ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಆಘಾತ : ರೈಲು ಹರಿದು 10 ಜನ ಸಾವು

By Mahesh
|
Google Oneindia Kannada News

ಆಂಧ್ರಪ್ರದೇಶ, ನ.3:ಗೊತ್ಲಂ ರೈಲ್ವೆ ನಿಲ್ದಾಣದ ಬಳಿ ಸುಮಾರು 10 ಜನ ಸಾವನ್ನಪ್ಪಿ 10ಕ್ಕೂ ಅಧಿಕ ಮಂದಿ ಗಾಯಗೊಂಡ ದುರ್ಘಟನೆ ಶನಿವಾರ ವರದಿಯಾಗಿದೆ. ಮೃತಪಟ್ಟವರು ಬೊಕರೊ ಎಕ್ಸ್ ಪ್ರೆಸ್ ಪ್ರಯಾಣಿಕರು ಎಂದು ಪೂರ್ವ ಕರಾವಳಿ ರೈಲ್ವೆ ವಕ್ತಾರರು ದೃಢಪಡಿಸಿದ್ದಾರೆ.

ಬೊಕರೊ ಉಕ್ಕಿನ ನಗರಕ್ಕೆ(ಅಲೆಪ್ಪಿಯಿಂದ ಧನ್ ಬಾದ್ ಮಾರ್ಗ) ತೆರಳುತ್ತಿದ್ದ ಪ್ರಯಾಣಿಕರ ಪೈಕಿ ಕೆಲವರು ತಾವು ಪ್ರಯಾಣಿಸುತ್ತಿದ್ದರೈಲಿನ ಒಂದು ಬೋಗಿಗೆ ಬೆಂಕಿ ಬಿದ್ದಿದೆ ಎಂಬ ಗಾಳಿ ಸುದ್ದಿಯನ್ನು ಕೇಳಿಸಿಕೊಂಡು ಗಾಬರಿಯಾಗಿದ್ದಾರೆ. ಕೆಲವರು ಟ್ರೈನಿನ ಚೈನ್ ಎಳೆದು ನಿಲ್ಲಿಸಿದ್ದಾರೆ. ನಂತರ ರೈಲಿನಿಂದ ಹಾರಿದ್ದಾರೆ ದುರದೃಷ್ಟವಶಾತ್ ಇನ್ನೊಂದು ತುದಿಯಿಂದ ಬರುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ದುರ್ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಗಾಳಿ ಸುದ್ದಿ ಹಬ್ಬಿಸಿದವರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೇಳಿದ್ದಾರೆ.

Ten persons run over by train near Vizianagaram in Andhra

ಬೆಂಗಳೂರಿಗೆ ಬಂದಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಅವರು ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರಿಗೆ ಕರೆ ಮಾಡಿ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಧನ್ ಬಾದ್ ಗೆ ಹೊರಟ್ಟಿದ್ದ ಬೊಕಾರೋ ಎಕ್ಸ್ ಪ್ರೆಸ್ ರೈಲಿನಿಂದ ಬೆಂಕಿ ಭೀತಿಯಲ್ಲಿ ಹಾರಿದ ಪ್ರಯಾಣಿಕರ ಮೇಲೆ ಅತಿ ವೇಗವಾಗಿ ಬರುತ್ತಿದ್ದ ರಾಯಗಢ-ವಿಜಯವಾಡ ಪ್ಯಾಸೇಂಜರ್ ರೈಲು ಹರಿದು ಹೋಗಿದೆ. 10 ಜನ ಸಾವನ್ನಪ್ಪಿದ್ದರೆ 15 ಜನ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಕತ್ತಲಿತ್ತು ಹಾಗೂ ಎದುರುಗಡೆ ಬರುತ್ತಿದ್ದ ರೈಲಿನ ಬೆಳಕು ಗುರುತಿಸಲು ಪ್ರಯಾಣಿಕರಿಗೆ ಸಾಧ್ಯವಾಗಿರಲಿಲ್ಲ. ಗಾಯಗೊಂಡವರ ಪೈಕಿ 10 ಜನ ಪರಿಸ್ಥಿತಿ ಗಂಭೀರವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. (ಪಿಟಿಐ)

English summary
Ten people were run over and an equal number injured by a speeding train near Vizianagaram town last evening, a railway official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X