ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿ ಜನವರಿ 5ರಿಂದ 14ರವರೆಗೆ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ

ಹುಬ್ಬಳ್ಳಿ, ಜನವರಿ, 04: ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿ ಇತ್ತೀಚೆಗಷ್ಟೇ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಇದೀಗ ಮತ್ತೆ ಹುಬ್ಬಳ್ಳಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಅಂಚಟಗೇರಿ, ಬ್ಯಾಹಟ್ಟಿ, ಶಿರಗುಪ್ಪಿ ಮತ್ತು ನೂಲ್ವಿ ಶಾಖೆಗಳಲ್ಲಿ ಜನವರಿ 5ರಿಂದ 14ರವರೆಗೆ ಫೀಡರ್‌ಗಳ ತುರ್ತು ನಿರ್ವಹಣಾ ಕಾರ್ಯ ನಡೆಯಲಿದೆ. ಆದ್ದರಿಂದ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದೆ. ಜನವರಿ 5ರಂದು ವರೂರ, ಅರಳಿಕಟ್ಟಿ, ಅಗಡಿ, ಶೆರೆವಾಡ, ತಿರುಮಲ ಕೊಪ್ಪ, ಪಾಲಿಕೊಪ್ಪ, ಕಂಪ್ಲಿಕೊಪ್ಪ, ಕುರಡಿಕೇರಿ, ಕರಡಿಕೊಪ್ಪ, ಪಾಳೆಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 6 ರಂದು ದೇವರಗುಡಿಹಾಳ, ರೇವಡಿ ಹಾಳ, ಪರಸಾಪುರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 7ರಂದು ಕೊಟಗುಂಡಹುನಸಿ, ಕುಂದಗೋಳ ಅದರಗುಂಚಿ, ನೂಲ್ವಿ, ಶೆರೆವಾಡ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 8ರಂದು ರಾಯನಾಳ, ಗಂಗಿವಾಳ, ಅಂಚಟಗೇರಿ, ದೇವರ ಗುಡಿಹಾಳ, ರೇವಡಿಹಾಳ, ಪರಸಾಪುರ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 9ರಂದು ಬ್ಯಾಹಟ್ಟಿ, ಎಲ್‌ಫಿನ್‌ ಬಡಾವಣೆ, ಸುಳ್ಯ ಪ್ರದೇಶದಲ್ಲಿ ವ್ಯತ್ಯಯ ಆಗಲಿದೆ.

Power cut in several hubballi city parts from January 5th to 14th, check list of areas

ವಿದ್ಯುತ್‌ ವ್ಯತ್ಯಯ ಆಗಲಿರುವ ಪ್ರದೇಶಗಳು

ಜನವರಿ 10ರಂದು ಕುಸುಗಲ್, ಹೆಬಸೂರ, ಕಿರೇಸೂರ, ಮಾರುತಿ ನಗರ, ವೈಭವ ನಗರ, ದುಂದೂರ, ಬೈದೂರು, ಸನ್ ಸಿಟಿ ಬಡಾವಣೆಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 11ರಂದು ಶಿರಗುಪ್ಪ, 'ನಾಗರಹಳ್ಳಿ, ಮಂಟೂರ, ಬಂಡಿವಾಡ, ಬಮ್ಮಾಪುರ, ಕುಸುಗಲ್ ಸ್ಟೇಷನ್‌ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಜನವರಿ 12ರಂದು ಕೋಳಿವಾಡ, ಮಲ್ಲಿಗವಾಡ, ಉಮಚಗಿ, ಇಂಗಳಹಳ್ಳ ಪ್ರದೇಶದಲ್ಲಿ ವ್ಯತ್ಯಯ ಆಗಲಿದೆ.

Power cut in several hubballi city parts from January 5th to 14th, check list of areas

ಇನ್ನು ಜನವರಿ 13ರಂದು ಕುಂದಗೋಳ ಕ್ರಾಸ್, ಬುಡರಸಿಂಗಿ, ಬೆಳಗಲಿ, ಇನಾಂವೀರಾಪುರ, ಶೆರೆವಾಡ ಕ್ರಾಸ್, ಬೆಳಗಲಿ, ಕ್ರಾಸ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಹಾಗೆಯೇ ಜನವರಿ 14ರಂದು ಚೆವರಗುಡ್ಡ, ಚೆನ್ನಾಪುರ, ರಾಮಾಪುರ, ಮಾವನೂರ, ಕಟ್ಟೂರ, ಗಿರಿಯಾಲ, ಅಂಚಟಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಹುಬ್ಬಳ್ಳಿ ನಗರದ ಜನರು ಮುಂಜಾಗ್ರತೆಗಾಗಿ ಸೂಕ್ತ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವುದು ಉತ್ತಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+