• search
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಯನಂತೆ ಚಾಣಾಕ್ಷರಾಗಿ!: ಆದಿವಾಸಿಗಳಿಗೆ ಕೇಂದ್ರ ಸಚಿವರ ಸಲಹೆ

|

ಹೈದರಾಬಾದ್, ಜುಲೈ 14: 'ಕಠಿಣ ಶ್ರಮವಹಿಸಿದರೆ ಸಾಲದು, ಮಲ್ಯ ಅವರಂತೆ ಬುದ್ಧಿವಂತಿಕೆಯೂ ಬೇಕು' - ಇದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಾಮ್ ಅವರ ಸಲಹೆ.

ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಮೊದಲ ರಾಷ್ಟ್ರೀಯ ಬುಡಕಟ್ಟು ಉದ್ಯಮಶೀಲತೆ ಸಮ್ಮೇಳನ 2018ರಲ್ಲಿ ಪ್ರಧಾನ ಭಾಷಣ ಮಾಡಿದ ಓರಾಮ್, ಬುಡಕಟ್ಟು ಸಮುದಾಯದವರು ವೇಗವಾಗಿ ಉದ್ಯಮಶೀಲತೆ ಗುಣ ಬೆಳೆಸಿಕೊಳ್ಳಬೇಕು ಎನ್ನುವಾಗ ವಿಜಯ್ ಮಲ್ಯ ಅವರ ಉದಾಹರಣೆ ನೀಡಿದರು.

ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣ ಆರಂಭ: ಅಮಿತ್ ಶಾ

'ನೀವು ವಿಜಯ್ ಮಲ್ಯ ಅವರನ್ನು ಬಯ್ಯುತ್ತೀರಿ. ಆದರೆ ಯಾರು ವಿಜಯ್ ಮಲ್ಯ? ಅವರೊಬ್ಬ ಚಾಣಾಕ್ಷ ವ್ಯಕ್ತಿ. ಅವರು ಕೆಲವು ಬುದ್ಧಿವಂತ ಜನರನ್ನು ಕೆಲಸಕ್ಕೆ ನೇಮಿಸಿಕೊಂಡರು ಮತ್ತು ಬ್ಯಾಂಕರ್‌ಗಳು, ರಾಜಕಾರಣಿಗಳು ಮತ್ತು ಸರ್ಕಾರದ ಮೇಲೆ ಪ್ರಭಾವ ಬೀರಿದರು.

be smart like mally: union minister jual oram to tribes

ನೀವೂ ಚಾಣಾಕ್ಷರಾಗುವುದನ್ನು ಯಾರು ತಡೆದಿದ್ದಾರೆ? ವ್ಯವಸ್ಥೆ ಮೇಲೆ ಪ್ರಭಾವ ಬೀರದಂತೆ ಆದಿವಾಸಿಗಳಿಗೆ ಯಾರು ಹೇಳಿದ್ದಾರೆ? ಬ್ಯಾಂಕರ್‌ಗಳ ಮೇಲೆ ಪ್ರಭಾವ ಬೀರುವುದರಿಂದ ನಿಮಗೆ ನೀವೇ ಅಡ್ಡಿಪಡಿಸಿಕೊಂಡಿದ್ದೀರಿ' ಎಂದು ಓರಾಮ್ ಹೇಳಿದ್ದಾರೆ.

ಬುಡಕಟ್ಟು ಸಮುದಾಯದವರಿಗೆ ಪ್ರಯೋಜನ ಹಾಗೂ ಕಷ್ಟ ಎರಡೂ ಇದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ನೀಡಲಾಗಿದೆ. ಅವರು ಇದನ್ನು ಬಳಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬಹುದು.

ಅನನುಕೂಲತೆ ಏನೆಂದರೆ, ಅವರು ಜೀವನದಲ್ಲಿ ಯಶಸ್ವಿಯಾದರೂ ಅವರ ಅರ್ಹತೆಯನ್ನು ಪರಿಗಣಿಸಲಾಗುತ್ತಿಲ್ಲ. ಅವರ ಯಶಸ್ಸನ್ನು ಮೀಸಲಾತಿಯಿಂದ ದೊರೆತದ್ದು ಎಂದು ಕಡೆಗಣಿಸಿ, ಅವರನ್ನು ಇತರರಂತೆ ನಡೆಸಿಕೊಳ್ಳುವುದಿಲ್ಲ.

