ಹುಬ್ಬಳ್ಳಿ ಅಂಜುಮನ್ ಕಾಲೇಜು ವೆಬ್ ಹ್ಯಾಕ್ ಹಿಂದೆ ಪಾಕಿಗಳ ಕೈವಾಡ!

ಹುಬ್ಬಳ್ಳಿ, ಜೂನ್ 23: ಇಲ್ಲಿನ ಅಂಜುಮನ್ ಕಾಲೇಜಿನ ವೆಬ್‌ಸೈಟ್ ಹ್ಯಾಕ್ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವೆಬ್‌ಸೈಟ್‌ ಅನ್ನು ಪಾಕ್ ಸೈಬರ್ ಸ್ಕರ್ಜ್ ಎಂಬ ಹೆಸರಿನಲ್ಲಿ ಹ್ಯಾಕ್ ಮಾಡಲಾಗಿದ್ದು, ಇದರಲ್ಲಿನ ಸಂದೇಶಗಳ ಆಧಾರದ ಮೇಲೆ ಈ ಕೃತ್ಯ ಪಾಕಿಸ್ತಾನದ್ದೇ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಕಾಲೇಜಿನ ವಿದ್ಯಾರ್ಥಿಯೊಬ್ಬ ಗುರುವಾರ ಫಲಿತಾಂಶ ನೋಡಲು ಮುಂದಾದಾಗ ಈ ಕೃತ್ಯ ಬಯಲಾಗಿತ್ತು. 'ಗೊ ಮೋದಿ ಗೋ' ಎಂದು ವೆಬ್ ಹ್ಯಾಕರ್ ಗಳು ಮುಖಪುಟದಲ್ಲಿ ಬರೆದಿದ್ದಾರಲ್ಲದೆ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) 45 (1860) 2ನೇ ಸೆಕ್ಷನ್ 18ರ ಪ್ರಕಾರ ಭಾರತ ಎಂದರೆ ಜಮ್ಮು-ಕಾಶ್ಮಿರ ರಾಜ್ಯವನ್ನು ಹೊರತುಪಡಿಸಿ ಉಳಿದ ಭೂ ಪ್ರದೇಶವಾಗಿದೆ. ಈ ರಾಜ್ಯದಲ್ಲಿ ಸೈನ್ಯ ಮತ್ತು ರಕ್ಷಣಾ ಪಡೆಗಳು ನಾಗರಿಕರ ಹತ್ಯೆ ಮಾಡುತ್ತಿರುವುದನ್ನು ಪಾಕ್ ಸೈಬರ್ ಸ್ಕರ್ಜ್ ವಿರೋಧಿಸುತ್ತದೆ.

ಸೈನ್ಯದ ಆಡಳಿತ ಬಯಸದ ಕಾಶ್ಮೀರ

ಸೈನ್ಯದ ಆಡಳಿತ ಬಯಸದ ಕಾಶ್ಮೀರ

ಕಾಶ್ಮೀರ ಸೈನ್ಯದ ಆಡಳಿತ ಬಯಸುವುದಿಲ್ಲ. ಬದಲಾಗಿ ಮಕ್ಕಳನ್ನು ಕೊಲ್ಲುವುದು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಹಾಗೂ ನಾಗರಿಕರನ್ನು ಸೆರೆ ಹಿಡಿಯುವುದರಲ್ಲಿ ತೊಡಗಿವೆ. ಇದರಿಂದ ಅಲ್ಲಿನ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ನಾವು ಯುದ್ಧವನ್ನು ಬಯಸುವುದಿಲ್ಲ.

ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಿ

ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಿ

ಈ ಕಾರಣದಿಂದ ನಿಮ್ಮ ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳಿ. 'ಹಾಲು ಕೇಳಿದರೆ ಪಾಯಸ ಕೊಡುತ್ತೇವೆ. ಕಾಶ್ಮೀರ ಕೇಳಿದರೆ ಸೀಳಿ ಬಿಡುತ್ತೇವೆ' ಎಂಬ ಸಂದೇಶದೊಂದಿಗೆ ಸೈನಿಕರು ಮತ್ತು ಸ್ಥಳೀಯರ ನಡುವಿನ ಸಂಘರ್ಷದ ಫೋಟೊವನ್ನು ವೆಬ್‌ನ ಮುಖಪುಟದಲ್ಲಿ ಹಾಕಿದ್ದಾರೆ.

ಫಲಿತಾಂಶ ನೋಡುವಾಗ ವೆಬ್ ಸೈಟ್ ಹ್ಯಾಕ್ ಬೆಳಕಿಗೆ

ಫಲಿತಾಂಶ ನೋಡುವಾಗ ವೆಬ್ ಸೈಟ್ ಹ್ಯಾಕ್ ಬೆಳಕಿಗೆ

ಫಲಿತಾಂಶ ನೋಡಲು ಕಾಲೇಜಿನ ವೆಬ್‌ಸೈಟ್ ನೋಡಿದಾಗ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಾಲೇಜಿನ ತಾಂತ್ರಿಕ ಸಿಬ್ಬಂದಿಗೆ ತಿಳಿಸಲಾಗಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

ಹಳೆ ಹುಬ್ಬಳ್ಳಿ ಪೊಲೀಸರ ಭೇಟಿ

ಹಳೆ ಹುಬ್ಬಳ್ಳಿ ಪೊಲೀಸರ ಭೇಟಿ

ಈ ಕುರಿತು ಸೈಬರ್ ಕ್ರೈಂ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಂಜುಮನ್ ಕಾಲೇಜಿನ ಪ್ರಾಚಾರ್ಯ ಎಚ್.ಶೇಖ್ ತಿಳಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+