• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ ಕುಮಾರ್ ಹುಬ್ಬಳ್ಳಿ ನಿವಾಸದಲ್ಲೀಗ ಗಾಢ ಮೌನ

|

ಹುಬ್ಬಳ್ಳಿ, ನವೆಂಬರ್ 12: ಕೇಂದ್ರ ಸಚಿವ ಅನಂತ ಕುಮಾರ್ ನಿಧನದಿಂದಾಗಿ ಹುಬ್ಬಳ್ಳಿಯ ಅನಂತ ಕುಮಾರ್ ನಿವಾಸದಲ್ಲಿ ಗಾಢ ಮೌನ ಆವರಿಸಿದೆ.

ಹುಬ್ಬಳ್ಳಿಯ ಇಂದಿರಾನಗರದಲ್ಲಿ ಅನಂತ ಕುಮಾರ್ ಅವರ ವಿಭವ ನಿವಾಸವಿದೆ. ಅದು ಅನಂತ ಅವರ ತಂದೆ ನಾರಾಯಣಶಾಸ್ತ್ರಿಯವರು ಕಟ್ಟಿಸಿದ್ದ ಮನೆಯಾಗಿದೆ, ಇದೇ ಮನೆಯಿಂದ ರಾಷ್ಟ್ರಮಟ್ಟದ ನಾಯಕರಾಗಿ ಅನಂತ ಕುಮಾರ್ ಹೊರಹೊಮ್ಮಿದ್ದರು. ಹುಬ್ಬಳ್ಳಿಗೆ ಬಂದಾಗ ವಿಭವ ನಿವಾಸದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು.

ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ

ಅನಂತ ಕುಮಾರ್ ನಿಧನದ ಸುದ್ದಿ ಕೇಳಿ ಅಕ್ಕಪಕ್ಕದ ನಿವಾಸಿಗಳು ತೀವ್ರ ಆತಂಕಗೊಂಡಿದ್ದಾರೆ, ಮನೆಗೆ ಬೀಗ ಹಾಕಿ 15 ದಿನಗಳ ಹಿಂದೆಯೇ ಅನಂತ ಕುಮಾರ್ ಅವರ ಕುಟುಂಬ ಬೆಂಗಳೂರಿಗೆ ತೆರಳಿತ್ತು, ಅನಂತ ಕುಮಾರ್ ಅವರ ಜೊತೆಗಿನ ಒಡನಾಟವನ್ನು ಸ್ಥಳೀಯರು ನೆನೆದು ಕಣ್ಣೀರುಹಾಕಿದ್ದಾರೆ.

ಚಾಮರಾಜಪೇಟೆಯ ಚಿತಾಗಾರದಲ್ಲಿ ನಾಳೆ ಅನಂತ್ ಕುಮಾರ್ ಅಂತ್ಯ ಸಂಸ್ಕಾರ

ಅನಂತ ಕುಮಾರ್ ಅಂತ್ಯಕ್ರಿಯೆ ನವೆಂಬರ್ 13ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನೆರವೇರಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

English summary
After sad demise of union minister Ananth Kumar, mourning and silence was remained at the house in Hubli which was built by his father Narayana Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X