ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ-ವೀರಶೈವ ಬಹಿರಂಗ ಚರ್ಚೆ: ಭದ್ರತೆಗೆ ಪೊಲೀಸ್ ನಕಾರ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 29: ನಗರದಲ್ಲಿ ಡಿಸೆಂಬರ್ 30ರಂದು ಲಿಂಗಾಯತ ಹಾಗೂ ವೀರಶೈವ ಮುಖಂಡರ ಬಹಿರಂಗ ಚರ್ಚೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ವೀರಶೈವ-ಲಿಂಗಾಯತ ವಿವಾದ: ಬಹಿರಂಗ ಚರ್ಚೆಗೆ ಹೊರಟ್ಟಿ ಆಹ್ವಾನವೀರಶೈವ-ಲಿಂಗಾಯತ ವಿವಾದ: ಬಹಿರಂಗ ಚರ್ಚೆಗೆ ಹೊರಟ್ಟಿ ಆಹ್ವಾನ

ಎಂಎಲ್ ಸಿ ಬಸವರಾಜ ಹೊರಟ್ಟಿ ಹಾಗೂ ಮೂರು ಸಾವಿರ ಮಠದ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಹಲವು ಲಿಂಗಾಯತ, ವೀರಶೈವ ಮುಖಂಡರು ಹಮ್ಮಿಕೊಂಡಿದ್ದ ಬಹಿರಂಗ ಚರ್ಚೆಗೆ ಅನುಮತಿ ನೀಡಲು ಪೊಲೀಸ್ ಇಲಾಖೆ ನಿರಾಕರಿಸಿದೆ.

Police denies security for Lingayat discussion

ಪೊಲೀಸ್ ಇಲಾಖೆಗೆ ಉಭಯ ಬಣದ ನಾಯಕರು ಭದ್ರತೆ ನೀಡುವಂತೆ ಕೇಳಿದ್ದರು. ಆದರೆ ಎರಡು ಬಣದವರು ಮೂರು ಸಾವಿರ ಮಠದ ಟ್ರಸ್ಟಿಗಳಿಂದ ಪರವಾನಗಿ ನೀಡಿಲ್ಲ ಹೀಗಾಗಿ ಡಿಸೆಂಬರ್ 30 ರಂದು ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಿರುವುದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ್ ಹೇಳಿದ್ದಾರೆ.

ವೀರಶೈವ ಮಠಾಧೀಶರ ಪರವಾಗಿ ದಿಂಗಾಲೇಶ್ವರ ಶ್ರೀಗಳು ಸೇರಿ 5 ಜನ, ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಬಸವರಾಜ್ ಹೊರಟ್ಟಿ ಸೇರಿದಂತೆ 5ಜನರು ಭಾಗವಹಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಪೊಲೀಸ್ ಇಲಾಖೆಯು ಮೂರು ಸಾವಿರ ಮಠದ ಸ್ವಾಮಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿತ್ತು ಅದಕ್ಕೆ ಅವರು ಉತ್ತರಿಸಿದ್ದಾರೆ.

ಸಭೆ ನಡೆಸುವುದರಿಂದ ಗದ್ದಲವಾದರೆ ಯಾರು ಹೊಣೆ ಹಾಗಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿಯನ್ನು ನಿರಾಕಸರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

English summary
Hubli Dharwad police commissioner M.N.Nagaraj denied for police secirity which open discussion will be held on Lingayat issue in Moorusavir mutt on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X