ಒಂದು ಚಿಕ್ಕ ಕಾರಣಕ್ಕೆ ಜೀವ ಬಿಟ್ಟ ಹುಬ್ಬಳ್ಳಿಯ ಈ ಪ್ರೇಮಿಗಳು
ಹುಬ್ಬಳ್ಳಿ, ನವೆಂಬರ್ 28: ಪ್ರಿಯಕರ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕನೂ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ನಿನ್ನೆ ನಡೆದಿದೆ.
ರೇಖಾ (19) ವಿಷ ಸೇವಿಸಿದ ಯುವತಿಯಾಗಿದ್ದು, ವಿಷ್ಣು ಪಗಲಾಪುರ (20) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಇವರಿಬ್ಬರು ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಮೊದಮೊದಲು ಇವರ ಪ್ರೀತಿಗೆ ವಿರೋಧ ಎದುರಾಗಿದ್ದು, ನಂತರ ಎರಡೂ ಮನೆಯವರು ಸೇರಿ ಐದು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದರು. ಮುಂದಿನ ಏಪ್ರಿಲ್ 24ಕ್ಕೆ ಮದುವೆ ದಿನಾಂಕವನ್ನು ನಿಶ್ಚಯ ಮಾಡಲಾಗಿತ್ತು.

ಆದರೆ ನಿನ್ನೆ ರೇಖಾ, ವಿಷ್ಣುಗೆ ದಿನವಿಡೀ ಫೋನ್ ಕರೆ ಮಾಡಿದ್ದಾಳೆ. ಆದರೆ ವಿಷ್ಣು ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿಯುತ್ತಿದಂತೆ ತನ್ನ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣಿಗೆ ಕೊರಳೊಡ್ಡಿದ್ದಾನೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications