ಹರಿಕೃಷ್ಣ ಚಾಲನೆ ಮಾಡುವಾಗ ಅಪಘಾತವಾಗಿದ್ದು ಆಪ್ತರು ನಂಬಲ್ಲ, ಏಕೆ?
Recommended Video

ಹೈದರಾಬಾದ್, ಅಗಸ್ಟ್ 30: ನಟ-ರಾಜಕಾರಣಿಯಾಗಿದ್ದ ಹರಿಕೃಷ್ಣ್ ತಮ್ಮ ಕಾರನ್ನು ಚಾಲನೆ ಮಾಡುವಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು ಎಂಬುದನ್ನು ಅವರ ಬಗ್ಗೆ ತಿಳಿದಿರುವ ಯಾರಿಗೂ ನಂಬಲಾಗುತ್ತಿಲ್ಲ. ಏಕೆಂದರೆ ಅವರು ಅದ್ಭುತವಾದ ಚಾಲಕ ಎಂಬುದು ಎಲ್ಲರ ಅಭಿಮತ.
ತಮ್ಮ ತಂದೆ ಎನ್.ಟಿ.ರಾಮಾರಾವ್ 'ಚೈತನ್ಯ ರಥ'ವನ್ನು ಇಡೀ ಆಂಧ್ರದಾದ್ಯಂತ ಚಾಲನೆ ಮಾಡಿದ್ದು ಇದೇ ಹರಿಕೃಷ್ಣ. ಆದರೆ ನೆಲ್ಲೂರು ಜಿಲ್ಲೆಗೆ ಮದುವೆಯೊಂದಕ್ಕೆ ತೆರಳುವಾಗ ಹರಿಕೃಷ್ಣ ಬುಧವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹರಿಕೃಷ್ಣ ಬಾಲ ನಟನಾಗಿಯೇ ಖ್ಯಾತಿ ಪಡೆದವರು. ತೆಲುಗು ದೇಶಂ ಪಕ್ಷದ ವಲಯದಲ್ಲಿ ಎನ್.ಟಿ.ಆರ್ 'ಸಾರಥಿ' ಅಂತಲೇ ಹೆಸರಾದವರು. ಟಿಡಿಪಿ ಸ್ಥಾಪನೆ ಮಾಡಿ, ಒಂಬತ್ತು ತಿಂಗಳಲ್ಲೇ ಎನ್ ಟಿಆರ್ ಪಕ್ಷ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿತು. ಅದಕ್ಕೂ ಮುನ್ನ ಇಡೀ ರಾಜ್ಯದಲ್ಲಿ ನಡೆಸಿದ ರಥಯಾತ್ರೆಗೆ ಚಾಲಕನಾಗಿ ಅವರು ಆಯ್ದುಕೊಂಡದ್ದು ತಮ್ಮ ಮಗ ಹರಿಕೃಷ್ಣರನ್ನೇ.

ಷೆವರ್ಲೆ ಕಂಪೆನಿಯ ವ್ಯಾನ್ ವೊಂದನ್ನು ರಥದಂತೆ ಮಾರ್ಪಾಟು ಮಾಡಲಾಗಿತ್ತು. ಒಂಬತ್ತು ತಿಂಗಳ ಅವಧಿಯಲ್ಲಿ ಆ ವ್ಯಾನ್ ನಲ್ಲಿ 75 ಸಾವಿರ ಕಿಲೋಮೀಟರ್ ಸಂಚಾರ ಮಾಡಿದ್ದರು. "ಅವರು ಸಾಮಾನ್ಯ ಚಾಲಕರಾಗಿರಲಿಲ್ಲ. ವಿಶೇಷವಾದ ಕೌಶಲ ಅವರಿಗಿತ್ತು. ಎನ್ ಟಿಆರ್ ಅವರಿಗೆ ತಮ್ಮ ಮಗನ ಬಗ್ಗೆ ಅಪಾರ ನಂಬಿಕೆ ಇತ್ತು. ಆದ್ದರಿಂದ ತಮ್ಮ ರಥಯಾತ್ರೆ ಸಾರಥಿಯಾಗಿ ಹರಿಕೃಷ್ಣರನ್ನು ಆಯ್ಕೆ ಮಾಡಿಕೊಂಡಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ನಟ ಬಾಬು ಮೋಹನ್.

ಹರಿಕೃಷ್ಣ ಅವರಿಗೆ ಸಂಬಂಧಿಕರು, ಸ್ನೇಹಿತರು ಎಷ್ಟೇ ಹೇಳಿದರೂ ಕಾರು ಚಾಲನೆಗೆ ಅಂತ ಯಾರನ್ನೂ ನೇಮಿಸಿಕೊಂಡಿರಲಿಲ್ಲ. ತಾವೇ ಕಾರು ಚಾಲನೆ ಮಾಡಬೇಕು ಎಂದು ಯಾರನ್ನೂ ನೇಮಿಸಿಕೊಂಡಿರಲಿಲ್ಲ.












Click it and Unblock the Notifications