ಆಘಾತಕಾರಿ ಸಂಗತಿ ಬಹಿರಂಗ: ಗೂಗಲ್ ಸರ್ಚ್‌ನಲ್ಲಿ ಆಧಾರ್, ಬ್ಯಾಂಕ್ ಖಾತೆ ವಿವರ

ಈ ಕಾರಣದಿಂದ ಅನೇಕ ಬುಡಕಟ್ಟು ಸಮುದಾಯಗಳು ತಾರತಮ್ಯದ ಅನುಭವ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಅವರು ತಮ್ಮ ಸಮುದಾಯ ಸೂಚಕ ಪದಗಳನ್ನೇ ಹೆಸರಿನಿಂದ ಕೈಬಿಡುತ್ತಿದ್ದಾರೆ ಎಂದು ಓರಾಮ್ ಹೇಳಿದ್ದಾರೆ.

ನಾವು ಉದ್ಯಮಶೀಲರಾಗಬೇಕು. ನಾವು ಬುದ್ಧಿವಂತರಾಗಬೇಕು. ನಾವು ಚಾಣಾಕ್ಷರಾಗಬೇಕು. ನಾವು ಮಾಹಿತಿ ಸಂಪಾದಿಸಬೇಕು. ಮಾಹಿತಿ ಒಂದು ಶಕ್ತಿ. ಯಾರು ಮಾಹಿತಿ ಸಂಪಾದಿಸುತ್ತಾರೋ ಅವರು, ಶಕ್ತಿಯನ್ನು ನಿಯಂತ್ರಿಸುತ್ತಾರೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಹಾಜರಿದ್ದ ತೆಲಂಗಾಣ ಹಣಕಾಸು ಸಚಿವ ಎಟಾಲ ರಾಜೇಂದರ್, ಬ್ಯಾಂಕುಗಳು ಬುಡಕಟ್ಟು ಸಮುದಾಯದವರ ಕುರಿತು ತಾರತಮ್ಯ ಮಾಡುತ್ತಿವೆ ಎಂದು ಆರೋಪಿಸಿದರು.

ಮಲ್ಯ ಅವರನ್ನು ಉಲ್ಲೇಖಿಸಿದ ರಾಜೇಂದರ್, ಬ್ಯಾಂಕುಗಳು ಮಲ್ಯ ಅವರಂತಹ ವ್ಯಕ್ತಿಗಳಿಗೆ ಸಾವಿರಾರು ಕೋಟಿ ಸಾಲವನ್ನು ಕಣ್ಣುಮಿಟುಕಿಸುವುದರ ಒಳಗೆ ನೀಡುತ್ತವೆ. ಆದರೆ, ಒಬ್ಬ ದಕ್ಷ ಬುಡಕಟ್ಟು ಉದ್ಯಮಿಗೆ ಒಂದು ಕೋಟಿ ಕೂಡ ಸಾಲ ನೀಡಲು ಹಿಂಜರಿಯುತ್ತವೆ ಎಂದು ದೂರಿದರು.

ಮಲ್ಯ ಹೆಸರು ಹೇಳಬಾರದಿತ್ತು

ನಾನು ಆಕಸ್ಮಿಕವಾಗಿ ವಿಜಯ್ ಮಲ್ಯ ಅವರ ಹೆಸರು ಬಳಸಿಕೊಂಡೆ. ನಾನು ಬೇರೆ ಯಾರಾದ್ದಾದರೂ ಹೆಸರು ತೆಗೆದುಕೊಳ್ಳಬೇಕಿತ್ತು. ಅವರ ಹೆಸರನ್ನು ಹೇಳಬಾರದಿತ್ತು ಇದು ನನ್ನ ತಪ್ಪು ಎಂದು ಜುವಲ್ ಓರಾಮ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಹೈದರಾಬಾದ್ ಸುದ್ದಿಗಳುView All

English summary
Union tribal affairs minister Jual Oram on Friday said that the tribal community should have smart entrepreneurship like mallya to influence bank and system.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more