• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾರಣಾಂತಿಕ ಕೊರೊನಾ ವೈರಸ್ ಗೆ ಪತ್ರಕರ್ತ ಬಲಿ.!

|

ಹೈದರಾಬಾದ್, ಜೂನ್ 8: ಡೆಡ್ಲಿ ಕೊರೊನಾ ವೈರಸ್ ಗೆ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ತೆಲುಗು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ 33 ವರ್ಷದ ಪತ್ರಕರ್ತರೊಬ್ಬರು ಕೋವಿಡ್-19 ನಿಂದ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

   ಚಿರು ಸರ್ಜಾ ಅಂತಿಮ ಯಾತ್ರೆ ಹೇಗಿತ್ತು ನೋಡಿ | Chiranjeevi Sarja | Oneindia Kannada

   ಕೊರೊನಾ ವೈರಸ್ ಸೋಂಕು ತಗುಲಿದ ಬಳಿಕ ಗಾಂಧಿ ಆಸ್ಪತ್ರೆಗೆ ಜೂನ್ 4 ರಂದು ಪತ್ರಕರ್ತ ದಾಖಲಾಗಿದ್ದರು. ಬೈಲ್ಯಾಟರಲ್ ನ್ಯುಮೋನಿಯಾ ಜೊತೆಗೆ ಟೈಪ್-1 ರೆಸ್ಪಿರೇಟರಿ ಫೇಲ್ಯೂರ್ ಮತ್ತು ಅಕ್ಯೂಟ್ ರೆಸ್ಪಿರೇಟರಿ ಡಿಸೀಸ್ ಸಿಂಡ್ರೋಮ್ ನಿಂದ ಪತ್ರಕರ್ತ ಬಳಲುತ್ತಿದ್ದರು.

   ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಕೊರೊನಾ ದೃಢ

   ''ಪತ್ರಕರ್ತ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ 9.37 ರ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದರು'' ಎಂದು ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಎಂ.ರಾಜಾ ರಾವ್ ತಿಳಿಸಿದ್ದಾರೆ.

   ಕಳೆದ ಒಂದು ವಾರದಲ್ಲಿ ತೆಲಂಗಾಣದಲ್ಲಿ 13 ಮಂದಿ ಪತ್ರಕರ್ತರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

   ತೆಲಂಗಾಣದಲ್ಲಿ ಇಲ್ಲಿಯವರೆಗೂ 3650 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1742 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 137 ಮಂದಿ ಮೃತಪಟ್ಟಿದ್ದಾರೆ. ಸದ್ಯ ತೆಲಂಗಾಣದಲ್ಲಿ 1771 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

   English summary
   33 Year old Journalist dies of Covid 19 in Telangana.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X