ಚುನಾವಣಾ ಮೈತ್ರಿ : ಶಿವಸೇನೆ ಜತೆ ಕೈಜೋಡಿಸಿದ ಶ್ರೀರಾಮಸೇನೆ

Posted By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 26: ಶಿವಸೇನೆ ಸೇರ್ಪಡೆ ಬಗ್ಗೆ ಆಸಕ್ತಿ ಹೊಂದಿದ್ದು, ಇನ್ನೆರಡು ಸುತ್ತಿನ ಮಾತುಕತೆಯ ನಂತರ ಸೇರ್ಪಡೆಯಾಗುವುದಾಗಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಮತ್ತು ಶ್ರೀರಾಮ ಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಸೇನೆಯ ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನ ಪ್ರಕರವಾಗಿ ಪ್ರತಿಪಾದಿಸುವ ಪಕ್ಷವಾಗಿದೆ. ನನ್ನ ಪಕ್ಷವನ್ನ ಸೇರುವಂತೆ ಹಲವು ಮುಖಂಡರು ಮನವಿ ಮಾಡಿಕೊಂಡಿದ್ದರು.

Pramod Muthalik says Sri Rama Sena to join hands with Shiva Sena

ಆದ್ರೆ, ಗಡಿ, ನದಿ ನೀರು, ಭಾಷೆ ವರ್ಷದ ವಿಚಾರದಲ್ಲಿ ಗೊಂದಲಗಳಿರುವುದರಿಂದ ಇದುವರೆಗೆ ಹಿಂದೆ ಸರಿದಿದ್ದೆ. ಆದರೆ, ಈಗ ಎಲ್ಲ ವಿಚಾರಗಳನ್ನು ಸ್ಪಷ್ಟಪಡಿಸಿಕೊಂಡು ಸೇರುವ ನಿರ್ಧಾರ ಕೈಗೊಳ್ಳುತ್ತೇನೆ.

ಭಾಷೆ, ಗಡಿ, ನೀರಿನ ವಿಚಾರ ಬಂದಾಗ ಆಯಾ ರಾಜ್ಯದ ಹಿತ ಕಾಪಾಡುವದು ಪಕ್ಷದ ಬದ್ದತೆ. ಈ ಬಗ್ಗೆ ಶಿವಸೇನೆಗೆ ಮನವರಿಕೆ ಮಾಡಿದ್ದೇನೆ , ಇನ್ನು ಎರಡು ಸುತ್ತು ಮಾತುಕತೆ ನಡೆಸಿದ ಬಳಿಕ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಮುತಾಲಿಕ್, ಬಸನಗೌಡ ಯತ್ನಾಳ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಶಿವಸೇನೆಯ ಬಂದ್ರೆ ಹೊಸ ದಿಕ್ಕಿನ ರಾಜಕೀಯ ನಿರ್ಮಾಣವಾಗಲಿದೆ. ನಾನು ಕನ್ನಡಿಗ, ನನ್ನ ಮಾತ್ರು ಬಾಷೆ ಕನ್ನಡ. ನನ್ನ ಮೊದಲ ಆದ್ಯತೆ ಕನ್ನಡ. ಈ ವಿಚಾರವನ್ನ ನಾನು ಶಿವಸೇನೆಗೆ ಸ್ಪಷ್ಟಪಡಿಸಿದ್ದೇನೆ ಅಂತ ಮುತಾಲಿಕ ಸ್ಪಷ್ಟಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Ram Sena chief Pramod Muthalik,MLC, former union minister Basanagouda Yatnal to join hands with Shiv Sena and contest next election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