆಹಲಿ ನಂತರ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಎರಡನೇ ನಗರ ಎಂದು ಹೈದಾರಾಬಾದ್ ಇದರಿಂದ ಗುರುತಿಸಿಕೊಳ್ಳಲಿದೆ. ಪ್ರತಿ ತಿಂಗಳು ಜಲ ಮಂಡಳಿಯಿಂದ ಮೀಟರ್ ರೀಡರ್, 20, 000 ಲೀಟರ್ ಕಳೆದು ಮಿಕ್ಕದ್ದಕ್ಕೆ ಬಿಲ್ ಹಾಕಲಿದ್ದಾರೆ ಎಂದು HMWSSB ಪ್ರಕಟಣೆಯಲ್ಲಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+