Love Jihad: ಹಿಂದೂ ಯುವತಿಯರ ರಕ್ಷಣೆಗೆ ಸಹಾಯವಾಣಿ ಆರಂಭಿಸಿದ ಶ್ರೀರಾಮ್ ಸೇನೆ: ಮುತಾಲಿಕ್ ಕರೆ ಏನು?

ಬೆಂಗಳೂರು, ಮೇ 29: ಕರ್ನಾಟಕ ಸೇರಿದಂತೆ ದೇಶದಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಯೋಜನಾಬದ್ಧವಾಗಿ ಇಸ್ಲಾಂನ ಕುತಂತ್ರದಿಂದ ಪ್ರೀತಿ-ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಮತಾಂತರ ಮಾಡುವುದು ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಯುವತಿಯರ ರಕ್ಷಣೆಗಾಗಿ ಇಂದಿನಿಂದ ಸಹಾಯವಾಣಿ ಆರಂಭಿಸಿದ್ದೇವೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು 24x7 ಸಹಾಯವಾಣಿಗೆ (9090443444) ಚಾಲನೆ ನೀಡಿ ನಂತರ ಮಾತನಾಡಿದರು. ಲವ್ ಜಿಹಾದ್‌ದಿಂದ ಹಿಂದೂ ಯುವತಿಯರ ರಕ್ಷಣೆ ಮಾಡಲು ಶ್ರೀರಾಮ ಸೇನಾ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ ಎಂದರು.

Sri Rama Sene Started 24x7 Helpline Protect Hindu Women from Love Jihad know More

ಈ ಸಹಾಯವಾಣಿಯನ್ನು ಹುಬ್ಬಳ್ಳಿಯಲ್ಲಿರುವ ನಮ್ಮ ಸೇನಾದ ಕೇಂದ್ರ ಕಚೇರಿಯಿಂದ ನಿರ್ವಹಣೆ ಮಾಡಲಾಗುವುದು. ಇದರಲ್ಲಿ ವಕೀಲರು, ಮಹಿಳಾ ಆಪ್ತಸಮಾಲೋಚಕರು ಸೇರಿ ಐವರ ತಂಡ ಕಾರ್ಯನಿರ್ವಹಿಸಲಿದ್ದಾರೆ. ಹಿಂದೂ ಯುವತಿಯರು ಮತ್ತು ಮಹಿಳೆಯರು ಸಹಾಯವಾಣಿ ಸಂಖ್ಯೆಗೆ (9090443444) ಕರೆ ಮಾಡಿದರೆ ದಿನದ 24 ಗಂಟೆಯೂ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.

ಆತ್ಮಹತ್ಯೆ ಮಾಡಿಕೊಳ್ಳದಂತೆ ಮುತಾಲಿಕ್ ಕರೆ

ಸಹಾಯವಾಣಿಗೆ ಕರೆ ಮಾಡಿದ ಮಹಿಳೆಯರು, ಯುವತಿಯರಿಗೆ ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬಲಾಗುವುದು. ಹಿಂದೂ ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಅವರು ಕರೆ ನೀಡಿದರು. ಇಸ್ಲಾಂನ ಕುತಂತ್ರದಿಂದ ಪ್ರೀತಿ-ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಮತಾಂತರ ಮಾಡುವುದು ನಡೆಯುತ್ತಿದೆ.

Sri Rama Sene Started 24x7 Helpline Protect Hindu Women from Love Jihad know More

ಇತಿಹಾಸದ ಕಾಲದಿಂದಲೂ ಇಸ್ಲಾಂನ ಕ್ರೌರ್ಯ ನಿರಂತರವಾಗಿ ನಡೆಯುತ್ತಲಿದೆ. ಇಂತಹ ಕ್ರೂರಿಗಳಿಗೆ ತಕ್ಕ ಉತ್ತರ ಕೊಡಲು ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಶ್ರೀರಾಮ ಸೇನಾದಿಂದ ಅಗತ್ಯ ತರಬೇತಿ ನೀಡಲಾಗುವುದು.

