ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ದಾಳಿ; ಮಹಿಳಾ ಅಧಿಕಾರಿಗಳ ಬಳಿ 4.47 ಕೋಟಿ ಪತ್ತೆ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 01: ತೆಲಂಗಾಣದ ಎಸಿಬಿ ಇಬ್ಬರು ಮಹಿಳಾ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆ ತಂದಿದೆ. ಒಟ್ಟು 4.47 ಕೋಟಿ ದಾಖಲೆ ಇಲ್ಲದ ಹಣವನ್ನುಇಬ್ಬರಿಂದ ವಶಕ್ಕೆ ಪಡೆಯಲಾಗಿದೆ.

ಅಮಾನತುಗೊಂಡಿರುವ ಐಎಂಸ್ ನಿರ್ದೇಶಕಿ ದೇವಿಕಾ ರಾಣಿ ಮತ್ತು ಇಎಸ್‌ಐ ಫಾರ್ಮಸಿಸ್ಟ್ ನಾಗಲಕ್ಷ್ಮೀ ಅವರ ಬಳಿಕ ದಾಖಲೆ ಇಲ್ಲದ ಹಣ ಎಸಿಬಿ ದಾಳಿಯ ವೇಳೆ ಸಿಕ್ಕಿದೆ.

ಎಸಿಬಿ ದಾಳಿ; ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 82 ಲಕ್ಷ ರೂ.! ಎಸಿಬಿ ದಾಳಿ; ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 82 ಲಕ್ಷ ರೂ.!

ದೇವಿಕಾ ರಾಣಿಗೆ ಸೇರಿದ 3.75 ಲಕ್ಷ ರೂ. ಮತ್ತು ನಾಗಲಕ್ಷ್ಮೀಗೆ ಸೇರಿದ 72 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ವಾಣಿಜ್ಯ ಸಂಕೀರ್ಣ, ಮನೆಯನ್ನು ಕೊಂಡುಕೊಳ್ಳಲು ಬಿಲ್ಡರ್‌ಗೆ ಹಣ ನೀಡಲಾಗಿತ್ತು.

ಮೈಸೂರು: ನಗರಪಾಲಿಕೆ ಸಹಾಯಕ ಆಯುಕ್ತರ ಮನೆ ಮೇಲೆ ಎಸಿಬಿ ದಾಳಿಮೈಸೂರು: ನಗರಪಾಲಿಕೆ ಸಹಾಯಕ ಆಯುಕ್ತರ ಮನೆ ಮೇಲೆ ಎಸಿಬಿ ದಾಳಿ

ACB Raid 4.47 Crore Seized By Women Officials

ಎಸಿಬಿ ಅಧಿಕಾರಿಗಳ ಮಾಹಿತಿಯಂತೆ 2,29,30,000 ಹಣವನ್ನು ಚೆಕ್ ಮತ್ತು ಆನ್‌ಲೈನ್ ವರ್ಗಾವಣೆ ಮೂಲಕ ನೀಡಲಾಗಿದೆ. ಅದನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ

ಕುಟುಂಬ ಸದಸ್ಯರ ಹೆಸರಿನಲ್ಲಿ 6 ಫ್ಲಾಟ್‌, ವಾಣಿಜ್ಯ ಸಂಕೀರ್ಣ ಕೊಂಡುಕೊಳ್ಳಲು ನಾಗಲಕ್ಷ್ಮೀ ಬಯಸಿದ್ದರು. ದೇವಿಕಾರಾಣಿ 22 ಲಕ್ಷ ರೂ.ಗಳನ್ನು ಬೇನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿದ್ದರು.

2019ರ ಡಿಸೆಂಬರ್‌ನಲ್ಲಿ ಎಸಿಬಿ ದೇವಿಕಾ ರಾಣಿ ನಿವಾಸದ ಮೇಲೆ ದಾಳಿ ಮಾಡಿತ್ತು. ಆಗ ಮನೆಯಲ್ಲಿ 23.14 ಕೋಟಿ ರೂ. ಹಣ ಸಿಕ್ಕಿತ್ತು. ಇಎಸ್‌ಐ ಔಷಧಿಗಳ ಖರೀದಿ ಹಗರಣದಲ್ಲಿ ಇಬ್ಬರೂ ಮಹಿಳೆಯರ ಪಾತ್ರ ಇರುವ ಬಗ್ಗೆ ತನಿಖೆ ನಡೆಯುತ್ತಿದೆ.

ದೇವಿಕಾ ರಾಣಿ ಮತ್ತು ನಾಗಲಕ್ಷ್ಮೀ ಇಎಸ್‌ಐ ಔಷಧಿ ಖರೀದಿ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ದೇವಿಕಾ ರಾಣಿ ಅವರ ಪತಿ ಸಹ ನಿವೃತ್ತ ಸರ್ಜನ್ ಆಗಿದ್ದಾರೆ.

English summary
The Anti Corruption Bureau (ACB) of Telangana conducted the raid on two women officials and seized 4.47 crore unaccounted money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X