ಹುಬ್ಬಳ್ಳಿ-ಹಿಂಡಾನ್ ಮಾರ್ಗದ ಸ್ಟಾರ್ ಏರ್ ವೇಳಾಪಟ್ಟಿ ಬದಲಾವಣೆ

ಹುಬ್ಬಳ್ಳಿ, ಜನವರಿ 31 : ಸ್ಟಾರ್ ಏರ್ ಹುಬ್ಬಳ್ಳಿ-ಹಿಂಡಾನ್ ಮತ್ತು ಬೆಂಗಳೂರು-ಕಲಬುರಗಿ-ಬೆಂಗಳೂರು ವಿಮಾನದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. 2019ರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಎರಡು ಮಾರ್ಗದಲ್ಲಿ ವಿಮಾನ ಸೇವೆಯನ್ನು ಸ್ಟಾರ್ ಏರ್ ಆರಂಭಿಸಿತ್ತು.

ವಾರದಲ್ಲಿ ಮೂರು ಬಾರಿ ಸಂಚಾರ ನಡೆಸುತ್ತಿರುವ ಹುಬ್ಬಳ್ಳಿ-ಹಿಂಡಾನ್ ಫೆಬ್ರವರಿ 15ರಿಂದ 5 ಬಾರಿ ಸಂಚಾರ ನಡೆಸಲಿದೆ. ಬೆಂಗಳೂರು-ಕಲಬುರಗಿ-ಬೆಂಗಳೂರು ವಿಮಾನ ವಾರದಲ್ಲಿ 6 ಬಾರಿ ಹಾರಾಟ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಸ್ಟಾರ್ ಏರ್ ಸಂಸ್ಥೆ 2019ರ ಅಕ್ಟೋಬರ್‌ರಲ್ಲಿ ಹುಬ್ಬಳ್ಳಿ-ಹಿಂಡಾನ್-ಹುಬ್ಬಳ್ಳಿ ವಿಮಾನ ಮತ್ತು ನವೆಂಬರ್‌ನಲ್ಲಿ ಕಲಬುರಗಿ-ಬೆಂಗಳೂರು-ಕಲಬುರಗಿ ನಡುವೆ ವಿಮಾನ ಸಂಚಾರವನ್ನು ಆರಂಭಿಸಿತ್ತು. ಈಗ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.

ಬದಲಾವಣೆಯಾದ ಹುಬ್ಬಳ್ಳಿ-ಹಿಂಡಾನ್ ಮತ್ತು ಬೆಂಗಳೂರು-ಕಲಬುರಗಿ-ಬೆಂಗಳೂರು ವಿಮಾನದ ವೇಳಾಪಟ್ಟಿ ಕೆಳಗಿನಂತಿದೆ. ವಾರದ ಬೇರೆ-ಬೇರೆ ದಿನಗಳಲ್ಲಿ ವಿಮಾನ ಬೇರೆ-ಬೇರೆ ಸಮಯದಲ್ಲಿ ಹಾರಾಟ ನಡೆಸಲಿದೆ.

ವೇಳಾಪಟ್ಟಿ ಹೀಗಿದೆ

ವೇಳಾಪಟ್ಟಿ ಹೀಗಿದೆ

* ಮಂಗಳವಾರ ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 12.40ಕ್ಕೆ ಹಿಂಡಾನ್ ತಲುಪಲಿದೆ. ಹಿಂಡಾನ್‌ನಿಂದ 1.05ಕ್ಕೆ ಹೊರಡುವ ವಿಮಾನ, 3.45ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ.

* ಬುಧವಾರ 1.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ಹಿಂಡಾನ್ ತಲುಪಲಿದೆ. ಸಂಜೆ 4.10ಕ್ಕೆ ಹಿಂಡಾನ್ ಬಿಟ್ಟು ಸಂಜೆ 6.50ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ.

ಗುರುವಾರ, ಶನಿವಾರದ ವೇಳಾಪಟ್ಟಿ

ಗುರುವಾರ, ಶನಿವಾರದ ವೇಳಾಪಟ್ಟಿ

* ಗುರುವಾರ ಮತ್ತು ಶನಿವಾರ ಮಧ್ಯಾಹ್ನ 2.35ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 5.10ಕ್ಕೆ ಹಿಂಡಾನ್ ತಲುಪಲಿದೆ. ಸಂಜೆ 5.30ಕ್ಕೆ ಹಿಂಡಾನ್ ಬಿಟ್ಟು ರಾತ್ರಿ 8.15ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ.

* ಭಾನುವಾರ ಮಧ್ಯಾಹ್ನ 12.50ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.30ಕ್ಕೆ ಹಿಂಡಾನ್ ತಲುಪಲಿದೆ. 3.55ಕ್ಕೆ ಹಿಂಡಾನ್‌ನಿಂದ ಹೊರಟು ಸಂಜೆ 6.35ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

ಬೆಂಗಳೂರು-ಕಲಬುರಗಿ

ಬೆಂಗಳೂರು-ಕಲಬುರಗಿ

* ಸೋಮವಾರ ಬೆಳಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 12.50ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 1.10ಕ್ಕೆ ಕಲಬುರಗಿಯಿಂದ ಹೊರಡುವ ವಿಮಾನ 2.20ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ.

* ಬುಧವಾರ ಬೆಳಗ್ಗೆ 8.40ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 9.40ಕ್ಕೆ ಕಲಬುರಗಿ ತಲುಪಲಿದೆ. ಬೆಳಗ್ಗೆ 10 ಗಂಟೆಗೆ ಕಲಬುರಗಿಯಿಂದ ಹೊರಟು 11 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಗುರುವಾರ, ಶುಕ್ರವಾರದ ವೇಳಾಪಟ್ಟಿ

ಗುರುವಾರ, ಶುಕ್ರವಾರದ ವೇಳಾಪಟ್ಟಿ

* ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 11.30ಕ್ಕೆ ಕಲಬುರಗಿ ತಲುಪಲಿದೆ. 11.50ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 12.50ಕ್ಕೆ ಬೆಂಗಳೂರು ತಲುಪಲಿದೆ.

* ಭಾನುವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.35ಕ್ಕೆ ಕಲಬುರಗಿಗೆ ಆಗಮಿಸಲಿದೆ. ಮಧ್ಯಾಹ್ನ 1.55ಕ್ಕೆ ಕಲಬುರಗಿ ಬಿಟ್ಟು 2.55ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+