ಲಾಕ್ ಡೌನ್; ಕರ್ನಾಟಕಕ್ಕೆ ಸಾಗಣೆಯಾದ ಸರಕುಗಳು ಎಷ್ಟು ಗೊತ್ತ?

ಹುಬ್ಬಳ್ಳಿ, ಮೇ 10 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾಗಿದೆ. ಪ್ರಯಾಣಿಕ ರೈಲುಗಳ ಸಂಚಾರ ಸಂಪೂರ್ಣ ರದ್ದಾಗಿದೆ. ಆದರೆ, ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲು ಭಾರತೀಯ ರೈಲು ಗೂಡ್ಸ್ ಮತ್ತು ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ.

ಲಾಕ್ ಡೌನ್ ಅವಧಿಯಲ್ಲಿ ರೈಲ್ವೆ ಆಹಾರ, ಕಾಳು, ಕಲ್ಲಿದ್ದಲು, ಗೊಬ್ಬರ, ಪೆಟ್ರೋಲಿಂ ಉತ್ಪನ್ನ, ಎಲ್‌ಪಿಜಿ, ಸಿಮೆಂಟ್, ಕಬ್ಬಿಣ ಸೇರಿದಂತೆ ಅನೇಕ ಉತ್ಪನ್ನಗಳನ್ನು ವಿವಿಧ ರಾಜ್ಯಗಳಿಗೆ ಸಾಗಾಟ ಮಾಡಿದೆ. ಮಾರ್ಚ್ 24ರಿಂದ ಮೇ 5ರ ತನಕ 7,02,000 ಟನ್ ಸರಕುಗಳನ್ನು ಕರ್ನಾಟಕಕ್ಕೆ ಸಾಗಣೆ ಮಾಡಲಾಗಿದೆ.

ಆಹಾರ ಪದಾರ್ಥಗಳಾದ ಅಕ್ಕಿ, ಗೋಧಿ, ಭತ್ತವನ್ನು ರಾಜ್ಯಕ್ಕೆ ಹೆಚ್ಚಾಗಿ ಸರಬರಾಜು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ. ವೈಟ್‌ ಫೀಲ್ಡ್, ಕೆ. ಆರ್. ಪುರಂ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅವುಗಳನ್ನು ಇಳಿಸಲಾಗಿದೆ.

ಇನ್ನು ರೈತರಿಗಾಗಿ 10,400 ಟನ್ ಅಲೂಗಡ್ಡೆಯನ್ನು ಹಾಸನ ಜಿಲ್ಲೆಯೊಂದಕ್ಕೆ ಸಾಗಣೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ 4 rake ಸಕ್ಕರೆಯನ್ನು ರೈಲ್ವೆ ಬೇರೆ ಕರೆಗೆ ಸಾಗಣೆ ಮಾಡಿದೆ.

ಕೃಷಿ ಚಟುವಟಿಕೆಗೆ ಗೊಬ್ಬರ

ಕೃಷಿ ಚಟುವಟಿಕೆಗೆ ಗೊಬ್ಬರ

ಲಾಕ್ ಡೌನ್ ಅವಧಿಯಲ್ಲಿ 3,12,000 ಟನ್ ಗೊಬ್ಬರ ಮತ್ತು ಕೃಷಿ ಉತ್ಪನ್ನಗಳನ್ನು ರೈತರಿಗಾಗಿ ಸಾಗಣೆ ಮಾಡಲಾಗಿದೆ. ಮೈಸೂರು, ಮಂಡ್ಯ, ತುಮಕೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ವಿಜಯಪುರ, ಕೊಪ್ಪಳದಲ್ಲಿ ಗೊಬ್ಬರವನ್ನು ಇಳಿಸಲಾಗಿದೆ.

ರೈಲಿನಲ್ಲಿ ಸಿಮೆಂಟ್ ಸಾಗಣೆ

ರೈಲಿನಲ್ಲಿ ಸಿಮೆಂಟ್ ಸಾಗಣೆ

ನೈಋತ್ಯ ರೈಲ್ವೆ 1,27,400 ಟನ್ ಸಿಮೆಂಟ್‌ ಅನ್ನು ಲಾಕ್ ಡೌನ್ ಅವಧಿಯಲ್ಲಿ ಸಾಗಣೆ ಮಾಡಿದೆ. ದೊಡ್ಡಬಳ್ಳಾಪುರ, ತುಮಕೂರು, ಮೈಸೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸಿಮೆಂಟ್ ಇಳಿಸಲಾಗಿದೆ.

90 rake ಗಳ ಸಾಗಣೆ

90 rake ಗಳ ಸಾಗಣೆ

ಲಾಕ್ ಡೌನ್ ಸಂದರ್ಭದಲ್ಲಿ ನೈಋತ್ಯ ರೈಲ್ವೆ 90 rake ಪೆಟ್ರೋಲಿಯಂ ಉತ್ಪನ್ನಗಳನ್ನು ಕರ್ನಾಟಕಕ್ಕೆ ಸಾಗಣೆ ಮಾಡಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಮೈಸೂರಿನಲ್ಲಿ ಇವುಗಳನ್ನು ಇಳಿಸಲಾಗಿದ್ದು, ಪೆಟ್ರೋಲಿಯಂ ಉತ್ಪನ್ನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ಪ್ರಯಾಣಿಕ ರೈಲು ಸಂಚಾರವಿಲ್ಲ

ಪ್ರಯಾಣಿಕ ರೈಲು ಸಂಚಾರವಿಲ್ಲ

ಲಾಕ್ ಡೌನ್ ಜಾರಿಗೆ ಬಂದ ಬಳಿಕ ಪ್ರಯಾಣಿಕ ರೈಲು ಸಂಚಾರ ಸಂಪೂರ್ಣ ರದ್ದುಗೊಂಡಿದೆ. ಮೇ 17ರ ತನಕ ಯಾವುದೇ ಪ್ರಯಾಣಿಕ ರೈಲು ಸಂಚಾರ ನಡೆಸುವುದಿಲ್ಲ ಎಂದು ರೈಲ್ವೆ ಈಗಾಗಲೇ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+