ಕುತೂಹಲ ಕೆರಳಿಸಿದ ಜಗನ್ಮೋಹನ್ ರೆಡ್ಡಿ-ನಾಗಾರ್ಜುನ ಭೇಟಿ
ಹೈದರಾಬಾದ್, ಫೆಬ್ರವರಿ 20: ಟಾಲಿವುಡ್ ನ ಪ್ರಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ವೈ ಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಮಂಗಳವಾರ ಹೈದರಾಬಾದಿನಲ್ಲಿರುವ ಜಗನ್ಮೋಹನ್ ರೆಡ್ಡಿ ಅವರ ನಿವಾಸಕ್ಕೆ ನಾಗಾರ್ಜುನ ಭೇಟಿ ನೀಡಿದ್ದರು. ನಾಗಾರ್ಜುನ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ವದಂತಿ ಹಬ್ಬಿರುವ ಸಮಯದಲ್ಲಿ ಉಭಯ ನಾಯಕರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ.ರಾಜಶೇಖರ ರೆಡ್ಡಿ ಅವರ ಆತ್ಮೀಯ ಗೆಳೆಯರಾಗಿದ್ದ ನಾಗಾರ್ಜುನ ಇದೀಗ ರೆಡ್ಡಿ ಅವರ ಪುತ್ರ ಜಗನ್ ಮೋಹನ್ ರೆಡ್ಡಿ ಅವರ ವೈ ಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು ಎಂಬ ವದಂತಿ ದಟ್ಟವಾಗಿದೆ.
ಅಷ್ಟೇ ಅಲ್ಲ, ಗುಂಟೂರು ಲೋಕಸಭಾ ಕ್ಷೇತ್ರದಿಂದ ನಾಗಾರ್ಜುನ ಸ್ಪರ್ಧಿಸಬಹುದು ಎಂದೂ ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications