ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ: ಇಬ್ಬರ ಬಂಧನ
ಹುಬ್ಬಳ್ಳಿ, ಏಪ್ರಿಲ್ 7: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳುತ್ತಲೇ ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ ಮತ್ತೆ ಚಿಗುರೊಡೆದಿದೆ.
ಶುಕ್ರವಾರ ಬೆಳಗ್ಗೆ ನಗರದ ಕೇಶ್ವಾಪುರದ ಮನೆಯೊಂದರಲ್ಲಿ ಬೆಟ್ಟಿಂಗ್ ದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ದಂಧೆಕೋರರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗಜಾನನ ಕಠಾರೆ ಹಾಗೂ ರಾಘವೇಂದ್ರ ಹನುಮಸಾಗರ ಎಂದು ಹೇಳಲಾಗಿದೆ. ಗಜಾನನ ಕಠಾರೆಯ ಸಹೋದರ ಕೂಡ ಬೆಟ್ಟಿಂಗ್ ದಂಧೆ ಕೋರ ಎಂದು ಹೇಳಲಾಗಿದೆ. ಗಜಾನನ ಕಠಾರೆ ಈ ಹಿಂದೆಯೂ ಬೆಟ್ಟಿಂಗ್ ದಂಧೆಯಲ್ಲಿ ಬಂಧನಕ್ಕೀಡಾಗಿ ಶಿಕ್ಷೆ ಅನುಭವಿಸಿದ್ದ. ಈಗ ಬಿಡುಗಡೆಯಾಗಿ ಬಂದ ನಂತರವೂ ಅದೇ ದಂಧೆ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಲೈವ್ ಮೆಷೀನ್, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications