"ಮುಂದಿನ ವಾರದೊಳಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ"
ಹೈದರಾಬಾದ್, ಜುಲೈ 17: "ಮುಂದಿನ ವಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ" ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಪಿ ಮುರಳೀಧರ ರಾವ್ ಹೇಳಿದ್ದಾರೆ.
ಎಚ್. ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಗುರುವಾರ(ಜುಲೈ 18)ದಂದು ವಿಶ್ವಾಸಮತ ಕಳೆದುಕೊಳ್ಳುವ ಭರವಸೆಯನ್ನು ಮುರಳೀಧರರಾವ್ ವ್ಯಕ್ತಪಡಿಸಿದರು.
'ನಾವು ನಮ್ಮ ಜವಾಬ್ದಾರಿಯಂದ ಹಿಂದೆ ಸರಿಯುವುದಿಲ್ಲ. ಮೈತ್ರಿ ಸರ್ಕಾರ ಈಗ ಅಲ್ಪಮತಕ್ಕೆ ಕುಸಿದಿದೆ, ಸರ್ಕಾರ ರಚನೆ ಅವಕಾಶವನ್ನು ಬಳಸುತ್ತೇವೆ' ಎಂದು ಹೇಳಿದರು.

"ಶಾಸಕರ ಸರಣಿ ರಾಜೀನಾಮೆಯಿಂದಾಗಿ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ ರಾಜಕೀಯದಲ್ಲಿಂದು ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ತೀರ್ಪು ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ. ರೆಬೆಎಲ್ ಶಾಸಕರ ರಾಜೀನಾಮೆ ಅಂಗೀಕರಿಸುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು, ಈ ಬಗ್ಗೆ ನಮ್ಮ ತಕರಾರೇನಿಲ್ಲ' ಎಂದರು.
ರೆಬೆಲ್ ಶಾಸಕರ ರಾಜೀನಾಮೆ ವಿಳಂಬ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಮುರಳೀಧರ ರಾವ್, "ವಿಪ್ ಜಾರಿಗೊಳಿಸಿ, ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಈ ಮೂಲಕ 15 ಶಾಸಕರಿಗೆ ಭದ್ರತೆಯನ್ನು ನೀಡಿದ್ದು, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಪಾಲ್ಗೊಳ್ಳುವುದು ಅವರ ಇಚ್ಛೆ, ಆದರೆ, ನನ್ನ ಅಭಿಪ್ರಾಯದ ಪ್ರಕಾರ, ಶಾಸಕರ ಅನರ್ಹತೆ ಸಾಧ್ಯವಿಲ್ಲ', ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ಪೀಕರ್ ಗಳಿಗೆ ಹೊಸದಿಕ್ಕನ್ನು ತೋರಿಸಲಿದೆ' ಎಂದು ಅಭಿಪ್ರಾಯಪಟ್ಟರು.
ಸ್ಪೀಕರ್ ಕಾರ್ಯವ್ಯಾಪ್ತಿ ಸೀಮಿತವಾಗಿದೆಯೇ? ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.












Click it and Unblock the Notifications