ಕಪಲ್ಸ್‌ ಸೋಗಿನಲ್ಲಿ ಬ್ರ್ಯಾಂಡೆಡ್ ಅಂಗಡಿಗೆ ಬಂದ ಜೋಡಿ ಕದ್ದು ಪರಾರಿ: 45 ಆರೋಪಿಗಳು ಗಡಿಪಾರು

ಹುಬ್ಬಳ್ಳಿ, ಜನವರಿ 15: ಹಣಗಳ್ಳತನ್ನಕ್ಕೆ ಯಾವೆಲ್ಲ ಮಾರ್ಗಗಳನ್ನು ಅನುಸರಿಸುತ್ತಾರೆ. ತಲೆ ಉಪಯೋಗಿಸಿ ಏನೆಲ್ಲ ಮಾಡಿ ಹಣ ಲಪಟಾಯಿ ಪರಾಯಾಗುತ್ತಾರೆ, ಕೊನೆಗೆ ಪೊಲೀಸರ ಅತಿಥಿಗಳಾಗುತ್ತಾರೆ. ಇಂತದ್ದೇ ಪ್ರಕರಣ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ನಡೆದಿದೆ. ಖರೀದಿ ನೆಪದಲ್ಲಿ ಬಟ್ಟೆ ಅಂಗಡಿಗೆ ಬಂದ ಕಪಲ್ಸ್ ಹಣ ಕದ್ದು ಪರರಿಯಾಗಿದ್ದಾರೆ. ಇವರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ನಗರದ ಕೊಪ್ಪಿಕರ್ ರಸ್ತೆಯ ಬಟ್ಟೆ ಅಂಗಡಿಯಲ್ಲಿ ನಡೆದಿದೆ. ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಗೆ ತೆರಳದ ಜೋಡಿ ತಮ್ಮ ಕೈಚಳಕ ತೋರಿಸಿದೆ. ಇಬ್ಬರು ಮಳ್ಳರಂತೆ ಬಂದು ಬಟ್ಟೆ ಮಾರಾಟ ಮಾಡಿ ಇಟ್ಟಿದ್ದ ಹಣದ ಪೆಟ್ಟಿಗೆಯಿಂದ ಹಣ ಲಪಟಾಯಿಸಿದ್ದಾರೆ. ಅವರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ದೋಚುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Rs 30000 Stolen from Branded Shop by Couples Hubballi-Dharwad s 45 Accused Deported

ಬಟ್ಟೆ ಖರೀದಿಗೆಂದು ಫುಲ್ ಟಿಪ್‌ ಆಫ್ ಈ ಜೋಡಿ ಮಳಿಗೆಗೆ ಎಂಟ್ರಿ ಕೊಟ್ಟಿತ್ತು. ಎಂಥವರಾದರೂ ಇವರು ಗ್ರಾಹಕರು ಅಂತಲೇ ಭಾವಿಸಬೇಕು, ಆ ಮಟ್ಟಿಗೆ ಸೋಗಿನಲ್ಲಿ ಬಂದಿದ್ದರು. ಅಂಗಡಿ ಸಿಬ್ಬಂದಿ ಇಲ್ಲದ್ದ ನೋಡಿಕೊಂಡೆ ಒಳ ಬಂದಿದ್ದಾರೆ ಎನ್ನಲಾಗಿದೆ. ಹಣವನ್ನು ಕಳ್ಳತನ ಮಾಡುವುದೇ ಇವರ ವೃತ್ತಿಯಾಗಿದೆ.

ಈ ಇಬ್ಬರು ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಯಿಂದ 30,000 ರೂ.ಹಣವನ್ನು ಕಳ್ಳತನ ಮಾಡಿಕೊಂಡು ಕಾಲ್ಕಿತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇ ಜೋಡಿ ಆರೋಪಿಗಳು ಹಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಬೇರೆಯವರ ಅಂಗಡಿಗಳಿಗೆ ನುಗ್ಗುವ ಮೊದಲು ಹುಷಾರಾಗಿರುವಂತೆ ಖಾಕಿ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಟ್ಟಿದೆ.

Rs 30000 Stolen from Branded Shop by Couples Hubballi-Dharwad s 45 Accused Deported

45 ಆರೋಪಿಗಳ ಗಡಿಪಾರು: ಪೊಲೀಸ್ ಆಯುಕ್ತ

ಹುಬ್ಬಳ್ಳಿ-ಧಾರವಾಡ ಇತ್ತೀಚೆಗೆ ಕೊಲೆ, ಫೈರಿಂಗ್, ಪುಂಡರ ಅಟ್ಟಹಾಸ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಂದ ಸುದ್ದಿಯಾಗುತ್ತಿದೆ. ಪ್ರೀತಿ ವಿಚಾರವಾಗಿ ಇಬ್ಬರು ಯುವತಿಯರ ಹತ್ಯೆ ಕೃತ್ಯಗಳು ಅವಳಿನಗರವನ್ನು ರಾಜ್ಯವ್ಯಾಪಿ ಸುದ್ದಿಯಾಗಿದೆ. ಇದೀಗ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಒಟ್ಟು ಅವಳಿನಗರದ ಒಟ್ಟು 45 ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್ .ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆ, ಸರಬರಾಜು ತಡೆಗೆ ಕ್ರಮಕ್ಕೆ ಮುಂದಾಗಿತ್ತು ಇದರ ಫಲವಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಾದಕ ವಸ್ತುಗಳ ಮುಕ್ತ ನಗರಕ್ಕೆ ಮುಂದಾಗಿತ್ತು. ಈ ಸಮಯದಲ್ಲಿ ಸಾಕಷ್ಟು ಪ್ರಕರಣ ದಾಖಲು ಮಾಡಲಾಗಿತ್ತು ಗಾಂಜಾ, ಡ್ರಗ್ಸ್ ಸರಬರಾಜು ಮಾಡುವವರ ಮೇಲೆ ಕ್ರಮ ಮಾಡಲಾಗಿದೆ ಎಂದು ತಿಳಿಸಿದರು.

ಪದೇ ಪದೇ ಮಾದಕ ವಸ್ತುಗಳ ಸರಬರಾಜು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಅನ್ವಯ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕೇಲವರನ್ನ ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದ ವ್ಯಾಪ್ತಿಯಲ್ಲಿ 45 ಆರೋಪಿಗಳ ಗಡೀಪಾರು ಆದೇಶ ಈಗ ಜಾರಿ ಬಂದಿದ್ದು ಆಡಳಿತಾತ್ಮಕ ಪ್ರಕ್ರಿಯೆ ನಡೆಸಲಾಗುವುದು.

ಆರೋಪಿಗಳನ್ನು ಬೀದರ್, ಕಲಬುರಗಿ, ಯಾದಗಿರಿ, ದಕ್ಷಿಣ ಕನ್ನಡ ಮುಂತಾದ ಕಡೆಗಳಲ್ಲಿ ಈಗಾಗಲೇ ಗಡಿಪಾರು ಮಾಡಲಾಗಿದೆ. ಈ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ, ಕಳ್ಳತನ, ಕೊಲೆ, ಜೂಜು, ದರೋಡೆ ಸೇರಿದಂತೆ ಇತರ ಅಪಪಾರ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+