ಹುಬ್ಬಳ್ಳಿಯಲ್ಲಿ ಸಂಭ್ರಮದ ರಾಯರ ಆರಾಧನೆ, ರಥೋತ್ಸವ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 21: ಸ್ಥಳೀಯ ಭವಾನಿ ನಗರದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನೆ ನಂತರ ಬರುವ ಉತ್ತರಾರಾಧನೆ ದಿನದಂದು ಈ ರಥೋತ್ಸವ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ನಡೆಯಿತು.

Raghavendra

ರಥೋತ್ಸವ ಮತ್ತು ಉತ್ತರಾರಾಧನೆ ಅಂಅಗವಾಗಿ ಅರ್ಚಕ ಗುರುರಾಜ ಸಾಮಗ ನೇತೃತ್ವದಲ್ಲಿ ಭಾನುವಾರ ಬೆಳಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಪ್ರಾತಃಕಾಲದಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ, ರಾಯರ ದರ್ಶನಕ್ಕೆ ಕಾಯುತ್ತಿದ್ದರು.

ratha

ಗುರುರಾಯರ ಘೋಷಣೆಗಳೊಂದಿಗೆ ಸಂಜೆ ಜರುಗಿದ ರಥೋತ್ಸವದಲ್ಲಿ ನಗರದ ವಿವಿಧ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.[ಸಿದ್ಧಾರೂಢರ ತೆಪ್ಪೋತ್ಸವದಲ್ಲಿ ಖರ್ಜೂರದ ಬದಲು ಮೊಬೈಲ್ ಪುಷ್ಕರಣಿಗೆ]

ರಾಯರ ರಥೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಘವೇಂದ್ರ ಆರಾಧನಾ ಉತ್ಸವ ಸಮಿತಿ ವ್ಯವಸ್ಥಾಪಕ ಕೃಷ್ಣಮೂರ್ತಿ ಜೋಶಿ, ಪಂ.ಕೃಷ್ಣಾಚಾರ್ಯ ಸಿರಗುಪ್ಪಾ ಸೇರಿದಂತೆ ಇತರೆಡೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹ ಪಾಲ್ಗೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raghavendra swami aradhane, rathotsava happened in Hubballi with a huge crowd. Morning to evening saveral rituals followed in mutt.
Please Wait while comments are loading...