ಹೈದರಾಬಾದ್ ನಲ್ಲಿ ಭಾರೀ ಮಳೆಗೆ 3 ಬಲಿ, ಶಾಲೆ-ಕಾಲೇಜಿಗೆ ರಜೆ
ಹೈದರಾಬಾದ್, ಅಕ್ಟೋಬರ್ 3: ಬೆಂಗಳೂರಿನ ನಂತರ ಹೈದರಾಬಾದ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸೋಮವಾರ ಸಂಜೆಯಿಂದ ನಿರಂತರವಾಗಿ ಸುರಿದ ಮಳೆಗೆ ಮೂವರು ಅಸುನೀಗಿದ್ದರೆ, ರಸ್ತೆಗಳು ಹಾಗೂ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿರುವ ಹಿನ್ನಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸೋಮವಾರ ಸಂಜೆ ಗಂಟೆ 4.30 ರಿಂದ 8.30ರವರೆಗೆ 67.6 ಮಿಲಿಮೀಟರ್ ಮಳೆ ಹೈದರಾಬಾದ್ ನಲ್ಲಿ ಸುರಿದಿದ್ದು 4 ವರ್ಷ ಬಾಲಕ ಸೇರಿ 3 ಜನರನ್ನು ಬಲಿ ಪಡೆದಿದೆ.

ನಾಯ್ಡು ನಗರದಲ್ಲಿ 4 ವರ್ಷದ ಮಗು ಮತ್ತು ತಂದೆ ಗೋಡೆ ಕುಸಿತದಡಿ ಸಿಲುಕಿ ಸಾವನ್ನಪ್ಪಿದ್ದಾರೆ. 35 ವರ್ಷದ ಇನ್ನೋರ್ವ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಹುಸೈನಿಅಲಮ್ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ.
#WATCH: Car stuck due to massive flooding following incessant rainfall in Hyderabad; schools & colleges ordered to remain shut today. pic.twitter.com/MLZw2OqHc5
— ANI (@ANI) October 3, 2017
ಹೈದರಾಬಾದ್ ನ ಹಲವು ಕಡೆಗಳಲ್ಲಿ ಮಳೆಗೆ ಮರ ಬಿದ್ದಿದ್ದರೆ, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು ಸಂಚಾರಕ್ಕೆ ತೊಡಕಾಗಿದೆ.

ಮಳೆಯ ರಭಸಕ್ಕೆ ಮುತ್ತಿನ ನಗರಿ ಹೈದರಾಬಾದ್ ಜನಜೀವನ ಅಸ್ತವ್ಯಸ್ಥವಾಗಿದ್ದು ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು, ಅಗ್ನಿ ಶಾಮಕ ದಳದವರು ಶ್ರಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಹೈದರಾಬಾದ್ ನಗರದ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.












Click it and Unblock the Notifications