ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲು ಬಿಡುಗಡೆ ಮಾಡಿದ ನೈರುತ್ಯ ರೈಲ್ವೆ
ಹುಬ್ಬಳ್ಳಿ, ಅ.05: ದಸರಾ ಹಬ್ಬದ ನಿಮಿತ್ತ ಬುಧವಾರ ಮೈಸೂರಿನಿಂದ ಹುಬ್ಬಳ್ಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲು ನೈರುತ್ಯ ರೈಲ್ವೆ (SWR) ಸಜ್ಜಾಗಿದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.
ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM) ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
"ದಸರಾ ಹಬ್ಬದ ಪ್ರಯುಕ್ತ 05.10.2022ರಂದು ರೈ. ಸಂ. 06239 ಮೈಸೂರು -ಎಸ್.ಎಸ್.ಎಸ್.ಹುಬ್ಬಳ್ಳಿ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚರಿಸಲಿದೆ. ಈ ರೈಲು 05.10.2022ರಂದು ರಾತ್ರಿ 11 ಗಂಟೆಗೆ ಮೈಸೂರಿನಿಂದ ಹೊರಡಲಿದ್ದು ಮರುದಿನ ಬೆಳಿಗ್ಗೆ 08:45 ಗಂಟೆಗೆ ಹುಬ್ಬಳ್ಳಿಯನ್ನು ತಲುಪಲಿದೆ" ಎಂದು ಪ್ರಕಟಣೆ ಹೊರಡಿಸಲಾಗಿದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಪ್ಪಿಸಲು ಮೈಸೂರಿನಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ದಸರಾ ಸಂದರ್ಭದಲ್ಲಿ ಏಕಮುಖ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ ನೀಡಲು ನೈರುತ್ಯ ರೈಲ್ವೆ ನಿರ್ಧರಿಸಿದೆ ಎಂದು 'ರನ್ನಿಂಗ್ ಆಫ್ ಫೆಸ್ಟಿವಲ್ ಎಕ್ಸ್‌ಪ್ರೆಸ್ ವಿಶೇಷ ರೈಲು' ಶೀರ್ಷಿಕೆಯ ಪತ್ರಿಕಾ ಟಿಪ್ಪಣಿ ತಿಳಿಸಿದೆ.
ದಸರಾ ಹಬ್ಬದ ಪ್ರಯುಕ್ತ 05.10.2022ರಂದು ರೈ. ಸಂ. 06239 ಮೈಸೂರು -ಎಸ್.ಎಸ್.ಎಸ್.ಹುಬ್ಬಳ್ಳಿ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚರಿಸಲಿದೆ. ಈ ರೈಲು 05.10.2022ರಂದು ರಾತ್ರಿ 11 ಗಂಟೆಗೆ ಮೈಸೂರಿನಿಂದ ಹೊರಡಲಿದ್ದು ಮರುದಿನ ಬೆಳಿಗ್ಗೆ 08:45 ಗಂಟೆಗೆ ಹುಬ್ಬಳ್ಳಿಯನ್ನು ತಲುಪಲಿದೆ.#Mysuru #Bengaluru #Hubballi #Railways #Dasara pic.twitter.com/dmwIP6RIN5
— DRM Hubballi (@drmubl) October 4, 2022
ರೈಲು ಕೇವಲ ಏಕಮುಖವಾಗಿರುತ್ತದೆ, ವಿಶ್ವ ವಿಖ್ಯಾತ ದಸರಾ ನಡೆಯುತ್ತಿರುವ ಜನನಿಬಿಡ ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ದಸರಾ ಉತ್ಸವದ ಬಳಿಕ ಜನರನ್ನು ಹುಬ್ಬಳ್ಳಿಗೆ ಕರೆತರಲು ಮಾತ್ರ ರೈಲು ಸೇವೆ ನೀಡಲಾಗಿದೆ.

ಒಟ್ಟು 16 ಕೋಚ್‌ಗಳನ್ನು ಹೊಂದಿರುವ ಈ ಹಬ್ಬದ ವಿಶೇಷ ರೈಲಿಗೆ ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ರಾಣಿಬೆನ್ನೂರು ಮತ್ತು ಹಾವೇರಿಯ ಹತ್ತು ನಿಲ್ದಾಣಗಳಲ್ಲಿ ನಿಲುಗಡೆ ಇದೆ.
"ವಿಶೇಷ ರೈಲು 1 - ಎಸಿ, 10 - ಎರಡನೇ ದರ್ಜೆಯ ಸ್ಲೀಪರ್ ಮತ್ತು 2 - ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್ - ವ್ಯಾನ್‌ಗಳು ಅಥವಾ ದಿವ್ಯಾಂಗರ ಬೋಗಿಗಳು ಸೇರಿ ಒಟ್ಟು 16 ಕೋಚ್‌ಗಳ ಸಂಯೋಜನೆ ಹೊಂದಿರುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications