• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ದಕ್ಷಿಣ ಭಾರತ ಕೇಸರೀಕರಣವಾಗಲಿದೆ: ತೇಜಸ್ವಿ ಸೂರ್ಯ

|
Google Oneindia Kannada News

ಹೈದರಾಬಾದ್, ನವೆಂಬರ್ 24: ಮುಂದಿನ ತಿಂಗಳು ನಡೆಯಲಿರುವ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯು ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮೆಟ್ಟಿಲಾಗಲಿದೆ ಎಂದು ಬಿಜೆಪಿ ಸಂಸದ ಮತ್ತು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

'ನಾವು ಈ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ. ನಾವು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ. ನಾವು ತಮಿಳುನಾಡಿನಲ್ಲಿಯೂ ಗೆಲ್ಲಲಿದ್ದೇವೆ. ನಾವು ಕೇರಳವನ್ನು ಸಹ ಜಯಿಸಲಿದ್ದೇವೆ. ಇಡೀ ದಕ್ಷಿಣ ಭಾರತ ಕೇಸರೀಕರಣಗೊಳ್ಳಲಿದೆ' ಎಂದಿದ್ದಾರೆ.

GHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯGHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯ

ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಗೂ (ಜಿಎಚ್‌ಎಂಸಿ) ಮುನ್ನ ಹೈದರಾಬಾದ್‌ಗೆ ಭೇಟಿ ನೀಡಿರುವ ತೇಜಸ್ವಿ ಸೂರ್ಯ, ಅಲ್ಲಿನ ಕನ್ನಡ ಸಂಘದಲ್ಲಿ ಮಾತನಾಡಿದರು. ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಜನರ ನಡುವೆ ಸಾಂಸ್ಕೃತಿಕ ಬಾಂಧವ್ಯ ಇದೆ ಎಂದು ಹೇಳಿದ್ದಾರೆ.

ಡೆಲ್ಲಿಯ ಟೂರಿಸ್ಟ್‌ಗಳಿಂದ ದೂರ ಇರಿ: ಸಚಿವ ಕೆಟಿ ರಾಮರಾವ್ಡೆಲ್ಲಿಯ ಟೂರಿಸ್ಟ್‌ಗಳಿಂದ ದೂರ ಇರಿ: ಸಚಿವ ಕೆಟಿ ರಾಮರಾವ್

ಡಿಸೆಂಬರ್ 1ರಂದು ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್‌ಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 4ರ ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ. ಮುಂದೆ ಓದಿ.

ಸಾಂಸ್ಕೃತಿಕ, ಭಾಷೆ ಬಾಂಧವ್ಯ

ಸಾಂಸ್ಕೃತಿಕ, ಭಾಷೆ ಬಾಂಧವ್ಯ

'ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಜನರ ಮಧ್ಯೆ ಸಾಂಸ್ಕೃತಿಕ ಬಾಂಧವ್ಯ ಇದೆ. ನಮ್ಮ ಭಾಷೆ ಕನ್ನಡ ಮತ್ತು ತೆಲುಗು ಒಂದೇ ರೀತಿಯ ವ್ಯಾಕರಣಗಳನ್ನು ಹೊಂದಿದೆ. ಈ ರಾಜ್ಯಗಳ ಜನರು ಒಂದು ಗುಂಪಾಗಿ ದೇಶದ ಸೇವೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾವಿಸಿದ್ದೇನೆ' ಎಂದಿದ್ದಾರೆ.

ಬಿಜೆಪಿ ಮಾತ್ರ ಪರ್ಯಾಯ

ಬಿಜೆಪಿ ಮಾತ್ರ ಪರ್ಯಾಯ

'ಬಿಜೆಪಿಗೆ ಮತ ಹಾಕುವುದು ಎಂದರೆ ವಿಚಾರವೊಂದಕ್ಕೆ ಮತ ಹಾಕಿದಂತೆ. ಪ್ರಜಾಪ್ರಭುತ್ವ ಎನ್ನುವುದು ಜನರ ವ್ಯವಸ್ಥೆ, ಜನರಿಂದ ಜನರಿಗಾಗಿ ಇರುವುದು. ತೆಲಂಗಾಣದಲ್ಲಿ ಅದರ ವ್ಯಾಖ್ಯಾನ ಬದಲಾಗಿದೆ. ಇಲ್ಲಿ ಕುಟುಂಬವು, ಕುಟುಂಬದಿಂದ ಮತ್ತು ಕುಟುಂಬಕ್ಕೋಸ್ಕರ ಇರುವುದು ಪ್ರಜಾಪ್ರಭುತ್ವ. ಇಲ್ಲಿ ಬಿಜೆಪಿ ಮಾತ್ರವೇ ಪರ್ಯಾಯವನ್ನು ನೀಡಬಲ್ಲದು' ಎಂದು ಹೇಳಿದ್ದಾರೆ.

ತೇಜಸ್ವಿ ವಿರುದ್ಧ ಟೀಕಾಪ್ರಹಾರ

ತೇಜಸ್ವಿ ವಿರುದ್ಧ ಟೀಕಾಪ್ರಹಾರ

ಸೋಮವಾರ ಹೈದರಾಬಾದ್‌ಗೆ ಭೇಟಿ ನೀಡುವ ಮುನ್ನ ತೇಜಸ್ವಿ ಸೂರ್ಯ, ಹೈದರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಕರೆದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಅಶ್ಲೀಲ ನಿಂದನೆಯು ಟ್ರೆಂಡ್ ಆಗಿತ್ತು. ಈ ಸಂದರ್ಭದಲ್ಲಿ ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಮತ್ತು ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಓವೈಸಿ, ಜಿನ್ನಾ ಅವತಾರ

ಓವೈಸಿ, ಜಿನ್ನಾ ಅವತಾರ

ಓವೈಸಿ ಯಾವಾಗಲೂ ಪ್ರತ್ಯೇಕವಾದ ಮತ್ತು ಉಗ್ರವಾದದ ಭಾಷೆಯನ್ನು ಮಾತನಾಡುತ್ತಾರೆ. 'ಅಕ್ಬರುದ್ದೀನ್ ಮತ್ತು ಅಸಾದುದ್ದೀನ್ ಓವೈಸಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ಅವರು ಹಳೆಯ ಹೈದರಾಬಾದ್‌ನಲ್ಲಿ ಅಭಿವೃದ್ಧಿಗೆ ಅವಕಾಶ ನೀಡಲಿಲ್ಲ. ಆದರೆ ಅವರು ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿದರು. ಓವೈಸಿ ಜಿನ್ನಾರ ಅವತಾರದಂತೆ. ಓವೈಸಿಗೆ ಹಾಕುವ ಪ್ರತಿ ಒಂದು ಮತವೂ ಭಾರತದ ವಿರುದ್ಧ ಮತ್ತು ಭಾರತದ ಪ್ರತಿ ನಿಲುವಿನ ವಿರುದ್ಧದ ಮತ' ಎಂದು ತೇಜಸ್ವಿ ಟೀಕಿಸಿದ್ದರು.

English summary
GHMC Polls: BJP MP Tejasvi Surya in Hyderabad said the whole of South India will be saffronised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X