ಆಡಳಿತದಲ್ಲಿರುವ ರಾಜಕಾರಣಿ, ವಿಪಕ್ಷ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಬದಲು ಇಂತಹ ಘಟನೆಗಳು ನಡೆದಾಗ ಪರಿಹಾರ ಹುಡುಕುವ ಕೆಲಸ ಮಾಡಬೇಕು. ಕಾನೂನು ಪ್ರಕ್ರಿಯೆ ಬಿಗಿಗೊಳಿಸಬೇಕು. ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಹಿಂದೂ ಹೆಣ್ಣುಮಕ್ಕಳಿಗೆ ಆಗುವ ಅನ್ಯಾಯ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಅಂಜಲಿ-ನೇಹಾ ಹಂತಕರಿಗೆ ನಾವೇ ಶಿಕ್ಷೆ ಕೊಡುತ್ತೇವೆ!

ಹುಬ್ಬಳ್ಳಿಯಲ್ಲಿ ಪ್ರೀತಿ ವಿಷಯವಾಗೇ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳಲ್ಲಿ ಆರೋಪಗಳನ್ನು ಸಾಕ್ಷ್ಯ ಸಿಗಲಿಲ್ಲವೆಂದು ಬಿಡುಗಡೆ ಮಾಡಿದರೆ ಇಬ್ಬರಿಗೂ ನಾವೇ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಅವರು ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಎಚ್ಚರಿಕೆ ಕೊಟ್ಟರು.

ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವ, ರಕ್ಷಣೆ ಇಲ್ಲ. ಹಿಂದೂ ಯುವತಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂರು ಹಿಂದೂ ಯುವತಿಯರಿಗೆ ತೊಂದರೆ ಕೊಟ್ಟರೆ ನಾವು ನ್ಯಾಯಾಯಲದ ಮೊರೆ ಹೋಗುವುದಿಲ್ಲ. ಬದಲಾಗಿ ನಾವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಅವರು ಗುಡುಗಿದರು.

ಪಾಲಕರಿಗೆ ಮುತಾಲಿಕ್ ಕಿವಿ ಮಾತು

ಹಿಂದೂ ಯುವತಿಯರ ಪಾಲಕರು ಸಹಿತ ಮಕ್ಕಳ ಮೇಲೆ ನಿಗಾ ವಹಿಸಬೇಕು. ಅವರನ್ನು ಹದ್ದು ಬಸ್ತಿನಲ್ಲಿಡಬೇಕು. ಅವರ ಕಾಲೇಜ್‌ಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಪಶ್ಚಾತ್ತಾಪ ಪಡುವ ಬದಲು ಮೊದಲೇ ಮಕ್ಕಳ ಭವಿಷ್ಯಕ್ಕಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

2500 ಮುಸ್ಲಿಂ ಯುವತಿಯರಿಗೆ ಮದುವೆ

ಸರ್ಕಾರ, ಪೊಲೀಸ್ ಇಲಾಖೆ ವಿಫಲ ಆಗಿರುವುದರಿಂದ ನಾವು ಸಹಾಯವಾಣಿ ಆರಂಭಿಸಬೇಕಾಯಿತು. ನೈತಿಕವಾಗಿ ನಾವು ಈ ಜವಾಬ್ದಾರಿ ತೆಗೆಕೊಂಡಿದ್ದೇವೆ. ನಾವು 2500 ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರೊಂದಿಗೆ ಮದುವೆ ಮಾಡಿಸಿದ್ದೇವೆ. ಅವರಿಗೆ ರಕ್ಷಣೆ ಒದಗಿಸಿ ಉದ್ಯೋಗ ಸಹ ನೀಡಲಾಗಿದೆ. ಆದರೆ ಮುಸ್ಲಿಂ ರ ಉದ್ದೇಶವೇ ಬೇರೆ ನಮ್ಮ ಉದ್ದೇಶ ಬೇರೆ ಎಂದು ಅವರು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+