ವಿದ್ಯುತ್ ಖರೀದಿ ದರ ಬದಲಾವಣೆ ಮಾಡಲ್ಲ : ಡಿಕೆಶಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 20: ಇಡೀ ರಾಜ್ಯದಲ್ಲಿ ಕಂಡು ಬರುತ್ತಿರುವ ವಿದ್ಯುತ್ ಕೊರತೆ ನೀಗಿಸುವ ಸಲುವಾಗಿ ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Dks

ನಗರದ ಗೋಕುಲ ಗಾರ್ಡನ್ ನಲ್ಲಿ ಶನಿವಾರ ನಡೆದ ಹೆಸ್ಕಾಂ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಿಂದ ನಿಯಮಿತದಿಂದ ಆಯ್ಕೆಗೊಂಡ ಎಂಜಿನಿಯರ್ಸ್, ಮಾರ್ಗದಾಳು (ಲೈನಮೆನ್) ಹಾಗೂ ಇತರೆ ಸಿಬ್ಬಂದಿ ತರಬೇತಿ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.[ಸಿದ್ಧಾರೂಢರ ತೆಪ್ಪೋತ್ಸವದಲ್ಲಿ ಖರ್ಜೂರದ ಬದಲು ಮೊಬೈಲ್ ಪುಷ್ಕರಣಿಗೆ]

ಹೊರ ರಾಜ್ಯದಿಂದ ಖರೀದಿಸಲಾಗುವ ವಿದ್ಯುತ್ ಅನ್ನು ಕೃಷಿ ಪಂಪಸೆಟ್ ಗಳಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಆದ್ಯತೆ ಮೇರೆಗೆ ಪೂರೈಸಲಾಗುವುದು ಎಂದು ಸಚಿವರು, ವಿದ್ಯುತ್ ಖರೀದಿಯ ದರ ಮೊದಲಿನಂತೆ ಇರಲಿದೆ. ಅದರಲ್ಲಿ ಏನೂ ಬದಲಾವಣೆ ಮಾಡುವುದಿಲ್ಲ ಎಂದರು.[ಬಿಎಸ್‌ವೈ ಸಿಎಂ ಮಾಡುವೆ : ಕೆ.ಎಸ್.ಈಶ್ವರಪ್ಪ ಯೂ ಟರ್ನ್]

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ, ಜನಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnata state facing power supply problem. Minister D.K.Shivakumar said in Hubballi, government decided to purchase power from other states and supply to agriculture and sugar industries on priority.
Please Wait while comments are loading...