Breaking; ಹುಬ್ಬಳ್ಳಿ BRTS ಸ್ಮಾರ್ಟ್‌ಕಾರ್ಡ್‌ನಲ್ಲಿ ಭಾರೀ ರಿಯಾಯಿತಿ

ಹುಬ್ಬಳ್ಳಿ, ಡಿಸೆಂಬರ್ 13; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಬಸ್‌ ಪಾಸುಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಿದೆ. ಡಿಸೆಂಬರ್ 15ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಹೇಳಿದೆ.

ವಾಕರಸಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಬಸ್‌ಗಳ BRTS ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಿ. ಆರ್. ಟಿ. ಎಸ್. ಸ್ಮಾರ್ಟ್‌ಕಾರ್ಡ್/ ನಗರ ಮಾಸಿಕ ಪಾಸ್‌ಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಕಡಿಮೆ ದಿನಗಳಿಗೆ ಪಾವತಿಸಿ, ಹೆಚ್ಚಿಗೆ ದಿನಗಳಿಗೆ ಪ್ರಯಾಣಿಸಿ ಎಂದು ಪ್ರಯಾಣಿಕರಿಗೆ ಕರೆ ನೀಡಲಾಗಿದೆ.

NWKRTC announces Discount in City, Sub Urban Monthly Bus Passes As a silver jubilee gift

ಏನಿದು ಯೋಜನೆ?; ಬಿ. ಆರ್. ಟಿ. ಎಸ್ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅನುಷ್ಠಾನಗೊಂಡ ತ್ವರಿತ ನಗರ ಸಾರಿಗೆಯ ಹೆಚ್. ಡಿ. ಬಿ. ಆರ್. ಟಿ. ಎಸ್ ಯೋಜನೆ. ಚಿಗರಿ ಬಸ್ಸುಗಳ ಮೂಲಕ ಸಾರ್ವಜನಿಕ ಸಾರಿಗೆ ಸೇವೆಯನ್ನು ಅವಳಿ ನಗರದಲ್ಲಿ ನೀಡಲಾಗುತ್ತಿದೆ.

NWKRTC announces Discount in City, Sub Urban Monthly Bus Passes As a silver jubilee gift

2018ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. 2020ರಲ್ಲಿ ಎರಡು ವರ್ಷದ ಅವಧಿಯಲ್ಲಿ ಸುಮಾರು 3.35 ಕೋಟಿ ಜನ ಚಿಗರಿ ಬಸ್‍ನಲ್ಲಿ ಪ್ರಯಾಣಿಸಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ನಿತ್ಯ ಪ್ರಯಾಣಕ್ಕಾಗಿ ಈ ಬಸ್‍ಗಳನ್ನು ಅವಲಂಬಿಸಿದ್ದಾರೆ.

ಕಳೆದ ವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವದ ಅಂಗವಾಗಿ ಆಕರ್ಷಕ ದರದಲ್ಲಿ ಬಸ್ ಪಾಸ್ ಘೋಷಣೆ ಮಾಡಿತ್ತು. ಈ ಪಾಸ್ ಮೂಲಕ ಜನರು 20 ದಿನಗಳ ಪ್ರಯಾಣ ವೆಚ್ಚದಲ್ಲಿ 32 ದಿನಗಳ ಕಾಲ ಸಂಚಾರ ನಡೆಸಲು ಅವಕಾಶವಿದೆ. ಈ ಪಾಸ್ ಸಹ ಡಿಸೆಂಬರ್ 15ರಿಂದ ಸಿಗಲಿದೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಕರಸಾಸಂ ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+