Hubballi-Bengaluru Trains: ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!

ಹುಬ್ಬಳ್ಳಿ, ಫೆಬ್ರವರಿ.26: ದೇಶದಲ್ಲಿ ರೈಲು ವ್ಯವಸ್ಥೆಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದ ಸುಮಾರು 40 ಸಾವಿರ ಬೋಗಿಗಳನ್ನು ವಂದೇ ಭಾರತ್ ರೈಲಿನ ಗುಣಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ರಾಜ್ಯಗಳಲ್ಲಿಯೂ ರೈಲುಗಳನ್ನು ಮೇಲ್ದರ್ಜೆಗೆ ಏರಿಸಲು ರೈಲ್ವೇ ವಿಭಾಗಗಳು ಚಿಂತಿಸುತ್ತಿವೆ. ಕೆಲವು ರೈಲುಗಳು ಸೌಲಭ್ಯಗಳಲ್ಲಿ ಉತ್ತಮವಾಗಿದ್ದರೂ ಕೂಡ, ಸಮಯಕ್ಕೆ ಸರಿಯಾಗಿ ಟ್ರಾಕ್‌ಗೆ ಇಳಿಯುವುದಿಲ್ಲ. ನಿಧಾನಗತಿಯ ಕಾರಣಕ್ಕೆ ಜನ ಟ್ರೈನ್‌ಗಳನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ - ಬೆಂಗಳೂರು ಮಾರ್ಗದಲ್ಲಿ ಬದಲಾವಣೆ ಮಾಡಲು ನೈಋತ್ಯ ರೈಲ್ವೆ ಸಿದ್ಧವಾಗಿದೆ.

South Western Railway to Increase Speed of Hubballi-Bengaluru Trains to 130 KMPH

ಹುಬ್ಬಳ್ಳಿ - ಬೆಂಗಳೂರು ಮಾರ್ಗದ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 110 ಕಿಲೋಮೀಟರ್‌ನಿಂದ 130 ಕಿಲೋಮೀಟರ್‌ಗೆ ಹೆಚ್ಚಿಸಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಎಸ್‌ಡಬ್ಲ್ಯೂಆರ್ ಜನರಲ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ರೈಲುಗಳ ವೇಗವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದ ಎಸ್‌ಡಬ್ಲ್ಯೂಆರ್ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್, "ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸಲು ಈ ಮಾರ್ಗದ ರೈಲುಗಳ ವೇಗದ ಮಿತಿಯನ್ನು ಗಂಟೆಗೆ 110 ಕಿ.ಮೀ ನಿಂದ 130 ಕಿ.ಮೀ.ಗೆ ಹೆಚ್ಚಿಸಲು ರೈಲ್ವೇ ಮಂಡಳಿಗೆ ಎಸ್‌ಡಬ್ಲ್ಯೂಆರ್ ತನ್ನ ಪ್ರಸ್ತಾವನೆಯನ್ನು ಹಂಚಿಕೊಂಡಿದೆ. ವಿದ್ಯುದ್ದೀಕರಣದ ಕಾರ್ಯಗಳಿಗಾಗಿ ಹುಬ್ಬಳ್ಳಿ - ಬೆಂಗಳೂರು ಮಾರ್ಗ ಪೂರ್ಣಗೊಂಡಿದೆ" ಎಂದು ಹೇಳಿದ್ದಾರೆ.

ಮೊದಲು ಗಂಟೆಗೆ 130 ಕಿ.ಮೀ ಇದ್ದ ಬೆಂಗಳೂರು - ಚೆನ್ನೈ ಮತ್ತು ಬೆಂಗಳೂರು - ಹೈದರಾಬಾದ್ ನಡುವಿನ ವೇಗದ ಮಿತಿಯನ್ನು ಗಂಟೆಗೆ 160 ಕಿಮೀಗೆ ಉನ್ನತಿಕರಿಸಲಾಗಿದೆ. ಅದೇ ರೀತಿಯಲ್ಲಿ ಹುಬ್ಬಳ್ಳಿ - ಬೆಂಗಳೂರು ರೈಲುಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 110 ಕಿ.ಮೀ ನಿಂದ 130 ಕಿ.ಮೀ.ಗೆ ಹೆಚ್ಚಿಸಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+