ಹುಬ್ಬಳ್ಳಿಯನ್ನು ಪಾಕಿಸ್ತಾನ ಎಂದಿದ್ದ ಮೌಲ್ವಿ ಪೊಲೀಸ್ ವಶಕ್ಕೆ

Posted By:
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್ 7: ಹುಬ್ಬಳ್ಳಿಯ ಗಣೇಶ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಮುಸ್ಲಿಂ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೌಲ್ವಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಎಂದಿದ್ದ ಮೌಲ್ವಿ ವಿರುದ್ಧ ದೂರು

ಡಿ.2 ರಂದು ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಹಮ್ಮಿಕೊಂಡಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮೌಲ್ವಿ ಮಾತನಾಡಿ, 'ಪಾಕಿಸ್ತಾನ ನೋಡಬೇಕೆಂದರೆ ಅಲ್ಲಿಗೇ ಹೋಗುವ ಅಗತ್ಯವಿಲ್ಲ, ಈ ಗಣೇಶಪೇಟೆಯೂ ನನಗೆ ಪಾಕಿಸ್ತಾನದಂತೇ ಕಾಣುತ್ತದೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿ

Muslim cleric who compares Hubballi's Ganesh Pet with Pakistan arrested

ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ ಖಾನ್‌ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ ಅವರ ಸಮ್ಮುಖದಲ್ಲೇ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದರಿಂದ ಸ್ವತಃ ಎಸಿಪಿ ದಾವೂದ್ ಖಾನ್‌ ಅವರೇ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ವಿರುದ್ಧ ದೂರು ದಾಖಲಿಸಿದ್ದರು.

ಹಿಂದುಪರ ಸಂಘಟನೆಗಳು, ಮೌಲ್ವಿಯ ತಲೆಗೆ 10 ಲಕ್ಷ ಬಹುಮಾನ ಘೋಷಣೆ ಮಾಡಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Muslim cleric Abdul Hameed Khairati arrested and sent to judicial custody for 14 days. He had compared local neighbourhood, 'Ganesh Peth', with Pakistan

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