ಹುಬ್ಬಳ್ಳಿ-ಬನಾರಸ್ ಬೇಸಿಗೆ ವಿಶೇಷ ರೈಲು; ವೇಳಾಪಟ್ಟಿ, ನಿಲ್ದಾಣ
ನೈಋತ್ಯ ರೈಲ್ವೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಬನಾರಸ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ರೈಲಿನ ವೇಳಾಪಟ್ಟಿ ಹೀಗಿದೆ.
ಹುಬ್ಬಳ್ಳಿ, ಮಾರ್ಚ್ 17; ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ ಮತ್ತು ಉತ್ತರ ಪ್ರದೇಶದ ಬನಾರಸ್ ನಡುವೆ ಬೇಸಿಗೆಯ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲು ನಂಬರ್ 07347 ಮತ್ತು 07348 ಸಂಖ್ಯೆಯ ರೈಲುಗಳು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ಕಾಶಿಗೆ ಹೋಗುವ ಪ್ರಯಾಣಿಕರಿಗೆ ಈ ರೈಲು ಸೇವೆ ಸಹಕಾರಿಯಾಗಿದೆ.
ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ ಹುಬ್ಬಳ್ಳಿಯಿಂದ ರೈಲು ಸಂಖ್ಯೆ 07347 ಮಾರ್ಚ್ 27ರಂದು ಹೊರಡಲಿದೆ. ಉತ್ತರ ಪ್ರದೇಶದ ಬನಾರಸ್ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 07348 ಮಾರ್ಚ್ 29ರಂದು ಹೊರಡಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಈ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.

ಈ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ. ಎಸಿ 2 ಟೈರ್ (1), ಎಸಿ 3ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ ಬೋಗಿಗಳು (10) ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟೆಗಳಿಂದ ಕೂಡಿದ ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳನ್ನು ರೈಲು ಹೊಂದಿದೆ. ಬೇಸಿಗೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಂಚಾರ ನಡೆಸುವುದರಿಂದ ಬೇಡಿಕೆಯ ಮೇಲೆ ಈ ರೈಲುಗಳನ್ನು ಓಡಿಸಲಾಗುತ್ತಿದೆ.
ವೇಳಾಪಟ್ಟಿ, ನಿಲ್ದಾಣ; ರೈಲು ಸಂಖ್ಯೆ 07347 ಮಾರ್ಚ್ 27ರ ಸೋಮವಾರ ಎಸ್. ಎಸ್. ಎಸ್. ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8.30ಕ್ಕೆ ಹೊರಟು ಬುಧವಾರ ಬೆಳಗ್ಗೆ 9.10ಕ್ಕೆ ಉತ್ತರ ಪ್ರದೇಶದ ಬನಾರಸ್ ನಿಲ್ದಾಣವನ್ನು ತಲುಪಲಿದೆ. ಇದೇ ರೈಲು (07348) ಮಾರ್ಚ್ 29ರ ಬುಧವಾರ ಬನಾರಸ್‌ನಿಂದ ರಾತ್ರಿ 8.40ಕ್ಕೆ ಬನಾರಸ್‌ನಿಂದ ಹೊರಟು ಶುಕ್ರವಾರ ಬೆಳಗ್ಗೆ 11.45ಕ್ಕೆ ಎಸ್. ಎಸ್. ಎಸ್. ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳಿಗೆ ಎರಡೂ ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ, ವಿಜಯಪುರ ಇಂಡಿ ರೋಡ್, ಸೋಲಾಪುರ, ದೌಂಡ್, ಅಹ್ಮದ್ ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಂಡ್ಯಾ, ಇಟಾರಸಿ, ಪಿಪಾರಿಯಾ, ಜಬ್ಬಲ್‌ಪುರ, ಕಟಿವಿ, ಮೈಹಾರ್, ಸತನಾ, ಮಾಣಿಕ್‌ಪುರ, ಪ್ರಯಾಗರಾಜ್, ಚೌಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಹುಬ್ಬಳ್ಳಿ-ತಂಜಾವೂರು ವಿಶೇಷ ರೈಲು; ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ ಮತ್ತು ತಮಿಳುನಾಡಿನ ತಂಜಾವೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲು ಒಟ್ಟು 5 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ. ಈ ಕುರಿತು ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಬೇಡಿಕೆಯ ಮೇರೆಗೆ 5 ಟ್ರಿಪ್‌ಗಳಿಗೆ ಮಾತ್ರ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಾಗುತ್ತಿದೆ.
ಈ ವಿಶೇಷ ರೈಲು ಎಸ್ಎಸ್‌ಎಸ್ ಹುಬ್ಬಳ್ಳಿ-ತಂಜವೂರು ನಡುವೆ ಮಾರ್ಚ್ 20, ಏಪ್ರಿಲ್ 3, 10, 17 ಮತ್ತು 24ರಂದು ಸಂಚಾರ ನಡೆಸಲಿದೆ. ತಂಜಾವೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 21, ಏಪ್ರಿಲ್ 4, 11, 18 ಮತ್ತು 25ರಂದು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿತ್ತು. ಬೇಸಿಗೆ ರಜೆ ಹಿನ್ನಲೆಯಲ್ಲಿ ಹಲವಾರು ಜನರು ಹೆಚ್ಚು ಸಂಚಾರ ನಡೆಸುವುದರಿಂ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆ ಹಲವು ರೈಲುಗಳನ್ನು ಓಡಿಸುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications