ಡಾಕ್ಟರ್ ನ ಶೂಟ್ ಮಾಡಿ, ಸೂಸೈಡ್ ಮಾಡ್ಕೊಂಡ ಡಾಕ್ಟರ್
ಹೈದರಾಬಾದ್, ಫೆ. 10: ಪಾಲುದಾರಿಕೆ ಮೇಲೆ ನಡೆಸುತ್ತಿದ್ದ ಆಸ್ಪತ್ರೆಯ ವಿಷಯವಾಗಿ ಇಬ್ಬರು ವೈದ್ಯರು ಕಿತ್ತಾಡಿಕೊಂಡು ಒಬ್ಬ ವೈದ್ಯರ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಸಹದ್ಯೋಗಿಯನ್ನು ಶೂಟ್ ಮಾಡಿ ಡಾಕ್ಟರ್ ಒಬ್ಬರು ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಾ.ಶಶಿಕುಮಾರ್, ಡಾ.ಉದಯಕುಮಾರ್ ಹಾಗೂ ಡಾ. ಸಾಯಿಕುಮಾರ್ ಮೂವರು 15 ಕೋಟಿ ರೂಪಾಯಿ ಬಂಡವಾಳ ಹಾಕಿ ಪಾಲುದಾರಿಕೆ ಮೇಲೆ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದರು. ಈ ಪೈಕಿ ಶಶಿ ಕುಮಾರ್ ಹಾಗೂ ಉದಯ್ ಕುಮಾರ್ ಅವರ ಮೇಲೆ 0.32 ಎಂಎಂ ರಿವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದರು.
ಹೈದ್ರಾಬಾದ್‌ನಲ್ಲಿ ಶೂಟ್ ಮಾಡಿದ ಮೇಲೆ ರಂಗಾರೆಡ್ಡಿ ಜಿಲ್ಲೆಯ ಮೊಯಿನಬಾದ್ ಮಂಡಲದ ನಕ್ಕಲಪಲ್ಲಿಯ ತೋಟದ ಮನೆಗೆ ಬಂದ 40 ವರ್ಷದ ವೈದ್ಯ ಶಶಿಕುಮಾರ್ ಅವರು ಅದೇ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಸ್ಪತ್ರೆ ಪಾಲುದಾರಿಕೆ, ನಿರ್ವಹಣೆ, ಖರ್ಚು ವೆಚ್ಚ ವಿಷಯದಲ್ಲಿ ಮೂವರಲ್ಲಿ ಆಗಾಗ ಜಗಳಗಳಾಗುತ್ತಿತ್ತು.

ಹೈದರಾಬಾದಿನ ಹೊಟೇಲ್ ಒಂದರಲ್ಲಿ ಡಿನ್ನರ್‌ನಲ್ಲಿ ಮುಗಿಸಿಕೊಂಡು ಮಾತಿಗಿಳಿದ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಡಾ.ಶಶಿಕುಮಾರ್ ಅವರು ಡಾ. ಉದಯಕುಮಾರ್‌ನತ್ತ ಗುಂಡು ಹಾರಿಸಿದ್ದಾರೆ. ಕಿವಿಯನ್ನು ಸವರಿಕೊಂಡು ಗುಂಡು ಹಾರಿ ಹೋಗಿದೆ. ಗಾಬರಿಗೊಂಡ ಶಶಿ ಕುಮಾರ್ ತಮ್ಮ ತೋಟದ ಮನೆಗೆ ಅಲ್ಲಿಂದ ಹೋಗಿದ್ದಾರೆ. ಶಶಿಯನ್ನು ಹುಡುಕಿಕೊಂಡು ಬಂದ ಪೊಲೀಸರಿಗೆ ಶಶಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಸದ್ಯ ಗಾಯಗೊಂಡ ಉದಯ್‌ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾ.ಶಶಿ ಕುಮಾರ್ ತನ್ನ ಪತ್ನಿಗೆ ಕೊನೆ ಬಾರಿ ಕರೆ ಮಾಡಿ, ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಂತರ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಡಾ. ಸಾಯಿಕುಮಾರ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಡಾ.ಉದಯಕುಮಾರ್ ಆಸ್ಪತ್ರೆಯ ಸಿಇಓ ಆಗಿದ್ದು, 2 ಕೋಟಿ ರು ಬಂಡವಾಳ ಹೂಡಿದ್ದರು. ಸಾಯಿಕುಮಾರ್ ಎಂಡಿ ಆಗಿದ್ದು, 2.9 ಕೋಟಿ ರು ಹೂಡಿಕೆ ಮಾಡಿದ್ದರು. ಸರ್ಜನ್ ಶಶಿಕುಮಾರ್ ಚೈತನ್ಯಪುರಿಯಲ್ಲಿ ಮತ್ತೊಂದು ಆಸ್ಪತ್ರೆ ಹೊಂದಿದ್ದ ಕಾರಣ 75 ಲಕ್ಷ ರು ಮಾತ್ರ ಕಡಿಮೆ ಬಂಡವಾಳ ಹಾಕಿದ್ದರು. ಶಶಿಗೆ ಯಾವುದೇ ಅಧಿಕಾರ ಸಿಕ್ಕಿರಲಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಡಾ.ಶಶಿಕುಮಾರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications