• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಟ್ರೆಚರ್ ಇಲ್ಲದೇ ಆಕ್ಸಿಜನ್; ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮಗುವಿನ ಆಕ್ರಂದನ

|

ಹುಬ್ಬಳ್ಳಿ, ಮೇ 30: ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ.

ಅಲ್ಲಿನ‌ ಸಿಬ್ಬಂದಿ ಸ್ಟ್ರೆಚರ್ ಪೂರೈಸದ್ದಕ್ಕೆ, ಆಕ್ಸಿಜನ್ ಸಿಲಿಂಡರ್ ಅಳವಡಿಸಿದ ಮಗುವನ್ನು ಮಗುವಿನ ತಂದೆ ಕೈಯಲ್ಲಿಯೇ ಎತ್ತಿಕೊಂಡು ವಾರ್ಡಗೆ ಸಾಗಿಸಿರುವ ಘಟನೆ ಶನಿವಾರ ನಡೆದಿದೆ.

ಲಾಕ್‌ಡೌನ್‌ನಿಂದ ಮದುವೆ ಮುಂದಕ್ಕೆ: ಯುವಕ ಆತ್ಮಹತ್ಯೆಲಾಕ್‌ಡೌನ್‌ನಿಂದ ಮದುವೆ ಮುಂದಕ್ಕೆ: ಯುವಕ ಆತ್ಮಹತ್ಯೆ

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಆಕ್ಸಿಜನ್ ಟ್ಯಾಂಕ್ ಜೊತೆ ತೆಗೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಈ ಮಗು ಕೊಪ್ಪಳ ಮೂಲದಾಗಿದ್ದು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು.‌ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ಸ್ಟ್ರೆಚರ್ ಪೂರೈಸುವಂತೆ ಮಗುವಿನ ಪೋಷಕರು ಕೇಳಿಕೊಂಡರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತನ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಕಿಮ್ಸ್ ನಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಿಸುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

English summary
No Stretcher Provide To Patient By Hubli KIMS Hospital, A Child Shift To ICU Without Oxygen, video Goes Viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X