ನನ್ನ ಕೊಲೆಗೆ ಸಂಚು ನಡೆದಿತ್ತು: ಮಗಳ ಕೊಲೆ ಆಯಿತು: ಕಾಂಗ್ರೆಸ್ ಸ್ವಪಕ್ಷದ ವಿರುದ್ಧ ನಿರಂಜನ್ ಹಿರೇಮಠ್ ಕಿಡಿ
ಹುಬ್ಬಳ್ಳಿ, ಮೇ 18: ರಾಜ್ಯಾದ್ಯಂತ ಹುಬ್ಬಳ್ಳಿಯ ಎರಡು ಕೊಲೆಗಳು ಭಾರೀ ಸುದ್ದು ಮಾಡುತ್ತಿವೆ. ನೇಹಾ ಹಿರೇಮಠ್ ಕೊಲೆ ಬಳಿಕ ಕಾಂಗ್ರೆಸ್ ನಾಯಕರ ಹೇಳಿಕೆಗೆ ನೇಹಾ ತಂದೆ ನಿರಂಜನ್ ಹಿರೇಮಠ್ ಅವರ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಇಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ನನ್ನ ಮೇಲೆ ಕೊಲೆ ಸಂಚು ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದರು.
ಅಂಜಲಿ ಕೊಲೆ ಖಂಡಿಸಿ ಮಠಾಧೀಶರ ಜೊತೆಗೆ ನಿರಂಜನ್ ಹಿರೇಮಠ್ ಅವರು ಬೃಹತ್ ಪ್ರತಿಭಟನೆ ನಡೆಸಿದೆ. ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕಗಳ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ತಮ್ಮ ವಿರುದ್ಧ ಕೊಲೆ ಸಂಚು ನಡೆದಿತ್ತು. ಆದರೆ ನನ್ನ ಮಗಳ ಕೊಲೆಯಾಗಿದೆ ಎಂದು ಹೇಳಿದರು.

ಕೊಲೆ, ಕೊಲೆ ಸಂಚು ರಾಜಕೀಯ ಷಡ್ಯಂತ್ರ
ನನ್ನ ಏಳಿಗೆಯನ್ನು ಸಹಿಸದವರು ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು. ಆದರೆ ನನ್ನ ಮಗಳನ್ನು ಕೊಲೆ ಮಾಡಿದರು. ನನ್ನ ವಾರ್ಡ್ನಲ್ಲಿ ಎರಡು ಕೊಲೆಗಳು ಆಗಿವೆ. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದೆ. ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜ್ಯ ಸರ್ಕಾರಕ್ಕೆ ಜತೆಗೆ ರಕ್ಷಣೆ ಕೊಡಲು ಸರ್ಕಾರಕ್ಕೆ ಆಗಲಿಲ್ಲ. ನಮ್ಮ ಜನಾಂಗಕ್ಕೆ ಜನರು ಬೆಲೆ ಕೊಡುತ್ತಾರೆ. ಆದರೆ ಕೆಲವರು ರಾಜಕೀಯ ಮಾಡಿ ಈ ರೀತಿ ಮಾಡುತ್ತಿದ್ದಾರೆ. ಕಾಣದ ಕೈ ಕೆಲಸ ಮಾಡುತ್ತಿವೆ. ಜನರೆ ನನ್ನ ಕೈ ಹಿಡಿದಿದ್ದಾರೆ. ನನ್ನ ವಾರ್ಡ್ನಲ್ಲೇ ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ. ಸರ್ಕಾರ ದಕ್ಷ ಪೊಲೀಸ್ ಅಧಿಕಾರಿ ನೇಮಿಸಬೇಕು. ಸರ್ಕಾರಕ್ಕೆ ಧಮ್ಮು ಇಲ್ಲ, ಅಂದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಗೃಹ ಸಚಿವರು ರಾಜೀನಾಮೆ ಕೊಟ್ಟು ಹೋಗಲಿ
ಕೂಲೆಗಳು ಮುಂದುವರಿದಿವೆ. ನನ್ನ ಮಗಳ ಬಲಿ ಪಡೆದಿದ್ದಕ್ಕೆ ಇಡೀ ಜಗತ್ತು ಆಕ್ರೋಶ ವ್ಯಕ್ತ ಪಡಿಸಿದರು. ಅನೇಕ ರಾಜಕೀಯ ನಾಯಕರು ಮನೆ ಬರುವುದನ್ನು ತಪ್ಪಿಸಿದರು. ರೇವಣ್ಣ ಅವರು ಮನೆ ಬರುತ್ತಿದ್ದರು, ವೀಣಾ ಕಾಶಪ್ಪನವರ ಅವರು ಕೂಡ ಮನೆ ಬರುವುದಾಗಿ ಹೇಳಿದ್ದರು. ಆದರೆ ಅವರನ್ನು ಬರದಂತೆ ತಡೆಯಲಾಯಿತು ಎಂದು ಸ್ವಪಕ್ಷದ ನಾಯಕರ ವಿರುದ್ಧ ಹೆಸರು ಹೇಳದೆ ದೂರಿದರು.
ಈ ವಿಚಾರದಲ್ಲಿ ಯಾರೊಂದಿಗೆ ಯಾರು ಮಾತನಾಡಿದ್ದಾರೆ ಎಂದು ಎಲ್ಲ ಫೋನ್ ರೆಕಾರ್ಡ್ ಇವೆ. ಗೃಹ ಸಚಿವರು ಏಕೆ ಸುಮ್ಮನಿದ್ದಾರೆ. ಕಾರ್ಯ ನಿರ್ವಹಿಸಿದ್ದರೆ ಗೃಹ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಉಗ್ರ ಹೋರಾಟದ ಬಗ್ಗೆ ಎಚ್ಚರಿಕೆ
ಜಂಗಮ, ಅಂಬಿಗರ ಸಮುದಾಯ ಸೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಗೂಂಡಾ, ರೌಡಿ ಶೀಟರ್ಗಳ ದಂಧೆ ಬಂದ್ ಆಗಬೇಕು. ಅಲ್ಲದೆ ರೌಡಿಗಳ ಚಲನವಲನ ಮೇಲೆ ಕಣ್ಣಿಡಬೇಕು. ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು. ಅಂಜಲಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಅವರು ಕುಟುಂಬಕ್ಕೆ ಒಂದು ಮನೆ, ತಾತ್ಕಾಲಿಕ ಕೆಲಸ ನೀಡಬೇಕು. ಈ ಬಗ್ಗೆ ವಾಗ್ದಾನ ಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications