ಪಠ್ಯಕ್ರಮದಲ್ಲಿ ವೀರ ಮಹಿಳೆಯರ ಕುರಿತ ಪಾಠ: ಸಿಎಂ

ಹುಬ್ಬಳ್ಳಿ ಫೆಬ್ರವರಿ 28: ಇನ್ನೇನು ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (ಮಾರ್ಚ್8) ದೇಶದಾದ್ಯಂತ ಆಚರಿಸಲಾಗುತ್ತದೆ. ಈ ನಡುವೆ ಶಾಲಾ ಪಠ್ಯಕ್ರಮದಲ್ಲಿ ನಾಡಿನ ವೀರ ಮಹಿಳೆಯರ ಕುರಿತ ಪಾಠಗಳ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಇಂದು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಇಂದು ಬೆಳವಡಿ ಮಲ್ಲಮ್ಮ ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ 374 ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ನಾಡಿನ ವೀರ ಮಹಿಳೆಯರಾದ ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮನ, ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಕುರಿತಾದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು. ಜೊತೆಗೆ ಬೆಳವಡಿಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಿನ್ನೆ ಕೆಳದಿ ಚನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷದ ಆಚರಣೆಯನ್ನೂ ಮಾಡಿದ್ದೇವೆ. ಕರ್ನಾಟಕಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದು ಇಂದಿನ ಪೀಳಿಗೆಗೆ ತಿಳಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ ಮೊದಲುಗೊಂಡು ಮಹಿಳೆಯರ ಪಾತ್ರವನ್ನು ಪ್ರಮುಖವಾಗಿ ಯುವಜನಾಂಗ ಕ್ಕೆ ತಿಳಿಸುವ ಕೆಲಸವಾಗಬೇಕು. ಮುಂದಿನ ವರ್ಷ ಬೆಳವಡಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದರು.

 Lesson on Heroic Women in Curriculum: CM

ಈ ಸಂಸ್ಥಾನ ಬೆಳೆದು ಬಂದ ರೀತಿ, ಶಿವಾಜಿ ಮಹಾರಾಜರ ವಿರುದ್ಧ ಅವರ ಹೋರಾಟದ ಬಗ್ಗೆ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳಿಗೆ ಅಪಾರ ಜ್ಞಾನವಿದೆ. ಅವರ ಕಳಕಳಿ, ನಾಡಿನ ಬಗ್ಗೆ ಅವರ ಪ್ರೀತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿಗೆ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಶಾಸಕ ಅರುಣ್ ಶಾಹಪುರ, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಮತ್ತು ಇತರರು ಉಪಸ್ಥಿತರಿದ್ದರು.

ಪ್ರತಿವರ್ಷ ಜಾಗತಿಕವಾಗಿ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ವೃತ್ತಿಪರ ಪರಿಸರದಲ್ಲಿ ಅವರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ, ಎಲ್ಲಾ ಹಂತದ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಈ ದಿನ ಆಚರಿಸುತ್ತದೆ. ಮಾರ್ಚ್ 8 ರಂದು ಜಗತ್ತಿನ ಮೂಲೆ ಮೂಲೆಯ ಮಹಿಳೆಯರು ಒಟ್ಟಿಗೆ ಸೇರುತ್ತಾರೆ, ಇದು ಲಿಂಗ ಸಮಾನತೆಯನ್ನು ವೇಗಗೊಳಿಸುವ ಕ್ರಿಯೆಯ ಕರೆಯಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ ಫೆಬ್ರವರಿ 28, 1909 ರಿಂದ ಆರಂಭವಾಯಿತು ಎಂದು ಹೇಳಬಹುದು. ಆಗ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥ ಅಮೆರಿಕದ ಸಮಾಜವಾದಿ ಪಕ್ಷವು ಮಾರ್ಚ್ 8, 1909 ಅನ್ನು ನಿಗದಿಪಡಿಸಿತ್ತು. ಆದರೆ ಅಂತಾರಾಷ್ಟ್ರೀಯ ಮಹಿಳಾ ದಿನ ಎನ್ನುವ ಪದವನ್ನು ಆನಂತರ ಬಳಸಲಾಯಿತು. ವಿಶ್ವದಾದ್ಯಂತ ಮೊದಲ ಅಧಿಕೃತ ಆಚರಣೆಗಳು 1911 ರಲ್ಲಿ ನಡೆದವು, ಈ ಸಂದರ್ಭದಲ್ಲಿ ಹಲವಾರು ಯುರೋಪಿಯನ್ ದೇಶಗಳ ಮಹಿಳೆಯರು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಮತದಾನದ ಹಕ್ಕನ್ನು ಮತ್ತು ಸಾರ್ವಜನಿಕ ಕಚೇರಿಗಳನ್ನು ಹೊಂದುವ ಹಕ್ಕನ್ನು ಕೋರಲು ಲಕ್ಷಾಂತರ ಮಹಿಳೆಯರು ಈ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೆ ಕಾಲಾಂತರದಲ್ಲಿ ಇದು ಮಹಿಳೆಗೆ ಸಂಬಂಧಿತ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಲು ಮಹತ್ವದ ಪಾತ್ರವನ್ನು ವಹಿಸಿತು. ಅದರಲ್ಲಿ ಪ್ರಮುಖವಾಗಿ ಉದ್ಯೋಗದಲ್ಲಿನ ಲಿಂಗ ತಾರತಮ್ಯ, ಸಮಾನ ವೇತನ ಇಂತಹ ಸಂಗತಿಗಳೆಲ್ಲಾ ಚರ್ಚೆಗೆ ಬಂದವು. ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಮತ್ತೊಂದು ಮಹತ್ವದ ಕಾರಣವೆಂದರೆ, ಈ ದಿನವೇ, ಸೇಂಟ್ ಪೀಟರ್ಸ್ಬರ್‌ಗ್‌ನಲ್ಲಿ ಮಹಿಳಾ ಜವಳಿ ಕಾರ್ಮಿಕರು ಪ್ರತಿಭಟನೆಗಾಗಿ ಬೀದಿಗಿಳಿದರು ಮತ್ತು ಈ ಕಾರ್ಯವು ರಷ್ಯಾದ ಕ್ರಾಂತಿಗೆ ಪೂರಕ ಶಕ್ತಿಯಾಯಿತು.ಅಂತಿಮವಾಗಿ ಮುಂದೆ ಈ ದಿನವನ್ನು ವಿಶ್ವಸಂಸ್ಥೆಯು ಗುರುತಿಸಿತು ಮತ್ತು ಅದನ್ನು 1967 ರಿಂದ ಆಚರಿಸಲು ಪ್ರಾರಂಭಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+