ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ನೂರೆಂಟು ವಿಘ್ನ
ಹುಬ್ಬಳ್ಳಿ, ನವೆಂಬರ್ 2: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ನೂರೆಂಟು ವಿಘ್ನಗಳು ಬರುತ್ತಿವೆ. ಇದೀಗ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಪ್ರಸ್ತಾವನೆಯನ್ನು ಕೈಬಿಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಶಿಫಾರಸ್ಸು ಮಾಡಿದೆ.
ಈ ಮಾರ್ಗದಲ್ಲಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸ್ಥಳೀಯರು ಸಾಕಷ್ಟು ಕಷ್ಟಪಟ್ಟಿದ್ದರು, ಈ ಯೋಜನೆಗೆ ಯಳ್ಳು-ನೀರು ಬಿಡುವಂತೆ ಕಾಣುತ್ತಿದೆ.
ಯೋಜನೆ ಸ್ಥಳದ ಪರಿಶೀಲನೆಯನ್ನು ಹುಲಿ ಸಂರಕ್ಷಣಾ ಪ್ರಾಧಿಕಾರ ಈಗಾಗಲೇ ನಡೆಸಿದೆ ಜತೆಗೆ ವರದಿಯನ್ನೂ ನೀಡಿದೆ. ಈ ರೈಲ್ವೆ ಯೋಜನೆಯ ನಿರ್ಮಾಣದಿಂದ ಆಗುವ ಪ್ರಾಣಿಗಳ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶಗಳಮೇಲೆ ಬೀರುವ ದುಷ್ಪರಿಣಾಮಗಳಾಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲಾಗಿತ್ತು,ಅಲ್ಲದೆ ಉದ್ದೇಶಿತ ರೈಲು ಮಾರ್ಗವು ಹುಲಿ ಕಾರಿಡಾರ್‌ನಲ್ಲೂ ಹಾದು ಹೋಗುವುದರಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿತ್ತು.
ರಾಜ್ಯದ ಪ್ರಗತಿಗೆ ಆರ್ಥಿಕ ಅಭಿವೃದ್ಧಿ ಮುಖ್ಯ ಆದರೆ, ಅದು ಪಶ್ಚಿಮಘಟ್ಟದ ಕಾಡುಗಳನ್ನು ನಾಶ ಮಾಡುವಂತೆ ಇರಬಾರದು ಎಂದು ತಿಳಿಸಿದೆ.











Click it and Unblock the Notifications