ಹೈದರಾಬಾದಿನ ರೂಪದರ್ಶಿ ರೋಹಿತ್ ಈಗ ಮಿಸ್ಟರ್ ವರ್ಲ್ಡ್

Posted By:
Subscribe to Oneindia Kannada

ಲಂಡನ್, ಜುಲೈ 20 : ಹೈದರಾಬಾದ್ ಮೂಲದ ರೂಪದರ್ಶಿ ರೋಹಿತ್ ಖಂಡೇಲ್ವಾಲ್ ಅವರು 'ಮಿಸ್ಟರ್ ವರ್ಲ್ಡ್ 2016' ಸ್ಪರ್ಧೆ ಗೆದ್ದಿದ್ದಾರೆ. ವಿಶ್ವದ ಹಲವೆಡೆಗಳಿಂದ ಬಂದಿದ್ದ 46 ಕ್ಕೂ ಅಧಿಕ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿ.ವರ್ಲ್ಡ್ ಕಿರೀಟ ಧರಿಸಿದ್ದಾರೆ.

26 ವರ್ಷದ ರೋಹಿತ್ ಖಂಡೇಲ್ವಾಲ್ ಅವರು 'ಮಿಸ್ಟರ್ ವರ್ಲ್ಡ್ 2016' ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಹಾಗೂ ಏಷ್ಯಾದ ಮೊದಲ ನಟ ಎನ್ನುವ ಕೀರ್ತಿ ಗಳಿಸಿದ್ದಾರೆ.

Hyderabad boy Rohit Khandelwal crowned Mr World 2016

ಲಂಡನ್ನಿನ ಸೌಥ್ ಪೋರ್ಟ್ ನಲ್ಲಿ ನಡೆದ ಫೈನಲ್ ನಲ್ಲಿ ಜುಲೈ 19ರಂದು ಮಿ. ವರ್ಲ್ಡ್ ಎನಿಸಿಕೊಂಡರು ನಿವೇದಿತಾ ಸಬೂ ಅವರ ವಿನ್ಯಾದ ಉಡುಗೆ ತೊಟ್ಟಿದ್ದ ರೋಹಿತ್ ಅವರು ಈ ಪ್ರಶಸ್ತಿಯೊಂದಿಗೆ 50,000 ಯುಎಸ್ ಡಾಲರ್ ಮೊತ್ತವನ್ನು ಜೇಬಿಗಿಳಿಸಿಕೊಂಡಿದ್ದಾರೆ.

ಮಿ.ವರ್ಲ್ಡ್ 2016 ಗೆದ್ದಿರುವುದು ಬಹಳ ಖುಷಿ ಕೊಟ್ಟಿದೆ. ಜತೆಗೆ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲವಿಲ್ಲದೇ ಪ್ರತಿಷ್ಠಿತ ಪ್ರಶಸ್ತಿಯನ್ನು ನನ್ನದಾಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಂತದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರುತ್ತದೆಂದು ಖಂಡಿತಾ ಭಾವಿಸಿರಲಿಲ್ಲ ಎಂದು ಪ್ರಶಸ್ತಿ ಗೆದ್ದ ಖುಷಿಯಲ್ಲಿ ರೋಹಿತ್ ಹೇಳಿದ್ದಾರೆ.

ಪೋರ್ಟೋರಿಕೋದ ಫರ್ನಾಂಡೋ ಆಲ್ವರೆಜ್(21) ಎರಡನೇ ಸ್ಥಾನ ಹಾಗೂ ಮೆಕ್ಸಿಕೋದ ಆಲ್ಡ್ ಎಸ್ಪಾರಾಮಿರೇಜ್ (26)ಮೂರನೆ ಸ್ಥಾನ ಗಳಿಸಿದರು. ರೋಹಿತ್ ಅವರು ಮಿ. ವರ್ಲ್ಡ್ ಜತೆಗೆ ಮಿ. ಮಲ್ಟಿಮೀಡಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rohit Khandelwal has become the first Indian to win the coveted Mr World title at the grand finale of the 2016 competition in the UK, defeating 46 contestants from across the globe.
Please Wait while comments are loading...