• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾಕ್ಕೆ ವ್ಯಕ್ತಿ ಬಲಿ; ಶವ ಸಂಸ್ಕಾರಕ್ಕೆ ಕುಟುಂಬಕ್ಕೆ ಅವಕಾಶ ನಿರಾಕರಣೆ!

|

ಹೈದರಾಬಾದ್ ಮಾರ್ಚ್ 30: ಕೊರೊನಾದಿಂದ ತೆಲಂಗಾಣದಲ್ಲಿ ಶನಿವಾರ ಸಾವನ್ನಪ್ಪಿದ್ದ 74 ವರ್ಷದ ವ್ಯಕ್ತಿಯ ಶವ ಸಂಸ್ಕಾರ ನಡೆಸಲು ಕುಟುಂಬ ಸದಸ್ಯರಿಗೆ ಅವಕಾಶ ನೀಡದೇ ಕೇವಲ ವೈದ್ಯಕೀಯ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.

ಹೈದರಾಬಾದ್‌ನ ವ್ಯಕ್ತಿಯ ರಕ್ತ ಮಾದರಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ಇದ್ದಿರುವುದು ಪತ್ತೆಯಾಗಿತ್ತು. 21ದಿನಗಳ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎಲ್ಲಿಯಾದರು ಸಾವು ಸಂಭವಿಸಿದರೆ 20 ಜನಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶ ಇಲ್ಲ ಎಂಬ ಸೂಚನೆ ಇದ್ದಿದ್ದರಿಂದ ಈ ರೀತಿ ಶವ ಸಂಸ್ಕಾರ ಮಾಡಲಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.

2 ವಾರಗಳಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ: ಟ್ರಂಪ್

ಏತನ್ಮಧ್ಯೆ ನಂತರ ಆ ವ್ಯಕ್ತಿಯ ಈ ವೃದ್ಧನ ಮನೆಯವರನ್ನು ಇದೀಗ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕಿಗೆ 29 ಮಂದಿ ಸಾವನ್ನಪ್ಪಿದ್ದು, 1100 ಅಧಿಕ ಜನರಿಗೆ ಸೋಂಕು ತಗುಲಿದೆ.

English summary
Man Died For Coronavirus: No Permission To Family For Funeral In hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X