ಕಾಂಗ್ರೆಸ್ ಮುಖಂಡ ಯಾದಗಿರಿ ಮೇಲೆ ಗುಂಡಿನ ದಾಳಿ

ಹೈದರಾಬಾದ್, ಆಗಸ್ಟ್ 13: ತೆಲಂಗಾಣದ ಕಾಂಗ್ರೆಸ್ ನಾಯಕ, ಉದ್ಯಮಿ ಯಾದಗಿರಿ ಅವರ ಮೇಲೆ ದುಷ್ಕರ್ಮಿಗಳು ಶನಿವಾರ ಗುಂಡಿನ ದಾಳಿ ನಡೆಸಿ, ಪರಾರಿಯಾಗಿರುವ ಘಟನೆ ನಡೆದಿದೆ.

ಸಿಕಂದರಾಬಾದಿನ ಬೌವಿಪಲ್ಲಿ ಎಂಬಲ್ಲಿ ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಐದರಿಂದ ಆರು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿಗೆ ದಾಳಿಗೆ ತುತ್ತಾದ ಯಾದಗಿರಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Congress leader Yadagiri shot at in Secunderabad

ಯಾದಗಿರಿ ಅವರ ಮೇಲಿನ ದಾಳಿಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎನ್ನಲಾಗಿದೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಡೆಕ್ಕನ್ ಬಾಬು ಮತ್ತು ಆತನ ಸಹಚರರು ಕೃತ್ಯ ಈ ಹಿಂದೆ ಕೂಡಾ ಯಾದಗಿರಿಗೆ ಧಮಕಿ ಹಾಕಿದ್ದರು.

ಈಗ ಯಾದಗಿರಿ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡು ಸೊಂಟದ ಭಾಗಕ್ಕೆ ಬಿದ್ದಿರುವುದರಿಂದ ದಾಳಿಕೋರರಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಕಂದರಾಬಾದಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+