ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್
ಹೈದರಾಬಾದ್, ಸೆ. 3: ಬಿಜೆಪಿ ಮುಖಂಡ, ಹೈದರಾಬಾಗಿನ ಘೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಅವರು ಫೇಸ್ಬುಕ್, ಇನ್ಸ್ಟಾಗ್ರಾಂ ಬಳಸದಂತೆ ನಿಷೇಧ ಹೇರಲಾಗಿದೆ. ಬಿಜೆಪಿಯರಿಗೆ ಫೇಸ್ಬುಕ್ ನ ದ್ವೇಷ ಭಾಷಣ ನಿಯಮ ಜಾರಿಯಾಗುವುದಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರನ್ನು ನಿಷೇಧಿಸಿದೆ.
Recommended Video
ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಪೋಸ್ಟ್ ಹಾಕುವ ಮೂಲಕ ಫೇಸ್‌ಬುಕ್ ನೀತಿ, ನಿಯಮ ಉಲ್ಲಂಘಿಸಿದ್ದರಿಂದ ರಾಜಾ ಸಿಂಗ್ ರನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ. ದ್ವೇಷ ಹರಡುವುದು, ದ್ವೇಷ ಭಾಷಣಗಳ ವಿರುದ್ಧ ಫೇಸ್ಬುಕ್ ಕಠಿಣ ಕ್ರಮಗಳನ್ನು ಜರುಗಿಸುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯ ಮುಂದೆ ಫೇಸ್ಬುಕ್ ಅಧಿಕಾರಿಗಳು ಬುಧವಾರದಂದು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ರಾಜಕೀಯ ಪಕ್ಷಪಾತದ ಆರೋಪ ಕೂಡಾ ಫೇಸ್ಬುಕ್ ಮೇಲೆ ಕೇಳಿ ಬಂದಿದ್ದು, ಈ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.

ನನ್ನ ಹೆಸರಿನಲ್ಲಿ ಅನೇಕ ಎಫ್‌ಬಿ ಪುಟಗಳು ಬಳಕೆಯಲ್ಲಿವೆ ಎಂದು ತಿಳಿದು ಬಂದಿದೆ. ನಾನು ಯಾವುದೇ ಅಧಿಕೃತ ಪುಟವನ್ನು ಹೊಂದಿಲ್ಲ ಹೀಗಾಗಿ, ಯಾವುದೇ ಪೋಸ್ಟ್‌ಗಳಿಗೆ ನಾನು ಜವಾಬ್ದಾರನಾಗಿರುವುದಿಲ್ಲ ಎಂದು ರಾಜಾಸಿಂಗ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.












Click it and Unblock the Notifications