• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳು ನಿರ್ದೇಶಕನಿಂದ ತೆಲುಗು ನಟಿಗೆ ಕಿರುಕುಳ

By Mahesh
|

ಹೈದರಾಬಾದ್, ನ.3: ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಿಯೊಬ್ಬರಿಗೆ ತಮಿಳು ಮೂಲದ ಅಷ್ಟೇನು ಜನಪ್ರಿಯವಲ್ಲದ ನಿರ್ದೇಶಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಜುಬಿಲಿ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

24By Love ಎಂಬ ತೆಲುಗು ಚಿತ್ರದ ನಾಯಕಿ ಮೇಲೆ ತಮಿಳು ನಿರ್ದೇಶಕ ವಿ.ಎಸ್ ಫಣಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ನೀನು ಇಂಡಸ್ಟ್ರಿಯಲ್ಲಿ ಬೆಳೆಯಬೇಕಾದರೆ ನನ್ನ ಲೈಂಗಿಕ ಕಾಮನೆಗಳನ್ನು ತೃಪ್ತಿಗೊಳಿಸು ಎಂದು ಆಫರ್ ನೀಡಿದ್ದ ಎನ್ನಲಾಗಿದೆ.

ನಿರ್ದೇಶಕ ವಿ.ಎಸ್ ಫಣಿ ಹಾಗೂ ನಟಿ ಇಬ್ಬರಿಗೂ ಕೆಲವು ವರ್ಷಗಳಿಂದ ಪರಿಚಯವಿತ್ತು. ಇದೇ ಪರಿಚಯ ಸ್ನೇಹವಾಯಿತು ಹೀಗಾಗಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಬಿಡುಗಡೆಯಾಗದ 24 ಬೈಲವ್ ಚಿತ್ರಕ್ಕೆ ಆಫರ್ ನೀಡಿದ್ದ. ಆಕೆಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸಿದ್ದನ್ನೇ ಲಾಭವಾಗಿ ಪರಿವರ್ತಿಸಿಕೊಂಡ ಫಣಿ ಆಕೆಯನ್ನು ನಿರಂತವಾಗಿ ಕಾಡತೊಡಗಿದ.

ಅನೇಕ ಸಲ ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಕಾಮನೆಗಳನ್ನು ಪೂರೈಸಿ ಈ ವಾರ ಎಲ್ಲಾದರು ಹೋಗೋಣ ಎಂದು ನನ್ನನ್ನು ಪೀಡಿಸುತ್ತಿದ್ದ ಎಂದು ನಟಿ ಹೇಳಿಕೆ ನೀಡಿದ್ದಾಳೆ.

ಭಾನುವಾರದ ದಿನ ರಹಮತ್ ನಗರದಲ್ಲಿರುವ ನಟಿ ಮನೆಗೆ ನಿರ್ದೇಶಕ ಫಣಿ ಆಗಮಿಸಿದ್ದಾನೆ. ಆಕೆಯನ್ನು ಬಲವಂತವಾಗಿ ಹೊರಕ್ಕೆ ಕರೆದೊಯ್ಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬಿಡಿಸಿಕೊಳ್ಳಲು ಯತ್ನಿಸಿದ ನಟಿಗೆ ಚೆನ್ನಾಗಿ ಥಳಿಸಿದ್ದಾನೆ.ಸಾರ್ವಜನಿಕರ ನೆರವಿನಿಂದ ಯುವತಿ ಬಚಾವಾಗಿದ್ದಾಳೆ. ಎಂದು ಸಬ್ ಇನ್ಸ್ ಪೆಕ್ಟರ್ ಗುರುಸ್ವಾಮಿ ಹೇಳಿದ್ದಾರೆ.

ಪ್ರಕರಣದ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಸದ್ಯಕ್ಕೆ ಮಹಿಳೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಐ ಗುರುಸ್ವಾಮಿ ತಿಳಿಸಿದರು. 24ಬೈಲವ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಇತ್ತೀಚೆಗೆ ಆಡಿಯೋ ರಿಲೀಸ್ ಆಗಿದೆ. ಚಿತ್ರ ಇನ್ನೂ ರಿಲೀಸ್ ಆಗಿಲ್ಲ. ನಿರ್ದೇಶಕನ ಬಂಧನದ ಸುದ್ದಿಯೂ ಸಿಕ್ಕಿಲ್ಲ.

ಈ ಚಿತ್ರದ ಲಾಭಾಂಶದ ಪ್ರತಿ ಪೈಸೆಯನ್ನು ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ನೀಡಲಾಗುವುದು ಎಂದು ಚಿತ್ರದ ಸೆಟ್ಟೇರಿದಾಗ ಈ ಚಿತ್ರದ ನಿರ್ಮಾಪಕರು ಒಂದು ಭರ್ಜರಿ ಹೇಳಿಕೆ ನೀಡಿದ್ದರು. ಅಂದ ಹಾಗೆ ವಿಎಸ್ ಫಣಿ ಕೆಲ ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A debutant actress was allegedly molested by a small time film director. The actress of the new low budget Telugu film 24 By Love approached the police alleging that the director V.S. Phani, molested her and asked for sexual favours. Jubilee Hills police booked a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more