ಈ ಬಾಲಕಿಗೆ ಬೆವರಿನ ಬದಲು ದೇಹದಲ್ಲೆಲ್ಲ ರಕ್ತ ಒಸರುತ್ತದೆ!

ಹೈದರಾಬಾದ್, ಜುಲೈ 8: ಈ ಬಾಲಕಿಯ ಕಣ್ಣು, ಮೂಗು, ಬಾಯಿ ಮತ್ತು ದೇಹದ ಹಲವು ಅಂಗಗಳಿಂದ ರಕ್ತ ಒಸರುತ್ತದೆ. ಬೆವರಿನ ಬದಲು ದೇಹದಲ್ಲಿ ರಕ್ತ ಸುರಿಯುತ್ತದೆ.

ಹೌದು, ವೈದ್ಯಕೀಯ ಜಗತ್ತಿಗೇ ಸವಾಲೆನ್ನಿಸಿದ ಇಂಥ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿರುವುದು ಹೈದರಾಬಾದಿನ ಮೂರು ವರ್ಷದ ಬಾಲಕಿ ಅಹಾನಾ ಅಫ್ಜಲ್!

Hyderabad girl suffering from a rare disease, Hematidrosis

16 ತಿಂಗಳ ಹಿಂದೆ ಮೊದಲ ಬಾರಿಗೆ ಈಕೆಯ ಮೂಗಿನಲ್ಲಿ ರಕ್ತ ಒಸರತೊಡಗಿತ್ತು. ಇದರಿಂದ ಭಯಗೊಂಡ ತಂದೆ ಮೊಹಮ್ಮದ್ ಅಫ್ಜಲ್ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ 'ಇದು ಅತಿಯಾದ ಜ್ವರದಿಂದ ಆಗಿರುವ ಸಮಸ್ಯೆ' ಎಂದು ವೈದ್ಯರು ಹೇಳಿದ್ದರು. ಆದರೆ ದಿನಕಳೆದಂತೆ ರಕ್ತ ಕಣ್ಣು, ಬಾಯಿ, ಮೂಗು ಸೇರಿದಂತೆ ದೇಹದ ಹಲವು ಭಾಗಗಳಿಂದ ಹರಿಯುತ್ತಿತ್ತು.

ಮತ್ತೆ ವೈದ್ಯರ ಬಳಿ ಕರೆದೊಯ್ದಾಗ, 'ಇದೊಂದು ಅಪರೂಪದ ಕಾಯಿಲೆ. ಇದಕ್ಕೆ ಹೆಮಾಟಿಡ್ರೊಸಿಸ್ ಎನ್ನುತ್ತಾರೆ. ಈ ಕಾಯಿಲೆಯಲ್ಲಿ ಮನುಷ್ಯ ಬೆವರಿನಂತೇ, ರಕ್ತ ಸುರಿಸುತ್ತಾನೆ' ಎಂಬ ವಿಷಯ ತಿಳಿದುಬಂತು.

ಈ ಕಾಯಿಲೆಯಿಂದಾಗಿ ದೇಹದ ಆರೋಗ್ಯ ತೀರಾ ಹದಗೆಡುತ್ತದೆ, ಮಾತ್ರವಲ್ಲ ಈ ರೋಗವನ್ನು ಸಂಪೂರ್ಣ ಗುಣಪಡಿಸುವುದಕ್ಕೆ ಸಾಧ್ಯವಿಲ್ಲ್ ಎಂಬುದು ತಿಳಿಯುತ್ತಿದ್ದಂತೆಯೇ ತಂದೆ-ತಾಯಿ ದಿಕ್ಕು ತೋಚದಂತಾಗಿದ್ದಾರೆ.

ಆಕೆಯ ಈ ರೋಗ ಹತೋಟಿಗೆ ಬರುವುದಕ್ಕೆ ಆಕೆಗೆ ದುಬಾರಿ ಚಿಕಿತ್ಸೆ ನೀಡಬೇಕು. ಆದರೆ ಅಷ್ಟು ಹಣ ಈ ತಂದೆ ತಾಯಿಯ ಬಳಿ ಇಲ್ಲ.
ನನ್ನ ಮಗಳನ್ನು ಉಳಿಸಿಕೊಡಿ ಎಂದು ವೈದ್ಯರನ್ನು ಅಂಗಲಾಚುವ ದಂಪತಿಗಳನ್ನು ನೋಡಿದರೆ ಕರುಳು ಕಿವುಚುತ್ತದೆ. ಮಗಳ ಚಿಕಿತ್ತ್ಸೆಗಾಗಿ ಕೇಂದ್ರ ಮ್ತತು ರಾಜ್ಯ ಸರ್ಕಾರದ ನೆರವನ್ನು ದಂಪತಿ ನಿರೀಕ್ಷಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+