ಅಯ್ಯಯ್ಯೋ, ಮಾಜಿ ಮುಖ್ಯಮಂತ್ರಿ ಮೇಲೆಯೇ ಚಪ್ಪಲಿ ಎಸೆಯುವುದೇ?

ಹೈದ್ರಾಬಾದ್, ನವೆಂಬರ್.29: ಅಧಿಕಾರದಲ್ಲಿ ಇದ್ದಾಗಲೇ ಒಂದು ಬೆಲೆ, ಅಧಿಕಾರ ಕೈ ಕೊಟ್ಟಾಗ ಮತ್ತೊಂದು ಬೆಲೆ. ಇಲ್ಲಿ ಅಧಿಕಾರಕ್ಕಿರುವ ಕಿಮ್ಮತ್ತು ವ್ಯಕ್ತಿಗೆ ಇರುವುದಿಲ್ಲ. ಅದರಲ್ಲೂ ರಾಜಕಾರಣದಲ್ಲಿ ಎದುರಾಳಿ ಪಕ್ಷದ ನಾಯಕರಿಗೆ ಗದ್ದುಗೆ ಕೈ ತಪ್ಪಿದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ.

ಆಂಧ್ರಪ್ರದೇಶದಲ್ಲೂ ಈಗ ಆಗಿರುವುದೇ ಅದೆ. ಅಸಲಿಗೆ ಇದು ನವೆಂಬರ್.28ರಂದು ಅಮರಾವತಿಯಲ್ಲಿ ನಡೆದಿರುವ ಘಟನೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದುವಿದ್ದ ಬಸ್ ಮೇಲೆಯೇ ಕಿಡಿಗೇಡಿಗಳು ಚಪ್ಪಲಿ ತೂರಿದ್ದಾರೆ.

ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರೇ ಚಂದ್ರಬಾಬು ನಾಯ್ದು ಇರುವ ಬಸ್ ಮೇಲೆ ಚಪ್ಪಲಿ ತೂರಿರುವ ಆರೋಪ ಇದೀಗ ಕೇಳಿ ಬಂದಿದೆ. ವೈಎಸ್ಆರ್ ಸಿಪಿ ಕಾರ್ಯಕರ್ತರ ವಿರುದ್ಧ ತೆಲುಗು ದೇಶಂ ಪಾರ್ಟಿ ದೂರು ದಾಖಲಿಸಿದೆ.

A Slipper Was Hurled At The Bus Carrying Former Chief Minister Chandrababu Naidu.

ಮೊದಲೇ ವಿರೋಧ ವ್ಯಕ್ತಪಡಿಸಿದ್ದ ವೈಎಸ್ಆರ್ ಕಾಂಗ್ರೆಸ್

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರ ಅಮರಾವತಿ ಪ್ರವಾಸಕ್ಕೆ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಮೊದಲೇ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಲೆಕ್ಕಿಸದೇ ಮಾಜಿ ಮುಖ್ಯಮಂತ್ರಿಗಳು ಅಮರಾವತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದರು.

ವೆಂಕಟಪಲಂ ಬಳಿ ಚಂದ್ರಬಾಬು ನಾಯ್ದು ಇರುವ ಬಸ್ ಆಗಮಿಸುತ್ತಿದ್ದಂತೆ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಬಸ್ ಗೆ ಅಡ್ಡ ಹಾಕಿದರು. ಚಂದ್ರಬಾಬು ನಾಯ್ಡು ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಕೆಲವು ಕಿಡಿಗೇಡಿಗಳು ಬಸ್ ಮೇಲೆ ಚಪ್ಪಲಿ ತೂರಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿತ್ತು. ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತೆಲುಗು ದೇಶಂ ಪಾರ್ಟಿ ಮುಖಂಡರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+