ಹುಬ್ಬಳ್ಳಿಯಲ್ಲಿ 80ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಬೀದಿನಾಯಿ, ಕಿಮ್ಸ್‌ಗೆ ದಾಖಲು
ಹುಬ್ಬಳ್ಳಿ, ಅಕ್ಟೋಬರ್ 28: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿವೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಪರಿಣಾಮ ಅಷ್ಟು ಮಂದಿಗೂ ಗಾಯಗಳಾಗಿವೆ. ನಾಯಿ ಕಡಿತ ಬೆನ್ನಲ್ಲೆ ಅವರೆಲ್ಲರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ನಗರದ ವಿವಿಧೆಡೆ ಬೀದಿ ನಾಯಿ ಕಂಡರೆ ದೂರು ಸರಿದು ಜನರು ಓಡಾಡುವಂತಾಗಿದೆ.
ನಗರದ ಗೋಕುಲ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಜನರು ಎಂದಿನಂತೆ ಓಡಾಡುತ್ತಿದ್ದಾರೆ. ಈ ವೇಳೆ ನಾಯಿಯೊಂದು ಜನರ ಮೇಲೆ ಎಗರಿಸಿದೆ. ಕಾಲಿಗೆಲ್ಲ ಕಚ್ಚಿದೆ. ರಸ್ತೆ ತುಂಬೆಲ್ಲ ಓಡಾಡಿ ಬರೋಬ್ಬರಿ ಸುಮಾರು 80ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಾಗಳುಗಳ ಕಾಲಿನಲ್ಲಿ ರಕ್ತ ಹರಿದಿದ್ದು, ಕೂಡಲೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಾಯಿಗೆ ಹುಚ್ಚು ಹಿಡಿದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಕಚ್ಚಿದ ನಾಯಿ ವರ್ತನೆ ನೋಡಿದರೆ, ಅದಕ್ಕೆ ಹುಚ್ಚು ಹಿಡಿದಿರಬೇಕು ಎಂದು ಗೋಕುಲ ರಸ್ತೆಯ ನಿವಾಸಿಗಳು, ರಸ್ತೆ ಬದಿ ವ್ಯಾಪಾರಿಗಳು ಮಾತನಾಡಿಕೊಂಡಿದ್ದಾರೆ. ನಾಯಿಯ ಬಾಯಿಂದ ಜೊಲ್ಲು ಸುರಿಯುವುದನ್ನು ನೋಡಿದ ಸ್ಥಳೀಯರು ನಾಯಿ ದಾಳಿಯಿಂದ ಆತಂಕಗೊಂಡಿದ್ದಾರೆ.
ಸಾಮಾನ್ಯವಾಗಿ ನಾಯಿಗಳಿಗೆ ತೊಂದರೆ ಕೊಟ್ಟರೆ, ಒಬ್ಬರು ಇಲ್ಲವೇ ಇಬ್ಬರಿಗೆ ಕಚ್ಚಬಹುದು. ಆದರೆ ಇದು ನಿರಂತರವಾಗಿ ಇಪ್ಪತ್ತು ಮಂದಿ ಮೇಲೆ ದಾಳಿ ನಡೆಸಿದೆ ಎಂದರೆ ಅದನ್ನು ಹಿಡಿದು ಬೋನಿಗೆ ಹಾಕಬೇಕು. ಇಲ್ಲವೇ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಜನರಿಗೆ ಇನ್ನಷ್ಟು ತೊಂದರೆ ಕೊಡುವ ಸಾಧ್ಯತೆ ಇದೆ.
ಒಂದು ವೇಳೆ ಹುಚ್ಚು ಹಿಡಿದಿದ್ದರೆ ನಾಯಿ ಕಡಿತಕ್ಕೆ ಒಳಗಾದವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಭೀರುವ ಸಾಧ್ಯತೆಗಳು ಇವೆ. ಈ ಬಗ್ಗೆ ಗಮನ ಹರಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಜನರು ಆಗ್ರಹಿಸಿದ್ದಾರೆ.
ಹುಚ್ಚು ನಾಯಿ ಸೆರೆ
ಪಾಲಿಕೆಯಿಂದ ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ ಸೆರೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಗೋಕುಲ್ ರೋಡ್ ನಲ್ಲಿರುವ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಇಂದು ಸಾಯಂಕಾಲ ಹುಚ್ಚು ನಾಯಿ ಯೊಂದು ಸಾರ್ವಜನಿಕರ ಮೇಲೆ ದಾಳಿ ಮಾಡಿ ಸುಮಾರು 80 ಕ್ಕಿಂತ ಹೆಚ್ಚು ಜನರಿಗೆ ಕಚ್ಚಿದ್ದು ದಾಳಿಗೊಳಗಾದ ಎಲ್ಲರನ್ನೂ ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ತಂಡವು ತಕ್ಷಣ ರವಾನಿಯಾಗಿದ್ದು ತಂಡವು ಪರಿವಾರ ಸೂಪರ ಮಾರ್ಕೆಟ್ ವಾಸವಿ ನಗರದ ಹತ್ತಿರ ಹುಚ್ಚುನಾಯಿಯನ್ನು ಸೆರೆ ಹಿಡಿಯಲಾಗಿದ್ದು ಸಾರ್ವಜನಿಕರು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications