ಬಿಗ್ ಬಾಸ್ಕೆಟ್ ನಿಂದ ಬಂದ ಉದ್ದಿನ ಬೇಳೆ ಪ್ಯಾಕೆಟ್ ನಲ್ಲಿ ಸತ್ತ ಇಲಿ!
ಹೈದರಾಬಾದ್, ಆಗಸ್ಟ್ 11: ಹೆಸರಾಂತ ಆನ್ ಲೈನ್ ದಿನಸಿ ವ್ಯಾಪಾರ ಸಂಸ್ಥೆಯಾದ ಬಿಗ್ ಬಾಸ್ಕೆಟ್ ಮೂಲಕ ಅಡುಗೆ ಪದಾರ್ಥಗಳನ್ನು ತರಿಸಿದ್ದ ಇಲ್ಲಿನ ಮಹಿಳೆಯೊಬ್ಬರಿಗೆ ಕಂಪನಿಯಿಂದ ಬಂದ ಪ್ಯಾಕ್ ಒಂದರಲ್ಲಿ ಸತ್ತ ಇಲಿ ದೊರಕಿದೆ.
ಇತ್ತೀಚೆಗೆ, ಸುಧಾರಾಣಿ ಮಣಿಕೊಂಡ ಎಂಬ ಗೃಹಿಣಿಯು ಆನ್ ಲೈನ್ ಮೂಲಕ ಬಿಗ್ ಬಾಸ್ಕೆಟ್ ಗೆ ದಿನಸಿಯನ್ನು ತರಿಸಿದ್ದರು. ಅದರಂತೆ, ಕಂಪನಿಯಿಂದ ದಿನಸಿಯು ಸುಧಾರಾಣಿ ಮನೆಗೆ ಬಂದಿತ್ತು.

ಪದಾರ್ಥಗಳು ಬಂದ ಎರಡು ದಿನಗಳ ನಂತರ, ಸುಧಾರಾಣಿ ಅವರು ಒಂದೊಂದೇ ದಿನಸಿಯನ್ನು ಅಡುಗೆ ಮನೆಯಲ್ಲಿ ಜೋಡಿಸಲು ಮುಂದಾದಾಗ, ಉದ್ದಿನ ಬೇಳೆ ಪ್ಯಾಕೆಟ್ ನಲ್ಲಿ ಏನೋ ಕಪ್ಪು ವಸ್ತು ಗೋಚರಿಸಿದೆ. ಪ್ಯಾಕ್ ಕತ್ತರಿಸಿ ಪಾತ್ರೆಯೊಂದಕ್ಕೆ ಸುರಿದು ನೋಡಿದಾಗ ಅದು ಸತ್ತಿದ್ದ ಇಲಿ ಆಗಿತ್ತು. ಇದನ್ನು ನೋಡಿದ ಸುಧಾರಾಣಿಗೆ ಅಸಹ್ಯವಾಗಿದೆ.
ತಕ್ಷಣವೇ, ಅದರ ಫೋಟೋ ತೆಗೆದ ಅವರು, ತಕ್ಷಣವೇ ಟ್ವಿಟರ್ ನಲ್ಲಿ ಬಿಗ್ ಬಾಸ್ಕೆಟ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಬಿಗ್ ಬಾಸ್ಕೆಟ್ ನಲ್ಲಿ ಉದ್ದಿನ ಬೇಳೆ ಕೊಂಡರೆ ಸತ್ತ ಇಲಿ ಉಚಿತವಾಗಿ ಸಿಗುತ್ತದೆ ಎಂದು ಕಿಚಾಯಿಸಿದ್ದಾರೆ.
ತಕ್ಷಣ ಸ್ಪಂದಿಸಿರುವ ಕಂಪನಿ, ಸುಧಾರಾಣಿಯವರ ಕ್ಷಮೆ ಕೋರಿ, ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅವರಿಗೆ ಬೇರೊಂದು ಉದ್ದಿನ ಬೇಳೆ ಪ್ಯಾಕೆಟ್ ಕಳುಹಿಸಿಕೊಟ್ಟಿದೆ.












Click it and Unblock the Notifications