ಬಾವಿಯಲ್ಲಿ 9 ಶವ; ತೆಲಂಗಾಣ ಬೆಚ್ಚಿಬಿದ್ದ ಪ್ರಕರಣದ ಚಾರ್ಜ್ ಶೀಟ್ ವಿವರ
ಹೈದರಾಬಾದ್, ಜೂನ್ 21 : ತೆಲಂಗಾಣ ರಾಜ್ಯವೇ ಬೆಚ್ಚಿ ಬಿದ್ದಿದ್ದ ಪ್ರಕರಣವೊಂದರಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 9 ಜನರನ್ನು ಕೊಂದು ಶವಗಳನ್ನು ಬಾವಿಗೆ ಎಸೆದಿದ್ದ ಸಂಜಯ್ ಕುಮಾರ್ ಯಾದವ್‌ಗೆ ಕಠಿಣ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ.
Recommended Video
ಮಾರ್ಚ್ ತಿಂಗಳಿನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು, ಸಂಜಯ್ ಕುಮಾರ್ ಯಾದವ್ ಪ್ರಕರಣದ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ.
ಎಲ್ಲರನ್ನೂ ಬಾವಿಗೆ ತಳ್ಳುವ ಮೊದಲು ನಿದ್ರೆ ಮಾತ್ರೆ ನೀಡಿರುವುದು ಎಫ್‌ಎಸ್‌ಎಲ್ ವರದಿಯಿಂದ ಬಹಿರಂಗವಾಗಿದೆ. ಅಲ್ಲದೇ ಎಲ್ಲ ದೇಹದ ಮೇಲೆ ಗಾಯದ ಗುರುತುಗಳಿದ್ದು, ಅವರನ್ನು ಎಳೆದುಕೊಂಡು ಬಂದು ಬಾವಿಗೆ ಎಸೆಯಲಾಗಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಹೇಳಿದ್ದಾರೆ.

ತೆಲಂಗಾಣದ ವಾರಂಗಲ್ ನಗರದ ಸಮೀಪದ ಗೊರ್ರೆಕುಂಟಾ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೊದಲು ಇದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಎಲ್ಲರನ್ನು ಬಾವಿಗೆ ತಳ್ಳಿ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ಯಾದವ್ ಬಂಧಿಸಲಾಗಿತ್ತು.
ಪಶ್ಚಿಮ ಬಂಗಾಳದಿಂದ ತೆಲಂಗಾಣಕ್ಕೆ 20 ವರ್ಷಗಳ ಹಿಂದೆ ವಲಸೆ ಬಂದಿದ್ದ ಮಕ್ಸೂದ್ (56), ಆತನ ಪತ್ನಿ ನಿಶಾ (48), ಪುತ್ರಿ ಬುಶ್ರಾ (24), ಮೂರು ವರ್ಷದ ಮೊಮ್ಮಗನ ಶವ ಮೊದಲ ದಿನ ಬಾವಿಯಲ್ಲಿ ಪತ್ತೆಯಾಗಿತ್ತು. ಅದೇ ಬಾವಿಯಲ್ಲಿ ಮರುದಿನ ಮುಕ್ಸೂದ್ ಮಗ, ಬಿಹಾರದಿಂದ ಬಂದ ಇನ್ನಿಬ್ಬರು ಕಾರ್ಮಿಕರು, ಇಬ್ಬರು ಸ್ಥಳೀಯರ ಶವ ಪತ್ತೆಯಾಗಿತ್ತು.
ಕೊಲೆ ಮುಚ್ಚಿ ಹಾಕಲು 9 ಕೊಲೆ : ಆರೋಪಿ ಸಂಜಯ್ ಕುಮಾರ್ ಯಾದವ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೃತ ಮಕ್ಸೂದ್ ಸಂಬಂಧಿ ರಫಿಕಾ ಮೂವರು ಮಕ್ಕಳ ಜೊತೆ ಮಕ್ಸೂದ್ ಮನೆಗೆ ಬಂದಿದ್ದಳು. ಆಕೆಯ ಜೊತೆ ಆರೋಪಿ ಅನೈತಿಕ ಸಂಬಂಧ ಬೆಳೆಸಿದ್ದ. ಬಳಿಕ ಆಕೆ ಆರೋಪಿ ಮನೆಗೆ ಬಂದಿದ್ದಳು.
ರಫಿಕಾ ಮಗಳ ಜೊತೆ ಸಂಜಯ್ ಕುಮಾರ್ ಕೆಟ್ಟದಾಗಿ ನಡೆದುಕೊಂಡಿದ್ದ ಇದರಿಂದಾಗಿ ರಫಿಕಾ ಜಗಳವಾಡಿದ್ದಳು. ಆಗ ಆಕೆಯನ್ನು ಮದುವೆಯಾವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದ. ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲಿನಲ್ಲಿ ಹೋಗುವಾಗ ಆಕೆಗೆ ಮತ್ತು ಬರುವ ಔಷಧಿ ಇರುವ ಮಜ್ಜಿಗೆ ಕುಡಿಸಿ ಪಶ್ಚಿಮ ಗೋದಾವರಿ ಬಳಿ ರೈಲಿನಿಂದ ಕೆಳಗೆ ತಳ್ಳಿದ್ದ. ಶವದ ಗುರುತು ಪತ್ತೆ ಮಾಡಲು ಸಾಧ್ಯವಾಗದೇ ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದರು.
ಮನೆಗೆ ವಾಪಸ್ ಆಗಿದ್ದ ಸಂಜಯ್ ರಫಿಕಾ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಈ ವಿಚಾರದಲ್ಲಿ ಮಕ್ಸೂದ್ ಪತ್ನಿ ನಿಶಾ ಆರೋಪಿ ಜೊತೆ ಜಗಳವಾಡಿದ್ದಳು. ನೀನು ಬಿಟ್ಟು ಬಂದಿದ್ದು ಏಕೆ? ಎಂದು ಕೇಳಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರು.
ಆಗ ಅವರನ್ನು ಕೊಲ್ಲಲು ಆರೋಪಿ ಸಂಜಯ್ ಕುಮಾರ್ ಸಂಚು ರೂಪಿಸಿದ್ದ. ಮಕ್ಸೂದ್ ಮಗನ ಹುಟ್ಟಿದ ಹಬ್ಬದ ದಿನ ಊಟದಲ್ಲಿ ನಿದ್ರೆ ಮಾತ್ರೆ ಹಾಕಿದ್ದ. ಮುಂಜಾನೆ 2 ಗಂಟೆ ಸಮಯದಲ್ಲಿ ಮಕ್ಸೂದ್, ನಿಶಾ, ಬುಶ್ರಾ, ಮೂರು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬಾವಿಗೆ ಶವಗಳನ್ನು ಎಸೆದಿದ್ದ.
ಶವವನ್ನು ಎಸೆದಿದ್ದನ್ನು ನೋಡಿದ್ದಾರೆ ಎಂಬ ಕಾರಣಕ್ಕೆ ಮರುದಿನ ಮುಕ್ಸೂದ್ ಮಗ, ಬಿಹಾರದಿಂದ ಬಂದ ಇನ್ನಿಬ್ಬರು ಕಾರ್ಮಿಕರು ಹಾಗೂ ಇಬ್ಬರು ಸ್ಥಳೀಯರನ್ನು ಹತ್ಯೆ ಮಾಡಿ ಆ ಶವಗಳನ್ನು ಬಾವಿಗೆ ಹಾಕಿದ್ದ.












Click it and Unblock the Notifications