ಇನ್ಮೇಲೆ ಎಮಿರೇಟ್ಸ್ ಎಕಾನಮಿ ಕ್ಲಾಸ್ ನಲ್ಲಿ ಹಿಂದು ಆಹಾರ ಲಭ್ಯವಿರೋಲ್ಲ!
ಹೈದರಾಬಾದ್, ಜುಲೈ 03: ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಇನ್ನು ಮೇಲೆ ತನ್ನ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ 'ಹಿಂದು ಸಸ್ಯಾಹಾರ'ವನ್ನು ಪೂರೈಸುವುದಿಲ್ಲ ಎಂದಿದೆ.
ಪ್ರಯಾಣಿಕರು ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ 'ಹಿಂದು ನಾನ್ ವೆಜ್ ಫುಡ್' ಎಂದು ಆಯ್ಕೆ ಮಾಡಬಹುದಾದ ಅವಕಾಶವನ್ನು ಇಷ್ಟು ದಿನ ಕಲ್ಪಿಸಲಾಗಿತ್ತು. ಆದರೆ ಇನ್ನು ಮೇಲೆ ಎಕಾನಮಿ ಕ್ಲಾಸ್ ಪ್ರಯಾಣಿಕರು ಈ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.
ಆದರೆ ಬಿಸಿನೆಸ್ ಕ್ಲಾಸ್ ಮತ್ತು ಫಸ್ಟ್ ಕ್ಲಾಸ್ ನಲ್ಲಿ ಪ್ರಯಾಣಿಸುವವರಿಗೆ ಈ ಆಹಾರ ಲಭ್ಯವಿರುತ್ತದೆ.

ಈ ಕುರಿತು ಎಮಿರೇಟ್ಸ್ ನ ಹಲವು ಗ್ರಾಹಕರು ಪ್ರತಿಕ್ರಿಯೆ ನೀಡಿದ್ದು, ಎಮಿರೇಟ್ಸ್ ನ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಎಮಿರೇಟ್ಸ್ ತಿಳಿಸಿಲ್ಲ.












Click it and Unblock the Notifications