ಹೈದರಾಬಾದ್ ರೇಪ್ ಕೇಸ್: ಆರೋಪಿಗಳನ್ನು ವಯಸ್ಕರಂತೆ ವಿಚಾರಣೆಗೆ ಪೊಲೀಸ್ ಮನವಿ
ಹೈದರಾಬಾದ್ ಜೂನ್ 9: ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಾಲಾಪರಾಧಿಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಹೈದರಾಬಾದ್ ಪೊಲೀಸರು ಮನವಿ ಮಾಡಿದ್ದಾರೆ. ಮೇಲ್ಮನವಿಯನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಬಾಲ ನ್ಯಾಯ ಮಂಡಳಿಯ ವಿವೇಚನೆಗೆ ಬಿಟ್ಟಿದ್ದಾಗಿದೆ.
ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಪೊಲೀಸರ ಉದ್ದೇಶವನ್ನು ವಿವರಿಸಿದ್ದಾರೆ. ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿದ್ದು, ಇವರಲ್ಲಿ ನಾಲ್ವರು ಅಪ್ರಾಪ್ತರು. ಇವರೆಲ್ಲರೂ ಪ್ರಭಾವಿ ರಾಜಕೀಯ ಕುಟುಂಬಗಳಿಂದ ಬಂದವರು ಅಥವಾ ಪ್ರಬಲ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಪ್ರಭಾವಿ ರಾಜಕೀಯ ಕುಟುಂಬದ ಆರೋಪಿಗಳು
ಒಮರ್ ಖಾನ್: ಅವರು ರಾಜಕೀಯ ಸಂಪರ್ಕ ಹೊಂದಿರುವ ಶ್ರೀಮಂತ ಕುಟುಂಬಕ್ಕೆ ಸಂಬಂಧಿಸಿರುತ್ತಾರೆ ಎಂದು ಹೇಳಲಾಗುತ್ತದೆ. ಸಾದುದ್ದೀನ್ ಮಲಿಕ್: ಅವರು ಸ್ಥಳೀಯ ಟಿಆರ್‌ಎಸ್ ಮುಖಂಡರ ಮಗನಾಗಿದ್ದಾರೆ.
ಆರೋಪಿಯಾಗಿರುವ ಅಪ್ರಾಪ್ತ ವಯಸ್ಕರು-
*ಟಿಆರ್‌ಎಸ್ ಮುಖಂಡರೊಬ್ಬರ ಪುತ್ರ
*ಜಿಎಚ್‌ಎಂಸಿ ಕಾರ್ಪೊರೇಟರ್ ಪುತ್ರ
*ಸಂಗಾರೆಡ್ಡಿಯ ಟಿಆರ್‌ಎಸ್ ಕಾರ್ಪೊರೇಟರ್ ಪುತ್ರ
*ಎಐಎಂಐಎಂ ಶಾಸಕರ ಪುತ್ರ. ಅವರ ಆಧಾರ್ ವಿವರಗಳ ಪ್ರಕಾರ, ಅವರು ಜುಲೈ 7 ರಂದು 18 ವರ್ಷಕ್ಕೆ ಕಾಲಿಡುತ್ತಾರೆ.

ಅಂದು ನಡೆದಿದ್ದೇನು?
17 ವರ್ಷದ ಹುಡುಗಿ ಮೇ 28 ರಂದು ಪಾರ್ಟಿಗಾಗಿ ಕ್ಲಬ್‌ಗೆ ಹೋಗಿದ್ದಳು ಮತ್ತು ಅಲ್ಲಿ ಒಬ್ಬ ಹುಡುಗನನ್ನು ಭೇಟಿಯಾಗಿದ್ದಳು. ಆಕೆಯನ್ನು ತನ್ನ ಮನೆಗೆ ಬಿಡುವುದಾಗಿ ಭರವಸೆ ನೀಡಿದ ವ್ಯಕ್ತಿ ಮರ್ಸಿಡಿಸ್‌ನಲ್ಲಿ ಅವನ ಸ್ನೇಹಿತರೊಂದಿಗೆ ಕ್ಲಬ್‌ನಿಂದ ಹುಡುಗಿಯನ್ನು ಕರೆದೊಯ್ದಿದ್ದಾನೆ.
ಶೀಘ್ರದಲ್ಲೇ, ಅವರು ಹತ್ತಿರದ ಕೆಫೆಯನ್ನು ತಲುಪಿದರು ಮತ್ತು ಸಂಜೆ 6.30 ರ ಸುಮಾರಿಗೆ ಮರ್ಸಿಡಿಸ್ ಐಷಾರಾಮಿ ಕಾರಿನಿಂದ ಇನ್ನೋವಾಗೆ ಬದಲಾದರು. ನಂತರ ಆರೋಪಿಗಳು ಬಂಜಾರಾ ಹಿಲ್ಸ್‌ನಲ್ಲಿ ನಿಲ್ಲಿಸಿದ್ದ ಇನ್ನೋವಾದಲ್ಲಿ ಬಾಲಕಿಯನ್ನು ರಸ್ತೆ ಸಂಖ್ಯೆ 44 ರ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಈ ಪ್ರದೇಶವು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾಗಿದ್ದು, ಅಲ್ಲಿ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು, ನಟರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ರಾತ್ರಿ 7.30ರ ಸುಮಾರಿಗೆ ಆಕೆಯನ್ನು ಮತ್ತೆ ಪಬ್‌ಗೆ ಬಿಡಲಾಗಿದೆ.

