Get Updates
Get notified of breaking news, exclusive insights, and must-see stories!

Hubballi: ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಸಹಮತ ಇದೆ ಎಂದ ಸಂತೋಷ್ ಲಾಡ್

ಬೆಂಗಳೂರು, ಫೆಬ್ರವರಿ 02: ಕೇಂದ್ರದಿಂದ ದಕ್ಷಿಣ ಭಾಗ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಕಾಂಗ್ರೆಸ್‌ ಸಂಸದರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ತಮ್ಮ ನಾಯಕರ ಹೇಳಿಕೆಗಳನ್ನು ಒಬ್ಬೊಬ್ಬರೆ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಡಿಕೆ ಸುರೇಶ್ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಹಣದ ಪ್ರಮಾಣದಲ್ಲಿ ದಕ್ಷಿಣ ಭಾರತರದ ಪಾಲೆಷ್ಟು, ಉತ್ತರ ಭಾರತದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ದಕ್ಷಿಣ ಭಾರತದ ತೆರಿಗೆ ಹಣದಿಂದ ಉತ್ತರ ಭಾರತವನ್ನು ಅಭಿವೃದ್ಧಿ ಪಡಿಸುವ ವಿಚಾರಕ್ಕೆ ನನ್ನದೂ ವಿರೋಧವಿದೆ. ಇದೇ ವಿಚಾರವನ್ನು ಡಿಕೆ ಸುರೇಶ್ ಅವರು ಹೇಳಿದ್ದಾರೆ ಎಂದರು.

Minister Santosh Lad Support to South Parts Separate Country statement of MP DK Suresh

ದಿನಂಪ್ರತಿ ಸಂವಿಧಾನ ಬದಲಿಸುವ, ತಿದ್ದುಪಡಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರದ್ದೂ ಭಾರತ ಒಡೆಯುವ ಯೋಚನೆಯೇ. ಈ ಹಿಂದೆಯೂ ಹಲವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಆಗ್ರಹಿಸಿದ್ದರು. ಅದು ಅವರ ಅಭಿಪ್ರಾಯ.

2014ರ ನಂತರ ಮೊದಲಿನಂತೆ ಅನುದಾನ ಬರುತ್ತಿಲ್ಲ

2014ರ ಮೊದಲು ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ನೀಡುತ್ತಿದ್ದ ಅನುದಾನ 2014ರ ನಂತರ ದೊರೆಯುತ್ತಿಲ್ಲ. ದೇಶದ 80ಕೋಟಿ ಜನರಿಗೆ ಅಕ್ಕಿ ಕೊಡುವುದು ನಮ್ಮ ಯೋಜನೆ. ಇಂದಿರಾ ಗಾಂಧಿ ಕಾಲದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾದಾಗಿನಿಂದ ಅಕ್ಕಿ ಕೊಡುತ್ತಿದ್ದೇವೆ. ಆದರೆ, ಈಗ ಪ್ರಧಾನಿ ಮೋದಿ ತಾವು ಅಕ್ಕಿ ಕೊಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ.

Minister Santosh Lad Support to South Parts Separate Country statement of MP DK Suresh

ವಿಧವೆಯರಿಗೆ, ಅಂಗ ವಿಕಲರಿಗೆ, ಹಿರಿಯ ನಾಗರಿಕರಿಗೆ ಮಾಸಾಶನ ನಿಗದಿಯಾಗಿದ್ದು ನಮ್ಮ ಅವಧಿಯಲ್ಲಿ. ಹೀಗಾಗಿ ಬಿಜೆಪಿಗರು ಏನು ಮಾಡಿದ್ದಾರೆ ಎಂಬುದು ಚರ್ಚೆಯಾಗಲಿ. ಮೇಕ್ ಇನ್ ಇಂಡಿಯಾ ಘೋಷಣೆಯಡಿ ಸೂಜಿಯನ್ನೂ ತಯಾರಿಸದ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಗ್ಯಾರೆಂಟಿ : ಬೃಹತ್ ಸಮಾವೇಶ ಆಯೋಜನೆ?

ಜನರಿಗೆ ಕಾಂಗ್ರೆಸ್, ಬಿಜೆಪಿ ಮುಖ್ಯವಲ್ಲ‌. ಅವರ ಕಷ್ಟಗಳಿಗೆ ಮಿಡುಯುವ, ಕಣ್ಣೀರು ಒರೆಸುವವರೇ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಇದರಿಂದ ಜನ ಸಂತೋಷವಾಗಿದ್ದಾರೆ. ತಾಂತ್ರಿಕ ಕಾರಣಗಳಿಂದ ಶೇ.4ರಷ್ಟು ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಅನುದಾನ ತಲುಪಿಲ್ಲ. ಅವರನ್ನೂ ಯೋಜನೆಗೆ ಒಳಪಡಿಸುವ ಉದ್ದೇಶದಿಂದ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿವಾಗ ಅವರ ಜೊತೆ ಪಕ್ಷಕ್ಕೆ ಯಾರೂ ಬಂದಿಲ್ಲ. ಯಾರೂ ಬಾರದೇ ಇದ್ದಾಗ ಕಾಂಗ್ರೆಸ್‌ನಿಂದ ಮತ್ತೆ ಬಿಜೆಪಿಗೆ ಬೇರೆಯವರು ಹೋಗುವ ಪ್ರಶ್ನೆಯೇ ಬರಲ್ಲ. ಶೆಟ್ಟರ ಜೊತೆ ಕಾಂಗ್ರೆಸ್ ಸೇರಿದವರನ್ನು ನಾನು ನೋಡಿಲ್ಲ. ಹೀಗಾಗಿ ಶೆಟ್ಟರ ಹಿಂದೆ ಯಾರೂ ಹೋಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರ ಪತನ ವಿಚಾರ :ಲಾಡ್ ಕಿಡಿ

ರಾಜ್ಯದಲ್ಲಿ ಸರ್ಕಾರ ಪತನವಾಗಲಿದೆ ಎನ್ನವುದನ್ನು ಬಿಟ್ಟರೆ, ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ. ಲೋಕಸಭಾ ಚುನಾವನೆ ಎದುರಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಇಲ್ಲಿಗೆ ಬರುತ್ತಾರೆ. ಅವರು ಸಹ ಸರ್ಕಾರ ಪತನ ಆಗತ್ತದೆ ಎಂದು ಹೇಳಿದರೆ, ಅದಕ್ಕೆ ನಾವು ಏನು ಹೇಳಬೇಕು. ಸರ್ಕಾರ ಪತನ ಆಗುವುದೇ ಇವರಿಗೆ ಮುಖ್ಯವಾಗಿದೆಯಾ?. ಇವರು ಯಾಕೆ ಪದೇ ಪದೆ ಹೇಳುತ್ತಾರೆ. ಆಗುವುದಿದ್ದರೆ ಪತನ ಆಗುತ್ತದೆ ಎಂದು ಸಚಿವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+