ಮ್ಯಾನೇಜರ್ ಬಂಧನ ಆಘಾತಕಾರಿ, ತನಿಖೆಗೆ ಸಹಕರಿಸುವೆ: ಕಾಜಲ್

Posted By:
Subscribe to Oneindia Kannada

ಹೈದರಾಬಾದ್, ಜುಲೈ 25: ಡ್ರಗ್ ಕೇಸಿನಲ್ಲಿ ಮ್ಯಾನೇಜರ್ ರೊನ್ಸನ್ ಜೋಸೆಫ್ ಬಂಧನವಾಗಿರುವುದು ನನಗೆ ಆಘಾತ ತಂದಿದೆ ಎಂದು ನಟಿ ಕಾಜಲ್ ಅಗರವಾಲ್ ಹೇಳಿದ್ದಾರೆ. ರೊನ್ಸನ್ ಜೋಸೆಫ್ ಮನೆಯಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ನಿನ್ನೆ ಆತನನ್ನು ಬಂಧಿಸಿದ್ದರು.

ನಟಿ ಲಾವಣ್ಯ ತ್ರಿಪಾಠಿ, ರಾಶಿ ಖನ್ನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಮ್ಯಾನೇಜರ್ ಆಗಿದ್ದ ರೋನ್ಸನ್, ಟಾಲಿವುಡ್ ನಲ್ಲಿ ಚಿರಪರಿಚಿತ. ಆದರೆ, ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಜತೆ ನಾನಾಗಲಿ ನನ್ನ ಕುಟುಂಬವಾಗಲಿ ಸಂಪರ್ಕ ಹೊಂದುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ನಟಿ ಕಾಜಲ್ ಅಗರವಾಲ್ ಹೇಳಿದ್ದಾರೆ.

Drug racket: Actress Kajal Agarwal says shocked at her arrested manager's action

ಜುಲೈ 19 ರಿಂದ 27ರ ತನಕ ವಿಚಾರಣೆ ಜಾರಿಯಲ್ಲಿರಲಿದೆ. ವಿಚಾರಣೆಗೆ ಹಾಜರಾದಾಗ ಮಾತ್ರ ಯಾರಿಗೆ ನೋಟಿಸ್ ನೀಡಲಾಗಿದೆ ಎಂಬ ಸತ್ಯ ತಿಳಿಯಲಿದೆ ಮತ್ತು ವಿಚಾರಣೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ನೋಟಿಸ್ ನೀಡಿದ್ದಕ್ಕೆ ಗರಂ ಆಗಿ ತನಿಖಾ ತಂಡದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ನಟಿ ಚಾರ್ಮಿ ಕೌರ್ ಗೆ ಹಿನ್ನಡೆಯಾಗಿದೆ. ಚಾರ್ಮಿ ಅವರ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

Pune v Hyderabad: Pune Need To Win To Stay Alive In The Series | Oneindia Kannada

ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಈತನ ಬಳಿ ಹಲವಾರು ಸಿಮ್ ಕಾರ್ಡ್ ಗಳಿದ್ದು, 1,500ಕ್ಕೂ ಅಧಿಕ ನಂಬರ್ ಗಳಿವೆ. ಇವುಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಸಂಪರ್ಕ ಸಂಖ್ಯೆಗಳಿವೆ. ತೆಲುಗು ನಟ ಪಲ್ಲಪೊಲ್ಲು ನವದೀಪ್, ತರುಣ್ ಕುಮಾರ್, ಪಿ ಸುಬ್ಬರಾಜು, ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress Kajal Agarwal today sought to distance herself from the "actions" of her manager who was arrested by the Telangana Prohibition and Excise Department yesterday in connection with the drug racket busted earlier this month.
Please Wait while comments are loading...