ಮರ್ಸಿಡಿಸ್ ತೆಲಂಗಾಣ ಶಾಸಕರಿಗೆ ಸೇರಿದ ಕಾರು
ಅತ್ಯಾಚಾರ ನಡೆದ ಕಾರು ಸರ್ಕಾರಿ ವಾಹನ ಎಂದು ನೋಂದಣಿಯಾಗಿದೆ. ಇದನ್ನು ವಕ್ಫ್ ಮಂಡಳಿಯ ಉನ್ನತ ಕಾರ್ಯನಿರ್ವಾಹಕರೊಬ್ಬರು ಬಳಸುತ್ತಿದ್ದರು. ಮೂಲಗಳ ಪ್ರಕಾರ, ಆಪಾದಿತ ಸಾಮೂಹಿಕ ಅತ್ಯಾಚಾರದಲ್ಲಿ ಬಳಸಲಾದ ಮರ್ಸಿಡಿಸ್ ತೆಲಂಗಾಣ ಶಾಸಕರಿಗೆ ಸೇರಿದೆ. ಆದರೆ, ಕೃತ್ಯ ನಡೆದಾಗ ಆರೋಪಿ ಕಾರಿನಲ್ಲಿ ಇರಲಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. ಮರ್ಸಿಡಿಸ್ ಮತ್ತು ಇನ್ನೋವಾ ಎರಡನ್ನೂ ಅಪ್ರಾಪ್ತ ವಯಸ್ಕರು ಓಡಿಸುತ್ತಿದ್ದರು.

ಪಾರ್ಟಿ ಟಿಕೆಟ್ ಮಾರಾಟ
ಬೆಂಗಳೂರಿನ 17 ವರ್ಷದ ವಿದ್ಯಾರ್ಥಿಯೊಬ್ಬ ಮಾರ್ಚ್ 28 ರಂದು ಹೈದರಾಬಾದ್‌ನಲ್ಲಿ ಪಾರ್ಟಿ ಮಾಡಲು ಯೋಜಿಸುತ್ತಿದ್ದಾನೆ. ಇದಕ್ಕಾಗಿ ತನ್ನ ಸ್ನೇಹಿತರೊಂದಿಗೆ ಪಬ್ ಹುಡುಕುತ್ತಿದ್ದಾನೆ. ನಂತರ ಅವರು ಉಸ್ಮಾನ್ ಅಲಿ ಖಾನ್ ಅವರೊಂದಿಗೆ ಪಬ್ ಅನ್ನು ಬುಕ್ ಮಾಡಿದ್ದಾರೆ. ಪ್ರತಿ ವ್ಯಕ್ತಿಗೆ 900 ರೂಪಾಯಿ ಟಿಕೆಟ್ ದರ ನಿಗಧಿಯಾಗಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿ ಇನ್ಸ್ಟಾ ಮೂಲಕ ಹಲವು ವಿದ್ಯಾರ್ಥಿಗಳಿಗೆ 1300 ರೂಪಾಯಿಗೆ 900 ರೂಪಾಯಿ ಟಿಕೆಟ್ ಮಾರಾಟ ಮಾಡಿದ್ದಾನೆ.
100ಕ್ಕೂ ಹೆಚ್ಚು ಮಂದಿ ಈ ಟಿಕೆಟ್ ಖರೀದಿಸಿದ್ದಾರೆ. ಮೇ 28 ರಂದು ಮಧ್ಯಾಹ್ನ 1 ಗಂಟೆಗೆ ಪಾರ್ಟಿಯನ್ನು ನಿಗದಿಪಡಿಸಲಾಗಿದೆ. ಅದಕ್ಕಾಗಿ ಆ ವಿದ್ಯಾರ್ಥಿ ಮತ್ತು ಇನ್ನೊಬ್ಬ ವಿದ್ಯಾರ್ಥಿ (ಅವನ ಗೆಳತಿ)ಯೊಂದಿಗೆ ಬಂದಿದ್ದಾನೆ. ಈ ವೇಳೆ ಪಬ್‌ನೊಳಗಿದ್ದ ವಿದ್ಯಾರ್ಥಿ ಹಾಗೂ 19 ವರ್ಷದ ಸಾದುದ್ದೀನ್ ಮಲಿಕ್ ಎಂಬುವರು ವಿದ್ಯಾರ್ಥಿನಿಯನ್ನು ನಿಂದಿಸಿದ್ದಾರೆ. ವಿದ್ಯಾರ್ಥಿನಿ ಜೊತೆಗೆ ಬಂದಿದ್ದ ಹುಡುಗನು ಪಾರ್ಟಿ ಮಧ್ಯೆ ತೆರಳಿದ್ದಾನೆ. ಬಳಿಕ ಬೇರೆಯವನ ಸಹಾಯ ಹಾಗೂ ಭರವಸೆಯಿಂದ ಹುಡುಗೆ ಮನೆಗೆ ಡ್ರಾಪ್ ತೆಗೆದುಕೊಂಡಿದ್ದಾಳೆ. ಆದರೆ ಅತ್ಯಾಚಾರದ ವೇಳೆ ಎಲ್ಲರೂ ಒಂದೇ ಗುಂಪಿನ ಹುಡುಗರು ಎಂದು ತಿಳಿದು ಬಂದಿದೆ. ಸಂತ್ರಸ್ತೆಯ ಪೋಷಕರು ಸಂತ್ರಸ್ತೆಯ ಮೈ ಮೇಲಿನ ಗಾಯಗಳನ್ನು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications