ಹುಬ್ಬಳ್ಳಿ ಮನೆಗಳ್ಳರ ರಾಜಧಾನಿಯಾಗುತ್ತಿದೆಯಾ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 09- ಸರಗಳ್ಳರ ರಾಜಧಾನಿ ಎಂದು ಕುಖ್ಯಾತಿ ಗಳಿಸಿರುವ ಹುಬ್ಬಳ್ಳಿಯಲ್ಲಿ ಮನೆಗಳ್ಳತನ ಪ್ರಕರಣವೊಂದು ದಾಖಲಾಗಿತ್ತು ಈಗ ಮತ್ತೊಂದು ಮನೆಗಳವು ಮಾಡಿದ ಪ್ರಕರಣ ದಾಖಲಾಗಿದೆ.

ಸ್ಥಳೀಯ ಗದಗ ರಸ್ತೆಯ ಮದರ್ ತೆರೆಸಾ ಕಾಲೋನಿಯ ಜಾನ ವಿಲಯಮನ್ಸ್ ನಗದಸಾರಿ ಎಂಬುವವರ ಮನೆಯಲ್ಲಿ 3.5 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು 6 ಸಾವಿರ ರೂ.ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. [ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಹೆದ್ದಾರಿ ದರೋಡೆಕೋರರು]

hubballi


ಮನೆಯಲ್ಲಿದ್ದ ಜಾನ್ ಅವರ ಪತ್ನಿಯು ಸೋಮವಾರ ಬೆಳಗಿನ ಸಮಯದಲ್ಲಿ ಮನೆಯ ಚಿಲಕ ಹಾಕಿ ಬಟ್ಟೆ ಮತ್ತು ಪಾತ್ರೆ ತೊಳೆಯುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಕೈಚಳಕ ತೋರಿಸಿದ್ದಾರೆ. ಕಳ್ಳತನ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ದರೋಡೆ

ಸ್ಥಳೀಯ ಕೇಶ್ವಾಪುರ ಭಾಗದ ಶಿವಗಂಗಾ ಲೇಔಟ್ ನ ಶ್ರೀಕಾಂತ ಮೆಹರವಾಡೆ ಎಂಬವರ ಮನೆ ಕೀಲಿ ಮುರಿದು ಒಳನುಗ್ಗಿದ ಕಳ್ಳರು 8.92 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ. ಹಣವನ್ನು ದೋಚಿಕೊಂಡು ಹೋಗಿದ್ದಾರೆ. [ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

ಶ್ರೀಕಾಂತ ಕೆಲಸಕ್ಕಾಗಿ ಗೋವಾಗೆ ಹೋಗಿದ್ದರು. ಈ ಸಮಯದಲ್ಲಿ ಮನೆಗಳ್ಳತನ ಮಾಡಲಾಗಿದೆ. ಕಳ್ಳರು ಮನೆಯಲ್ಲಿದ್ದ ಎರಡು ಮೊಬೈಲ್ ಫೋನಗಳನ್ನು ಕೂಡ ದೋಚಿದ್ದಾರೆ. ಘಟನೆ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Hubballi witnessed one more house robbery on 09 August 2016. Gadag road Mother Theresa colony house targeted by robbers.
Please Wait while comments are loading...