ಹೈದರಾಬಾದ್; ಗೋಕುಲ್ ಚಾಟ್ ಮಾಲೀಕನಿಗೆ ಕೊರೊನಾ ಸೋಂಕು
ಹೈದರಾಬಾದ್, ಜೂನ್ 16 : ಹೈದರಾಬಾದ್ ನಗರದ ಪ್ರಸಿದ್ಧ ಗೋಕುಲ್ ಚಾಟ್ ಅಂಗಡಿ ಮಾಲೀಕನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ತಾತ್ಕಾಲಿಕವಾಗಿ ಅಂಗಡಿಗೆ ಬೀಗ ಹಾಕಲಾಗಿದೆ.
Recommended Video
ಗೋಕುಲ್ ಚಾಟ್‌ನ ಮಾಲೀಕನನ್ನು ಬಂಜಾರಾ ಹಿಲ್ಸ್‌ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 72 ವರ್ಷದ ಮಾಲೀಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರೀಕ್ಷೆ ವರದಿಯೂ ಮಂಗಳವಾರ ಪಾಸಿಟೀವ್ ಬಂದಿದೆ ಎಂದು ಸುಲ್ತಾನ್ ಬಜಾರ್ ಪೊಲೀಸರು ಹೇಳಿದ್ದಾರೆ.
ಲಾಕ್ ಡೌನ್ ಬಳಿಕ ಬಾಗಿಲು ಹಾಕಲಾಗಿದ್ದ ಗೋಕುಲ್ ಚಾಟ್ ಜೂನ್ 8ರಂದು ಬಾಗಿಲು ತೆರೆದಿತ್ತು. ಈಗ ಮಾಲೀಕನಿಗೆ ಸೋಂಕು ತಗುಲಿರುವುದು ಖಚಿತವಾದ ಹಿನ್ನಲೆಯಲ್ಲಿ ಪುನಃ ಬಾಗಿಲು ಮುಚ್ಚಲಾಗಿದೆ.

ಮಾಲೀಕ ಅಂಗಡಿಗೆ ಬಂದಿರಲಿಲ್ಲ. ಸುಲ್ತಾನ್ ಬಜಾರ್‌ನ ಜೈನ ಮಂದಿರದ ಮನೆಯಲ್ಲಿಯೇ ಇದ್ದ. ಮುಂಜಾಗ್ರತಾ ಕ್ರಮವಾಗಿ ಅಂಗಡಿ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳು ಗೋಕುಲ್ ಚಾಟ್ ಮಾಲೀಕನ ಮನಗೆ ಭೇಟಿ ನೀಡಿದ್ದು 20 ಕುಟುಂಬ ಸದಸ್ಯರ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಗೋಕುಲ್ ಚಾಟ್ ಹೈದರಾಬಾದ್‌ನ ಪ್ರಸಿದ್ಧ ಬೀದಿ ಬದಿಯ ಅಂಗಡಿ. 2007ರಲ್ಲಿ ನಗರದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಾಗ ಇಲ್ಲಿಯೂ ಬಾಂಬ್ ಸ್ಫೋಟವಾಗಿತ್ತು. ಲುಂಬಿನಿ ಪಾರ್ಕ್ ಮತ್ತು ಗೋಕುಲ್ ಚಾಟ್‌ನಲ್ಲಿ ನಡೆದ ಸ್ಫೋಟದಲ್ಲಿ 42 ಜನರು ಮೃತಪಟ್ಟಿದ್ದರು.
ತೆಲಂಗಾಣ ರಾಜ್ಯದಲ್ಲಿ ಕೋವಿಡ್ - 19 ಸೋಂಕಿತರ ಸಂಖ್ಯೆ 5193. ಹೈದರಾಬಾದ್ ನಗರವೊಂದರಲ್ಲಿಯೇ 3385 ಸೋಂಕಿತರು ಇದ್ದಾರೆ. ರಾಜ್ಯದಲ್ಲಿ ಇದುವರೆಗೂ ಸೋಂಕಿನಿಂದಾಗಿ 187 ಜನರು ಮೃತಪಟ್ಟಿದ್ದಾರೆ.












Click it and Unblock the Notifications