ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ರು

ಹುಬ್ಬಳ್ಳಿ, ಏಪ್ರಿಲ್ 22 : ಒಂಟಿ ಮಹಿಳೆಯ ಮೇಲೆ ಗಂಡ, ಹೆಂಡತಿ ಮತ್ತು ಮಗ ಮೂರು ಜನ ಸೇರಿಕೊಂಡು ಮಾರಕಾಸ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹಳೇ ಹುಬ್ಬಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ನಿರ್ಮಲಾ ಹಲ್ಲೆಗೊಳಗಾದ ಮಹಿಳೆ.

ಕಳೆದ ಕೆಲ ತಿಂಗಳ ಹಿಂದೆ ಮನೆಯಲ್ಲಿ ಅಡಚಣೆ ಇರುವ ಕಾರಣ ಸರೋಜಾ ಹೊಸಮನಿ ಎಂಬ ಮಹಿಳೆ 7 ಲಕ್ಷ ಹಣವನ್ನು ನಿರ್ಮಲಾ ಎಂಬುವರ ಬಳಿ ಸಾಲವಾಗಿ ಪಡೆದಿದ್ದರು. ಅಲ್ಲದೇ ಸರೋಜಾ ಮತ್ತು ನಿರ್ಮಲಾ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಅಂಬೇಡ್ಕರ್ ನಗರದ ನಿವಾಸಿಗಳು.

ಆದರೆ ಸಾಲ ತೆಗೆದುಕೊಂಡ ಸರೋಜಾಳ ಮನೆಗೆ ನಿರ್ಮಲಾ ಹೋದಾಗ ಮನೆಯಲ್ಲಿದ್ದ ಮಗ ರಾಕೇಶ್, ಗಂಡಾ ರಮೇಶ್ ನಿರ್ಮಲಾ ಜೊತೆಯಲ್ಲಿ ಜಗಳ ವಾಡಿದ್ದಾರೆ.

Single woman assaulted for asking money

ಮಾತಿಗೆ ಮಾತು ಬೆಳೆದು ನಿರ್ಮಲಾ ಮೇಲೆ ತಂದೆ-ಮಗ ಇಬ್ಬರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಗಾಯಾಳು ನಿರ್ಮಲಾ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+